AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು Drugs ತಗೊಂಡಿಲ್ಲ ಸರ್.. ದಯವಿಟ್ಟು ನನ್ನನ್ನು ಆರೋಪಿಯನ್ನಾಗಿ ಮಾಡಬೇಡಿ’

ದಕ್ಷಿಣ ಕನ್ನಡ: ಮಂಗಳೂರಿನಲ್ಲಿ CCB ವಿಚಾರಣೆಗೆ ಇಂದು ಹಾಜರಾಗಿದ್ದ ಌಂಕರ್​ ಅನುಶ್ರೀ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು ಎಂದು ತಿಳಿದುಬಂದಿದೆ. ಈ ಮೊದಲು ನಗರದ ಹೊರವಲಯದ ಪಣಂಬೂರಿನಲ್ಲಿರುವ ಮಂಗಳೂರು ಉತ್ತರ ವಿಭಾಗದ ಪೊಲೀಸ್​ ಕಚೇರಿಯಲ್ಲಿ ಌಂಕರ್​ ಅನುಶ್ರೀಗೆ ತನಿಖಾಧಿಕಾರಿಗಳು‌ ತೀವ್ರ ವಿಚಾರಣೆಗೆ ಒಳಪಡಿಸಿದರು. ಬೆಳಗ್ಗೆ 9.30ರಿಂದ ಸತತ ಮೂರು ಗಂಟೆಗಳ ಕಾಲ DCP ವಿನಯ್ ಗಾಂವ್ಕರ್​ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಬಳಿಕ ಌಂಕರ್​ ಅನುಶ್ರೀರನ್ನು CCB ಪೊಲೀಸರು ಮಂಗಳೂರು ಪೊಲೀಸ್ […]

‘ನಾನು Drugs ತಗೊಂಡಿಲ್ಲ ಸರ್.. ದಯವಿಟ್ಟು ನನ್ನನ್ನು ಆರೋಪಿಯನ್ನಾಗಿ ಮಾಡಬೇಡಿ’
KUSHAL V
|

Updated on:Sep 26, 2020 | 4:27 PM

Share

ದಕ್ಷಿಣ ಕನ್ನಡ: ಮಂಗಳೂರಿನಲ್ಲಿ CCB ವಿಚಾರಣೆಗೆ ಇಂದು ಹಾಜರಾಗಿದ್ದ ಌಂಕರ್​ ಅನುಶ್ರೀ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು ಎಂದು ತಿಳಿದುಬಂದಿದೆ. ಈ ಮೊದಲು ನಗರದ ಹೊರವಲಯದ ಪಣಂಬೂರಿನಲ್ಲಿರುವ ಮಂಗಳೂರು ಉತ್ತರ ವಿಭಾಗದ ಪೊಲೀಸ್​ ಕಚೇರಿಯಲ್ಲಿ ಌಂಕರ್​ ಅನುಶ್ರೀಗೆ ತನಿಖಾಧಿಕಾರಿಗಳು‌ ತೀವ್ರ ವಿಚಾರಣೆಗೆ ಒಳಪಡಿಸಿದರು. ಬೆಳಗ್ಗೆ 9.30ರಿಂದ ಸತತ ಮೂರು ಗಂಟೆಗಳ ಕಾಲ DCP ವಿನಯ್ ಗಾಂವ್ಕರ್​ ನೇತೃತ್ವದಲ್ಲಿ ವಿಚಾರಣೆ ನಡೆಯಿತು.

ಬಳಿಕ ಌಂಕರ್​ ಅನುಶ್ರೀರನ್ನು CCB ಪೊಲೀಸರು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಸಹ ಕರೆದೊಯ್ದರು. ಜೊತೆಗೆ, ಅಲ್ಲಿಯೂ ಸಹ ಆಕೆಯನ್ನು ವಿಚಾರಣೆಗೆ ಒಳಪಡಿಸಲಾಯಿತು ಎಂಬ ಮಾಹಿತಿ ಸಿಕ್ಕಿದೆ. ಌಂಕರ್​ ಅನುಶ್ರೀ ವಿಚಾರಣೆಯ ಇನ್​ಸೈಡ್ ಡಿಟೇಲ್ಸ್ ಟಿವಿ 9ಗೆ ಲಭ್ಯವಾಗಿದೆ. ವಿಚಾರಣೆ ವೇಳೆ ಌಂಕರ್​ ಅನುಶ್ರೀ ಕೆಲ ಸತ್ಯ ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ಮೊನ್ನೆ ಮಾಧ್ಯಮಗಳಲ್ಲಿ ತರುಣ್ ಸಿಕ್ಕಿ ಮೂರು ವರ್ಷಗಳೇ ಆಗಿದೆ ಅಂತಾ ಹೇಳಿದ್ದ ಅನುಶ್ರೀ ಪೊಲೀಸ್​ ವಿಚಾರಣೆ ವೇಳೆ ಲಾಕ್​ಡೌನ್​ಗೂ ಮೊದಲು ಆತನನ್ನು ಭೇಟಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರಂತೆ. ಲಾಕ್​ಡೌನ್ ಆಗಲು ಮೂರು ತಿಂಗಳ ಮುಂಚೆ ತರುಣ್ ಸಿಕ್ಕಿದ್ದ. ಆಗ ಇಬ್ಬರು ಬೆಂಗಳೂರಿನಲ್ಲಿ‌ ಮೀಟ್ ಆಗಿದ್ದೆವು ಎಂದು ಹೇಳಿದ್ದಾರಂತೆ. ಌಂಕರ್​ ಅನುಶ್ರೀನ ಕಾಲ್ ಡಿಟೇಲ್ಸ್​ನಿಂದ ಈ ಮಾಹಿತಿ ಬಯಲಾಗುವುದು ಅನ್ನೋ ಕಾರಣದಿಂದ ಆಕೆ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

‘ದಯವಿಟ್ಟು ನನ್ನ ಆರೋಪಿಯನ್ನಾಗಿ ಮಾಡಬೇಡಿ’ ನಾನು ಡ್ರಗ್ಸ್ ತಗೊಂಡಿಲ್ಲ ಸರ್. ಈ ಇಬ್ಬರು ಇಂಥವರು ಅಂತಾ ಗೊತ್ತಿರಲಿಲ್ಲ ಸರ್. ದಯವಿಟ್ಟು ನನನ್ನು ಆರೋಪಿಯನ್ನಾಗಿ ಮಾಡಬೇಡಿ ಅಂತಾ ಌಂಕರ್​ ಅನುಶ್ರೀ ಮನವಿ ಮಾಡಿದರು ಎಂದು ತಿಳಿದುಬಂದಿದೆ. ಜೊತೆಗೆ, ನಾನು ಡ್ರಗ್ಸ್ ಸೇವಿಸಿಲ್ಲ ಅಂತಾ DCP ವಿನಯ್ ಗಾಂವ್ಕರ್​ಗೆ ಌಂಕರ್​ ಅನುಶ್ರೀ ಹೇಳಿದ್ದಾರಂತೆ.

ಇದನ್ನೂ ಓದಿ: ನಿನ್ನೆ ಚಕ್ಕರ್, ಇಂದು ಹಾಜರ್: ಪಣಂಬೂರು ಠಾಣೆಗೆ ಬಂದ ಅನುಶ್ರೀ

Published On - 4:22 pm, Sat, 26 September 20

Follow Us
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
'ಹುಲಿ ಹುಲಿ' ಅಂತಾ ವೀಡಿಯೋ ಮಾಡಿ ಪೊಲೀಸ್ ಕೈಗೆ ತಗಲಾಕ್ಕೊಂಡ ರೀಲ್ಸ್ ಮಂಜು!
'ಹುಲಿ ಹುಲಿ' ಅಂತಾ ವೀಡಿಯೋ ಮಾಡಿ ಪೊಲೀಸ್ ಕೈಗೆ ತಗಲಾಕ್ಕೊಂಡ ರೀಲ್ಸ್ ಮಂಜು!
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಎಲ್​ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಎಲ್​ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಕಾಳಸಂತೆಯಲ್ಲಿ ಸಿಲಿಂಡರ್ ಸೇಲ್ ! ಗ್ಯಾಸ್​ ದಂಧೆಕೋರರ ವಿರುದ್ಧ 3 ಎಫ್​ಐಆರ್
ಕಾಳಸಂತೆಯಲ್ಲಿ ಸಿಲಿಂಡರ್ ಸೇಲ್ ! ಗ್ಯಾಸ್​ ದಂಧೆಕೋರರ ವಿರುದ್ಧ 3 ಎಫ್​ಐಆರ್
ಬನ್ನೇರುಘಟ್ಟ ಝೂಗೆ ಹೊಸ ಅತಿಥಿಗಳ ಆಗಮನ: ಇಲ್ಲಿದೆ ವಿಡಿಯೋ
ಬನ್ನೇರುಘಟ್ಟ ಝೂಗೆ ಹೊಸ ಅತಿಥಿಗಳ ಆಗಮನ: ಇಲ್ಲಿದೆ ವಿಡಿಯೋ
ಜೀ5 ಅಲ್ಲಿ ಬರ್ತಿದೆ ಹೊಸ ವೆಬ್ ಸರಣಿ; ಡಾಲಿ ನಿರ್ಮಾಣ
ಜೀ5 ಅಲ್ಲಿ ಬರ್ತಿದೆ ಹೊಸ ವೆಬ್ ಸರಣಿ; ಡಾಲಿ ನಿರ್ಮಾಣ
ವೀಕೆಂಡ್​ನಲ್ಲೂ ನಂದಿ ಹಿಲ್ಸ್ ಖಾಲಿ! ಊಟ-ತಿಂಡಿ ಸಿಗಲ್ಲ ಎಂದು ಬಾರದ ಜನ
ವೀಕೆಂಡ್​ನಲ್ಲೂ ನಂದಿ ಹಿಲ್ಸ್ ಖಾಲಿ! ಊಟ-ತಿಂಡಿ ಸಿಗಲ್ಲ ಎಂದು ಬಾರದ ಜನ