ಕಟ್ಟು ಮಸ್ತಾಗಿ ದೇಹ ದಂಡಿಸೋಕೆ ಜಿಮ್​ಗಳು ಓಪನ್.. ನಗರದಲ್ಲಿ ಭರ್ಜರಿ ತಯಾರಿ

| Updated By: ಸಾಧು ಶ್ರೀನಾಥ್​

Updated on: Jul 30, 2020 | 9:55 AM

ಬೆಂಗಳೂರು: ಅನ್​ಲಾಕ್ 3.0 ನಲ್ಲಿ ಜಿಮ್‌ ತೆರೆಯಲು ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಕೊರೊನಾ ಸಂಕಷ್ಟದಿಂದ ಬಂದ್ ಆಗಿದ್ದ ಜಿಮ್ ಬಾಗಿಲು ಈಗ ತೆರೆಯುತ್ತಿವೆ. ಜಿಮ್​ಗಳಿಲ್ಲದೆ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿದ್ದ‌ವರು ಮತ್ತೆ ಜಿಮ್​ಗಳಲ್ಲಿ ತಮ್ಮ ವ್ಯಾಯಾಮ ಶುರು ಮಾಡಬಹುದು. ಹೀಗಾಗಿ ಸದ್ಯ ನಗರದಲ್ಲಿ ಎಲ್ಲ ರೀತಿಯ ಸಿದ್ಧತೆ ಹಾಗೂ ಮುಂಜಾಗ್ರತೆ ಕ್ರಮಗಳ ಜೊತೆ ಜಿಮ್‌ ಓಪನಿಂಗ್​ಗೆ ಭರ್ಜರಿ ತಯಾರಿ ಮಾಡ್ಕೊತಿದ್ದಾರೆ. ಅನ್​ಲಾಕ್ ಮಾಡುದ್ರೂ ಎಲ್ಲವೂ ಮೊದಲಿನಂತೆ ಇರುವುದಿಲ್ಲ ಸರ್ಕಾರದ ಕೆಲ ನಿಯಮಗಳನ್ನು ಪಾಲಿಸಲೇ ಬೇಕು. ಹಾಗಾಗಿ ಜಿಮ್​ನಲ್ಲಿ ಬ್ಯಾಚ್​ಗಳ […]

ಕಟ್ಟು ಮಸ್ತಾಗಿ ದೇಹ ದಂಡಿಸೋಕೆ ಜಿಮ್​ಗಳು ಓಪನ್.. ನಗರದಲ್ಲಿ ಭರ್ಜರಿ ತಯಾರಿ
Follow us on

ಬೆಂಗಳೂರು: ಅನ್​ಲಾಕ್ 3.0 ನಲ್ಲಿ ಜಿಮ್‌ ತೆರೆಯಲು ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಕೊರೊನಾ ಸಂಕಷ್ಟದಿಂದ ಬಂದ್ ಆಗಿದ್ದ ಜಿಮ್ ಬಾಗಿಲು ಈಗ ತೆರೆಯುತ್ತಿವೆ. ಜಿಮ್​ಗಳಿಲ್ಲದೆ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿದ್ದ‌ವರು ಮತ್ತೆ ಜಿಮ್​ಗಳಲ್ಲಿ ತಮ್ಮ ವ್ಯಾಯಾಮ ಶುರು ಮಾಡಬಹುದು. ಹೀಗಾಗಿ ಸದ್ಯ ನಗರದಲ್ಲಿ ಎಲ್ಲ ರೀತಿಯ ಸಿದ್ಧತೆ ಹಾಗೂ ಮುಂಜಾಗ್ರತೆ ಕ್ರಮಗಳ ಜೊತೆ ಜಿಮ್‌ ಓಪನಿಂಗ್​ಗೆ ಭರ್ಜರಿ ತಯಾರಿ ಮಾಡ್ಕೊತಿದ್ದಾರೆ.

ಅನ್​ಲಾಕ್ ಮಾಡುದ್ರೂ ಎಲ್ಲವೂ ಮೊದಲಿನಂತೆ ಇರುವುದಿಲ್ಲ ಸರ್ಕಾರದ ಕೆಲ ನಿಯಮಗಳನ್ನು ಪಾಲಿಸಲೇ ಬೇಕು. ಹಾಗಾಗಿ ಜಿಮ್​ನಲ್ಲಿ ಬ್ಯಾಚ್​ಗಳ ಮೂಲಕ ಕಡಿಮೆ ಜನ್ರು ಬರುಬಂತೆ ನೋಡಿಕೊಳ್ಳೋಕೆ ಪ್ಲಾನ್ ಮಾಡಲಾಗಿದೆ. ಜಿಮ್​ಗೆ ಬರುವವರು ಸ್ಯಾನಿಟೈಸರ್, ಮಾಸ್ಕ್ ಬಳಸುವುದು ಕಡ್ಡಾಯ. 1 ಘಂಟೆಗೆ 10 ರಿಂದ 15 ಜನ್ರಿಗೆ ಜಿಮ್ ಮಾಡೋಕೆ ಅವಕಾಶ ನೀಡಲಾಗುತ್ತೆ.

ಕೊರೊನಾ ಹೊಡೆತಕ್ಕೆ ಸಿಕ್ಕಿ ನಲುಗಿದ್ದ ಜಿಮ್ ಉದ್ಯಮ‌ ಈಗ ಚೇತರಿಸಿಕೊಳ್ಳೋಕೆ ತಯಾರಿ ನಡೆಸಿದೆ. ಇಷ್ಟು ದಿನ ಸುಮ್ಮನಿದ್ದವರು ಈಗ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸದ್ಯ ಮಾಲೀಕರು ತಮ್ಮ ಜಿಮ್​ಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ, ಸ್ವಚ್ಚ ಮಾಡಿ ಸಿದ್ದತೆ ಮಾಡಿಕೊಳ್ತಿದ್ದಾರೆ.

Published On - 8:53 am, Thu, 30 July 20