ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯ: ತೆಂಗಿನ ಮರದಿಂದ ಜಿಗಿದು ಕೈದಿ ಆತ್ಮಹತ್ಯೆ

|

Updated on: Jan 26, 2020 | 12:02 PM

ಧಾರವಾಡ: ತೆಂಗಿನ ಮರದ ಮೇಲಿಂದ ಹಾರಿ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ನಿವಾಸಿ ಚೇತನ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 2015ರಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣದಲ್ಲಿ ಚೇತನ್ ಕುಮಾರ್ ಬಂಧಿತನಾಗಿದ್ದ. ನ್ಯಾಯಾಲಯ ಚೇತನ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ಹೈಕೋರ್ಟ್ ಮೊರೆ ಹೋಗಿದ್ದ. ಕಳೆದ 5 ವರ್ಷಗಳಿಂದ ಜೈಲಿನಲ್ಲಿರುವ ಚೇತನ್, 6 ತಿಂಗಳ ಹಿಂದೆ […]

ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯ: ತೆಂಗಿನ ಮರದಿಂದ ಜಿಗಿದು ಕೈದಿ ಆತ್ಮಹತ್ಯೆ
Follow us on

ಧಾರವಾಡ: ತೆಂಗಿನ ಮರದ ಮೇಲಿಂದ ಹಾರಿ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ನಿವಾಸಿ ಚೇತನ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

2015ರಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣದಲ್ಲಿ ಚೇತನ್ ಕುಮಾರ್ ಬಂಧಿತನಾಗಿದ್ದ. ನ್ಯಾಯಾಲಯ ಚೇತನ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ಹೈಕೋರ್ಟ್ ಮೊರೆ ಹೋಗಿದ್ದ. ಕಳೆದ 5 ವರ್ಷಗಳಿಂದ ಜೈಲಿನಲ್ಲಿರುವ ಚೇತನ್, 6 ತಿಂಗಳ ಹಿಂದೆ ಬಳ್ಳಾರಿ ಜೈಲಿನಿಂದ ಧಾರವಾಡ ಜೈಲಿಗೆ ಶಿಫ್ಟ್ ಆಗಿದ್ದ.

ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯಿಸಿ ಕಳೆದ ವಾರವೂ ಚೇತನ್ ತೆಂಗಿನ ಮರವೇರಿದ್ದ. ಇಂದೂ ಸಹ ಮರವೇರಿ ಚೇತನ್‌ ಕುಮಾರ್ ಜಿಗಿದಿದ್ದಾನೆ. ಈ ವೇಳೆ ತಲೆಗೆ ತೀವ್ರ ಪೆಟ್ಟಾದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಚೇತನ್ ಮೃತಪಟ್ಟಿದ್ದಾನೆ.