
ದಾವಣಗೆರೆ: ಜಿಲ್ಲೆಯ ರೈತ ಸಂಘದ ಹಿರಿಯ ಹೋರಾಟಗಾರ GH ಶಿವಾನಂದಪ್ಪ (67) ವಿಧಿವಶರಾಗಿದ್ದಾರೆ. ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಶಿವಾನಂದಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ಬಳಿ ಜಿ.ಹೆಚ್. ಶಿವಾನಂದಪ್ಪ ನಿಧನರಾಗಿದ್ದಾರೆ. ಎದೆನೋವು ಎಂದು ಹೇಳಿ ಕುಸಿದುಬಿದ್ದಿದ್ದ ಶಿವಾನಂದಪ್ಪರನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಬರುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಶಿವಾನಂದಪ್ಪ ರಾಜ್ಯ ರೈತ ಸಂಘದಲ್ಲಿ ಕಳೆದ 4 ದಶಕಗಳ ಕಾಲ ಸಕ್ರಿಯರಾಗಿದ್ದರು. ಇದೀಗ, ತಮ್ಮ ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಬಿಟ್ಟು ಅಗಲಿದ್ದಾರೆ.
Published On - 5:34 pm, Sat, 26 September 20