ಮತ್ತದೇ.. BBMP ನಿರ್ಲಕ್ಷ್ಯ! ಪಾಸಿಟೀವ್ ಬಂದು 3 ದಿನ ಆದರೂ ಸಿಗ್ತಾಯಿಲ್ಲ ಚಿಕಿತ್ಸೆ
ಬೆಂಗಳೂರು: ಕೊರೊನಾ ಸೋಂಕು ಧೃಡಪಟ್ಟು ಮೂರು ದಿನ ಕಳೆದಿದ್ದರೂ, ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ವೀರಸಂದ್ರದಲ್ಲಿ ನೆಲೆಸಿರುವ ಇಬ್ಬರು ಸ್ನೇಹಿತರು ಇದೇ ತಿಂಗಳು 8 ನೇ ತಾರೀಖಿನಂದು ಎಚ್ಎಸ್ಆರ್ ಲೇಔಟ್ನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರು, ಟೆಸ್ಟ್ನಲ್ಲಿ ಪಾಸಿಟಿವ್ ವರದಿ ಬಂದಿದೆ. ತದನಂತರ ಮತ್ತೊಮ್ಮೆ ನಾರಾಯಣ ಹೃದಯಾಲಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ ಆದರೆ ಅಲ್ಲೂ ಸಹ ಪಾಸಿಟಿವ್ ವರದಿ ಬಂದಿದೆ. […]

ಬೆಂಗಳೂರು: ಕೊರೊನಾ ಸೋಂಕು ಧೃಡಪಟ್ಟು ಮೂರು ದಿನ ಕಳೆದಿದ್ದರೂ, ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ವೀರಸಂದ್ರದಲ್ಲಿ ನೆಲೆಸಿರುವ ಇಬ್ಬರು ಸ್ನೇಹಿತರು ಇದೇ ತಿಂಗಳು 8 ನೇ ತಾರೀಖಿನಂದು ಎಚ್ಎಸ್ಆರ್ ಲೇಔಟ್ನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರು, ಟೆಸ್ಟ್ನಲ್ಲಿ ಪಾಸಿಟಿವ್ ವರದಿ ಬಂದಿದೆ. ತದನಂತರ ಮತ್ತೊಮ್ಮೆ ನಾರಾಯಣ ಹೃದಯಾಲಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ ಆದರೆ ಅಲ್ಲೂ ಸಹ ಪಾಸಿಟಿವ್ ವರದಿ ಬಂದಿದೆ.
ಹೀಗಾಗಿ ಇಬ್ಬರು ಯುವಕರು ತಮ್ಮನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿ ಎಂದು ಬಿಬಿಎಂಪಿ ಹೆಲ್ಪ್ ಲೈನ್ ಗೆ ಕರೆ ಮಾಡಿದ್ದಾರೆ.ಆದರೆ BBMP ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಇದರಿಂದಾಗಿ ಮೂರು ದಿನಗಳಿಂದ ಮನೆಯಲ್ಲಿಯೇ ನರಳುತ್ತಿರುವ ಸೋಂಕಿತರು, ಮನೆಯಿಂದ ಹೊರಗೆ ಹೋಗಲಾಗದೆ, ದಿನನಿತ್ಯದ ವಸ್ತುಗಳನ್ನು ಖರೀದಿಸಲಾಗದೇ ಪರದಾಡುವಂತಹ ಸ್ಥಿತಿ ಎದುರಾಗಿದೆ.




