ವಿಯಪುರ: ದುರಾದೃಷ್ಟ ಯಾವಾಗ, ಹೇಗೆ ಬರುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಕೊರೊನಾ ಕಸಿವಿಸಿಯಲ್ಲಿಯೂ ಪಿಯು ಇಂಗ್ಲಿಷ್ ವಿಷಯದ ಪರೀಕ್ಷೆ ಬರೆದು ನೆಮ್ಮದಿಯಿಂದ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿಯನ್ನ, ವಿಧಿ ಸದ್ದಿಲ್ಲದೆ ತನ್ನೆಡೆ ಸೆಳೆದುಕೊಂಡ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಕೋಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ವಿದ್ಯಾರ್ಥಿ ಮಂಜುನಾಥ್ ರೂಡಗಿಯೇ ಈ ದುರಾದೃಷ್ಟವಂತ. ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆ ಬರೆದು ಇತರ ಮೂವರೊಂದಿಗೆ ಬೈಕ್‌ನಲ್ಲಿ ತಮ್ಮ ಊರಿಗೆ ಹೋಗುವಾಗ ಮಲಘಾನ ಕ್ರಾಸ್ ಬಳಿ ಎನ್ಎಚ್ 218 ರಲ್ಲಿ ಎದುರಿಗೆ ಬಂದ ಕಾರು ಮುಖಾಮಖಿ ಡಿಕ್ಕಿಯಾಗಿದೆ. ಪರಿಣಾಮ ಮಂಜುನಾಥ್ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
ಮಂಜುನಾಥ್‌ನೊಂದಿಗಿದ್ದ ಇತರ ಮೂವರು ವಿದ್ಯಾರ್ಥಿಗಳಾದ ಸಂಗು ಜಮಖಂಡಿ, ನೀಲಪ್ಪ ಜಮಖಂಡಿ, ರಮೇಶ್ ಮೋಹಿತೆಯವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನೆ ಬಳಿಕ ಕಾರ್ ಚಾಲಕ ಪರಾರಿಯಾಗಿದ್ದಾನೆ. ದುರ್ಘಟನೆ ಕುರಿತು ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.