ಇನ್ಮುಂದೆ ಕಿಮ್ಸ್​ನಲ್ಲಿ NO ವೆಂಟಿಲೇಟರ್​ ಸಮಸ್ಯೆ: ಖಾಸಗಿ ಕಂಪನಿಯಿಂದ 200 ವೆಂಟಿಲೇಟರ್ ಗಿಫ್ಟ್!

|

Updated on: Nov 05, 2020 | 12:13 PM

ಹುಬ್ಬಳ್ಳಿ: ಕೊರೊನಾ ಸಮಯದಲ್ಲಿ ಉತ್ತಮವಾಗಿ ಚಿಕಿತ್ಸೆ ನೀಡಿ ಕಿಮ್ಸ್ ಸೈ ಎನಿಸಿಕೊಂಡಿದೆ. ಆದ್ರೆ ಇಲ್ಲಿ ವೆಂಟಿಲೇಟರ್ ಕೊರತೆಯಿಂದ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಅದರಲ್ಲೂ ಪ್ರತಿದಿನವೂ 6-7 ಜನ ಕೊರೊನಾ ಸೋಂಕಿತರು ಉಸಿರಾಟ ತೊಂದರೆಯಿಂದ ಸಾಯುತ್ತಿದ್ದರು. ಸದ್ಯ ವೆಂಟಿಲೇಟರ್ ಸಮಸ್ಯೆಗೆ ಮುಕ್ತಿ ಹಾಡಲಾಗಿದೆ. ಹೌದು ಕೊನೆಗೂ ಇಷ್ಟು ದಿನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯನ್ನ ಕಾಡುತ್ತಿದ್ದ ಬಹುದೊಡ್ಡ ಸಮಸ್ಯೆ ಕೊನೆಗೂ ಅಂತ್ಯಗೊಳ್ಳುವ ಕಾಲ ಬಂದಿದೆ. ಇಷ್ಟು ದಿನ ಕಿಮ್ಸ್​ನಲ್ಲಿ ಕೊರೊನಾ ರೋಗಿಗಳು ವೆಂಟಿಲೇಟರ್ ಸಂಬಂಧ ಸಾವನ್ನಪ್ಪಿ ಬಹಳಷ್ಟು ರಾದ್ದಾಂತಗಳಾಗಿದ್ದವು. ಆದ್ರೆ […]

ಇನ್ಮುಂದೆ ಕಿಮ್ಸ್​ನಲ್ಲಿ NO ವೆಂಟಿಲೇಟರ್​ ಸಮಸ್ಯೆ: ಖಾಸಗಿ ಕಂಪನಿಯಿಂದ 200 ವೆಂಟಿಲೇಟರ್ ಗಿಫ್ಟ್!
Follow us on

ಹುಬ್ಬಳ್ಳಿ: ಕೊರೊನಾ ಸಮಯದಲ್ಲಿ ಉತ್ತಮವಾಗಿ ಚಿಕಿತ್ಸೆ ನೀಡಿ ಕಿಮ್ಸ್ ಸೈ ಎನಿಸಿಕೊಂಡಿದೆ. ಆದ್ರೆ ಇಲ್ಲಿ ವೆಂಟಿಲೇಟರ್ ಕೊರತೆಯಿಂದ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಅದರಲ್ಲೂ ಪ್ರತಿದಿನವೂ 6-7 ಜನ ಕೊರೊನಾ ಸೋಂಕಿತರು ಉಸಿರಾಟ ತೊಂದರೆಯಿಂದ ಸಾಯುತ್ತಿದ್ದರು. ಸದ್ಯ ವೆಂಟಿಲೇಟರ್ ಸಮಸ್ಯೆಗೆ ಮುಕ್ತಿ ಹಾಡಲಾಗಿದೆ.

ಹೌದು ಕೊನೆಗೂ ಇಷ್ಟು ದಿನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯನ್ನ ಕಾಡುತ್ತಿದ್ದ ಬಹುದೊಡ್ಡ ಸಮಸ್ಯೆ ಕೊನೆಗೂ ಅಂತ್ಯಗೊಳ್ಳುವ ಕಾಲ ಬಂದಿದೆ. ಇಷ್ಟು ದಿನ ಕಿಮ್ಸ್​ನಲ್ಲಿ ಕೊರೊನಾ ರೋಗಿಗಳು ವೆಂಟಿಲೇಟರ್ ಸಂಬಂಧ ಸಾವನ್ನಪ್ಪಿ ಬಹಳಷ್ಟು ರಾದ್ದಾಂತಗಳಾಗಿದ್ದವು. ಆದ್ರೆ ಕಿಮ್ಸ್ ಆಡಳಿತ ಮಂಡಳಿ ಸರ್ಕಾರಕ್ಕೆ ಎಷ್ಟ ಭಾರಿ ಮನವಿ ಮಾಡಿದ್ರು ಕೂಡಾ ಸರ್ಕಾರ ಸೂಕ್ತ ಸಮಯದಲ್ಲಿ ಮತ್ತು ವೆಂಟಿಲೇಟರ್​ಗಳನ್ನ ನೀಡಿರಲಿಲ್ಲ.

ಕಿಮ್ಸ್ ಗೆ 200 ಪೋರ್ಟಬಲ್ ವೆಂಟಿಲೇಟರ್​ಗಳು:
ಹೀಗಾಗಿ ಪ್ರತಿ ದಿನವೂ 6 ರಿಂದ 7 ಜನ ಸಾಯುತ್ತಿದ್ದರು. ಆದ್ರೆ ಸದ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮೇರೆಗೆ ಖಾಸಗಿ ಕಂಪನಿಯೊಂದು ಕಿಮ್ಸ್ ಗೆ 200 ಪೋರ್ಟಬಲ್ ವೆಂಟಿಲೇಟರ್​ಗಳನ್ನ ನೀಡಿದೆ. ಸದ್ಯ ಈಗ ಕೊರೊನಾ ಕೇಸ್ ಕೂಡಾ ಕಡಿಮೆಯಾಗಿವೆ. ಹೀಗಾಗಿ ಬೇರೆ ರೋಗಿಗಳಿಗೆ ಈ ವೆಂಟಿಲೇಟರ್ ಬಳಕೆ ಮಾಡಿಕೊಳ್ಳಲು ಕಿಮ್ಸ್ ನಿರ್ಧರಿಸಿದೆ. ಮುಂದೆ ಹೆಚ್ಚಿನ ಕೊರೊನಾ ಸೋಂಕಿತರು ಕಿಮ್ಸ್​ಗೆ ದಾಖಲಾದ್ರೆ ವೆಂಟಿಲೇಟರ್ ಸಮಸ್ಯೆ ಇರುವುದಿಲ್ಲ.

ಈ ಕೆಲಸವನ್ನು ಸರ್ಕಾರ ಮೊದಲೆ ಮಾಡಿದ್ರೆ ಎಷ್ಟೋ ಜನರ ಜೀವ ಉಳಿಯುತ್ತಿತ್ತು. ಒಂದು ಹಂತದಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಕಿಮ್ಸ್​ನಲ್ಲಿ ಕೊರೊನಾ ರೋಗಿಗಳಿಗೆ ಬೆಡ್​ಗಳು ಸಿಗುತ್ತಿರಲಿಲ್ಲ. ಹೀಗಾಗಿ ಸರಣಿ ಸಾವುಗಳು ಸಂಭವಿಸುತ್ತಿದ್ದವು. ಅಲ್ಲದೆ ಕಿಮ್ಸ್ ತನ್ನ ಬಳಿಯಿದ್ದ ಎಲ್ಲಾ 100 ವೆಂಟಿಲೆಟರನ್ನ ಕೇವಲ ಕೊರೊನಾ ಸೋಂಕಿತರಿಗಾಗಿಯೇ ಬಳಸುತ್ತಿತ್ತು. ಇನ್ನು ಕೊರೊನಾ ಆರಂಭದಲ್ಲಿ‌ ದೇಶದಲ್ಲಿ ಒಂದು ಕೋವಿಡ್ ಲ್ಯಾಬ್ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಪ್ರಸ್ತುತ 2000 ಲ್ಯಾಬ್​ಗಳಲ್ಲಿ ದಿನವೊಂದಕ್ಕೆ ಒಂದು ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪಿ.ಪಿ.ಕಿಟ್ ಹಾಗೂ ವೆಂಟಿಲೇಟರ್, ಅಗತ್ಯ ಔಷಧಗಳನ್ನು ಹೊರದೇಶಕ್ಕೆ ರಫ್ತು ಮಾಡುವ ಹಂತಕ್ಕೆ ಬಂದಿದ್ದೇವೆ.

ಪ್ರಧಾನ ಮಂತ್ರಿ ಆಶಯದಂತೆ ಆತ್ಮ ನಿರ್ಭರ ಭಾರತ ನಿರ್ಮಾಣ ಮಾಡಲಾಗುವುದು. ಕೋವಿಡ್ ಸಂದರ್ಭದಲ್ಲಿ ಕಾರ್ಪೋರೆಟ್ ಕಂಪನಿಗಳು ಸಾರ್ವಜನಿಕ ಹೊಣೆಗಾರಿಕೆ ನಿಧಿಯಡಿ ಸಾಕಷ್ಟು ಸಹಾಯವನ್ನು ನೀಡಿವೆ. ಕೋಲ್ ಇಂಡಿಯಾ 5 ಕೋಟಿ ರೂಪಾಯಿ, ಐಓಸಿಎಲ್ 50 ಲಕ್ಷ ರುಪಾಯಿಗಳ ಧನ ಸಹಾಯ ನೀಡಿವೆ. ಏಕಸ್ ಸಂಸ್ಥೆ ಈ ಮೊದಲು 4 ವೆಂಟಿಲೇಟರ್​ಗಳನ್ನು ಕಿಮ್ಸ್​ಗೆ ನೀಡಿತ್ತು. ಈಗ ತಾನೇ ಖುದ್ದು ತಯಾರಿಸಿದ 200 ಪೋರ್ಟಬಲ್ ವೆಂಟಿಲೇಟರನ್ನು ಖಾಸಗಿ ಕಂಪನಿ ಉಚಿತವಾಗಿ ನೀಡಿದೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ರು.

ಸದ್ಯ ಖಾಸಗಿ ಕಂಪನಿ ತಾನೇ ಖುದ್ದು ತಯಾರಿಸಿದ ವೆಂಟಿಲೇಟರ್​ಗಳನ್ನ ಕಿಮ್ಸ್​ಗೆ ನೀಡಿದೆ. ಅಲ್ಲದೆ ಈ ಭಾಗದ ಬಡರೋಗಿಗಳಿಗೂ ಇದು ಆಶಾದಾಯಕವಾಗಿದೆ. ಯಾಕಂದ್ರೆ ಉತ್ತರ ಕರ್ನಾಟಕ ಬಡ ರೋಗಿಗಳಿಗೆ ಕಿಮ್ಸ್ ಒಂದು ಹಂತದಲ್ಲಿ ಜೀವರಕ್ಷಕ ಎನ್ನುತ್ತಾರೆ.