ಫೀ ಬರೆ ಹಾಕ್ತಿರೋ ಖಾಸಗಿ ಶಾಲೆ, ಇಲ್ಲಾಂದ್ರೆ TC ಕೊಟ್ಟಿಕಳಿಸೋ ಬೆದರಿಕೆ!

| Updated By:

Updated on: Jul 08, 2020 | 4:31 PM

ಬೆಂಗಳೂರು: ನಗರದ ಕೆಲ ಖಾಸಗಿ ಶಾಲೆಗಳು ಕೊರೊನಾ ಸಂಕಷ್ಟದ ನಡುವೆ ಫೀಸ್ ದಂಧೆ ಶುರು ಮಾಡಿವೆ. ಫೀಸ್ ಹೆಸರಲ್ಲಿ ಬಡವರ ಮೇಲೆ ಬರೆ ಹಾಕುತ್ತಿವೆ. ಇದೇ ರೀತಿ ಆರ್.ಟಿ. ನಗರದ ನಿವಾಸಿಯೊಬ್ಬರು ತನ್ನ ಇಬ್ಬರು ಮಕ್ಕಳ ಫೀಸ್ ಕಟ್ಟಲು ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಫೀಸ್ ಕಟ್ಟೋಕೆ ದುಡ್ಡಿಲ್ಲ ಅಂದ್ರೆ ಟಿ.ಸಿ ಕೊಡ್ತೀವಿ ಅಂತ ಖಾಸಗಿ ಶಾಲೆ ಬೆದರಿಕೆ ಹಾಕಿದೆಯಂತೆ. ತನ್ನ ಇಬ್ಬರು ಮಕ್ಕಳಿಗೆ 50 ಸಾವಿರಕ್ಕೂ ಹೆಚ್ಚು ಫೀಸ್ ಕಟ್ಟಬೇಕಿದೆ. ಜೊತೆಗೆ ಆನ್​ಲೈನ್ ಕ್ಲಾಸ್​ಗಾಗಿ ಇಬ್ಬರಿಗೂ 2 […]

ಫೀ ಬರೆ ಹಾಕ್ತಿರೋ ಖಾಸಗಿ ಶಾಲೆ, ಇಲ್ಲಾಂದ್ರೆ TC ಕೊಟ್ಟಿಕಳಿಸೋ ಬೆದರಿಕೆ!
ಸಂಗ್ರಹ ಚಿತ್ರ
Follow us on

ಬೆಂಗಳೂರು: ನಗರದ ಕೆಲ ಖಾಸಗಿ ಶಾಲೆಗಳು ಕೊರೊನಾ ಸಂಕಷ್ಟದ ನಡುವೆ ಫೀಸ್ ದಂಧೆ ಶುರು ಮಾಡಿವೆ. ಫೀಸ್ ಹೆಸರಲ್ಲಿ ಬಡವರ ಮೇಲೆ ಬರೆ ಹಾಕುತ್ತಿವೆ. ಇದೇ ರೀತಿ ಆರ್.ಟಿ. ನಗರದ ನಿವಾಸಿಯೊಬ್ಬರು ತನ್ನ ಇಬ್ಬರು ಮಕ್ಕಳ ಫೀಸ್ ಕಟ್ಟಲು ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ.

ಫೀಸ್ ಕಟ್ಟೋಕೆ ದುಡ್ಡಿಲ್ಲ ಅಂದ್ರೆ ಟಿ.ಸಿ ಕೊಡ್ತೀವಿ ಅಂತ ಖಾಸಗಿ ಶಾಲೆ ಬೆದರಿಕೆ ಹಾಕಿದೆಯಂತೆ. ತನ್ನ ಇಬ್ಬರು ಮಕ್ಕಳಿಗೆ 50 ಸಾವಿರಕ್ಕೂ ಹೆಚ್ಚು ಫೀಸ್ ಕಟ್ಟಬೇಕಿದೆ. ಜೊತೆಗೆ ಆನ್​ಲೈನ್ ಕ್ಲಾಸ್​ಗಾಗಿ ಇಬ್ಬರಿಗೂ 2 ಸ್ಮಾರ್ಟ್ ಫೋನ್ ಖರೀದಿಸಬೇಕು. ಇದನ್ನ ಹೇಳಿದ್ರೆ ಶಾಲೆ ಅವ್ರು ಅದು ನಿಮ್ಮ ಸಮಸ್ಯೆ ಅಂತಾರೆ. ಲಾಕ್​ಡೌನ್​ನಿಂದಾಗಿ ನನಗೆ ಕೆಲಸ ಇಲ್ಲ. ಆದಾಯ ಇಲ್ಲ. ಇಂತಹ ಸಮಯದಲ್ಲಿ ಫೀಸ್ ಕಟ್ಟಿ ಅಂದ್ರೆ ಹೇಗೆ ಕಟ್ಟೋದು ಎಂದು ಗೋಳಾಡಿದ್ದಾರೆ.

ಇವರ ಇಬ್ಬರು ಮಕ್ಕಳಿಗೆ ಶಾಲೆ ಇಲ್ಲದಿದ್ದರೂ ಯುನಿಫಾರ್ಮ್, ಬುಕ್ಸ್​ಗೆ ಹಣ ಕಟ್ಟಿಸಿಕೊಂಡಿದ್ದಾರೆ. ಶಾಲೆಯೇ ಕ್ಲೋಸ್ ಆಗಿದ್ದರು ಯುನಿಫಾರ್ಮ್ ಕೊಟ್ಟಿದ್ದಾರೆ. ಆದ್ರೆ ಫೀಸ್ ಕಟ್ಟಿಲ್ಲ ಅಂತ ನೋಟ್ಸ್ ಕಳಿಸ್ತಾ ಇಲ್ಲವಂತೆ. ಈ ರೀತಿ ಖಾಸಗಿ ಶಾಲೆಗಳು ಪೋಷಕರಿಗೆ ಒತ್ತಡ ಹಾಕುತ್ತಿವೆ.

Published On - 1:00 pm, Wed, 8 July 20