‘ಬೆಂಗಳೂರು-ಮಂಗಳೂರಿನಲ್ಲಿ ಸೈಟ್, ಮೃತ ಮಗನ ಹೆಸರಲ್ಲೂ ಸೈಟ್ ಅಲಾಟ್’

ಕೊಡಗು: ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾಯಣ ಅಚಾರ್ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ನಾರಾಯಣ ಅಚಾರ್ ಆಸ್ತಿ ಬಗ್ಗೆ ಆಪ್ತ ಸತೀಶ್ ಟಿವಿ9ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮನೆ ನೆಲಸಮ ಜಾಗದಲ್ಲಿ ಸಾಕಷ್ಟು ಸಂಪತ್ತು ಇರಬಹುದು ನಾರಾಯಣ ಅಚಾರ್ ಸಾಕಷ್ಟು ಆಸ್ತಿಯನ್ನು ಹೊಂದಿದ್ದರಂತೆ. ವಿದೇಶದಲ್ಲಿರುವ ಮಗಳ ಮನೆಗೆ ಹೋಗೋ ವೇಳೆ ಲಾಕರ್​ನಲ್ಲಿ ಸಾಕಷ್ಟು ಚಿನ್ನ ಇಟ್ಟಿದ್ರು. ವಿದೇಶದಿಂದ ಬಂದ ಬಳಿಕ ಚಿನ್ನವನ್ನ ಲಾಕರ್ ನಿಂದ ಬಿಡಿಸಿದ್ದರು. ಈ ಬಗ್ಗೆ ಸ್ಥಳೀಯ ಮೂಲಗಳಿಂದ ಮಾಹಿತಿ ಸಿಕ್ಕಿದೆ. […]

‘ಬೆಂಗಳೂರು-ಮಂಗಳೂರಿನಲ್ಲಿ ಸೈಟ್, ಮೃತ ಮಗನ ಹೆಸರಲ್ಲೂ ಸೈಟ್  ಅಲಾಟ್’
Edited By:

Updated on: Aug 11, 2020 | 11:41 AM

ಕೊಡಗು: ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾಯಣ ಅಚಾರ್ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ನಾರಾಯಣ ಅಚಾರ್ ಆಸ್ತಿ ಬಗ್ಗೆ ಆಪ್ತ ಸತೀಶ್ ಟಿವಿ9ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮನೆ ನೆಲಸಮ ಜಾಗದಲ್ಲಿ ಸಾಕಷ್ಟು ಸಂಪತ್ತು ಇರಬಹುದು
ನಾರಾಯಣ ಅಚಾರ್ ಸಾಕಷ್ಟು ಆಸ್ತಿಯನ್ನು ಹೊಂದಿದ್ದರಂತೆ. ವಿದೇಶದಲ್ಲಿರುವ ಮಗಳ ಮನೆಗೆ ಹೋಗೋ ವೇಳೆ ಲಾಕರ್​ನಲ್ಲಿ ಸಾಕಷ್ಟು ಚಿನ್ನ ಇಟ್ಟಿದ್ರು. ವಿದೇಶದಿಂದ ಬಂದ ಬಳಿಕ ಚಿನ್ನವನ್ನ ಲಾಕರ್ ನಿಂದ ಬಿಡಿಸಿದ್ದರು. ಈ ಬಗ್ಗೆ ಸ್ಥಳೀಯ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಮನೆ ನೆಲಸಮ ಆದ ಜಾಗದಲ್ಲಿ ಸಾಕಷ್ಟು ಸಂಪತ್ತು ಇದ್ದಿರಬಹುದು ಅನ್ನೋ ಮಾಹಿತಿಯೂ ಇದೆ. ಆದ್ರೆ ಎಷ್ಟು ಇದೆ ಅನ್ನೋ ಬಗ್ಗೆ ಖಚಿತ ಮಾಹಿತಿ ಇಲ್ಲ. ಬೆಂಗಳೂರು, ಮಂಗಳೂರಿನಲ್ಲಿ ನಾರಾಯಣ ಅಚಾರ್ ನಿವೇಶನ ಹೊಂದಿದ್ದರು. ಮೃತ ಮಗನ ಹೆಸರಲ್ಲಿ ಬೆಂಗಳೂರಿನಲ್ಲಿ ಸೈಟ್ ಅಲಾಟ್ ಆಗಿತ್ತು. ಬಳಿಕ ನಾರಾಯಣ ಅಚಾರ್ ಬೆಂಗಳೂರಿನಲ್ಲಿ ಮನೆ ನಿರ್ಮಿಸಿದ್ದರು. ಈ ರೀತಿ ಅರ್ಚಕ ನಾರಾಯಣ ಅಚಾರ್ ಅನೇಕ ಕಡೆ ಅಸ್ತಿ ಹೊಂದಿದ್ದರು ಎಂಬುದರ ಬಗ್ಗೆಯೂ ಮಾಹಿತಿ ಸಿಕ್ಕಿದೆ.

ಬ್ರಹ್ಮಗಿರಿ ಬೆಟ್ಟ ಕುಸಿತ, ಕಾಣೆಯಾದ ಆಚಾರ್ಯ ಕುಟುಂಬದ ಒಬ್ಬರ ದೇಹ ಪತ್ತೆ

Published On - 11:40 am, Tue, 11 August 20