ಆನ್​ಲೈನ್​ನಲ್ಲಿ ಸಿಗುತ್ತಿದೆ ಬೀಟಾ ವರ್ಷನ್​ PUBG; ಇಲ್ಲಿದೆ ಡೌನ್​ಲೋಡ್​ ಲಿಂಕ್

|

Updated on: Dec 30, 2020 | 3:28 PM

ಭದ್ರತಾ ಕಾರಣ ನೀಡಿ ಎರಡನೇ ಹಂತದಲ್ಲಿ ಕೇಂದ್ರ ಸರ್ಕಾರ ಪಬ್​ಜಿ ಗೇಮ್​ ಮೇಲೆ ನಿರ್ಬಂಧ ಹೇರಿತ್ತು. ಇದರಿಂದ ಕೋಟ್ಯಾಂತರ ಪಬ್​ಜಿ ಬಳಕೆದಾರರಿಗೆ ಬೇಸರವಾಗಿತ್ತು. ಆದರೆ ಈಗ ಈ ಬೇಸರ ದೂರವಾಗಿದೆ.

ಆನ್​ಲೈನ್​ನಲ್ಲಿ ಸಿಗುತ್ತಿದೆ ಬೀಟಾ ವರ್ಷನ್​ PUBG; ಇಲ್ಲಿದೆ ಡೌನ್​ಲೋಡ್​ ಲಿಂಕ್
ಪ್ರಾತಿನಿಧಿಕ ಚಿತ್ರ
Follow us on

ಚೀನಾ ಮೂಲದ ಕಂಪನಿಯ ಸಹಭಾಗಿತ್ವ ಹೊಂದಿರುವ ಕಾರಣಕ್ಕೆ ದಕ್ಷಿಣಾ ಕೊರಿಯಾದ PUBG ಗೇಮ್​ ಅನ್ನು ಭಾರತದಲ್ಲಿ ಬ್ಯಾನ್​ ಮಾಡಲಾಗಿತ್ತು. ಈಗ ಚೀನಾದ Tecent ಕಂಪೆನಿಯ ಸಹಭಾಗಿತ್ವವನ್ನು ತೊರೆದು ಪಬ್​ಜಿ ಭಾರತಕ್ಕೆ ಕಾಲಿಡುತ್ತಿದೆ. ಶೀಘ್ರವೇ ಪ್ಲೇಸ್ಟೋರ್​ನಲ್ಲಿ ಈ ಗೇಮ್​ ಲಭ್ಯವಿರಲಿದೆ. ಅದಕ್ಕೂ ಮೊದಲೇ ಈ ಗೇಮ್​ಅನ್ನು ನೀವು ಇನ್​ಸ್ಟಾಲ್​ ಮಾಡಿಕೊಳ್ಳಬಹುದು.

ಭದ್ರತಾ ಕಾರಣ ನೀಡಿ ಎರಡನೇ ಹಂತದಲ್ಲಿ ಕೇಂದ್ರ ಸರ್ಕಾರ ಪಬ್​ಜಿ ಗೇಮ್​ ಮೇಲೆ ನಿರ್ಬಂಧ ಹೇರಿತ್ತು. ಇದರಿಂದ ಕೋಟ್ಯಾಂತರ ಪಬ್​ಜಿ ಬಳಕೆದಾರರಿಗೆ ಬೇಸರವಾಗಿತ್ತು. ಕಳೆದ ಕೆಲ ತಿಂಗಳಿಂದ ಪಬ್​ಜಿ ವಾಪಾಸಾಗಲಿದೆ ಎನ್ನುವ ವಿಚಾರ ಹರಿದಾಡುತ್ತಲೇ ಇದೆ.  ಮೂಲಗಳ ಪ್ರಕಾರ ಜನವರಿ ವೇಳೆಗೆ ಈ ಗೇಮ್​ ಭಾರತಕ್ಕೆ ಕಾಲಿಡಲಿದೆಯಂತೆ.

ಪಬ್​ಜಿ 1.1 ಬೀಟಾ ವರ್ಷನ್​ ಅನ್ನು ಪರಿಚಯಿಸಿದೆ. PUBG BR ಎನ್ನುವ ಹೆಸರನ್ನು ಇದಕ್ಕೆ ಇಡಲಾಗಿದೆ. APK ಆವೃತ್ತಿಯಲ್ಲಿ ಈ ಗೇಮ್​ ಲಭ್ಯವಿದೆ. ಹಾಗಾದರೆ ಇದನ್ನು ಡೌನ್​ಲೋಡ್ ಮಾಡಿಕೊಳ್ಳೋದು ಹೇಗೆ? ಅದಕ್ಕೆ ಇಲ್ಲಿದೆ ಮಾಹಿತಿ.

  • ಮೊದಲು ಈ ಲಿಂಕ್​ ಅನ್ನು ಕ್ಲಿಕ್​ ಮಾಡಬೇಕು
  • ಈ ಫೈಲ್​ ಕೇವಲ 675 ಎಂಬಿ ಇದ್ದು ಹೀಗಾಗಿ ನಿಮ್ಮ ಮೊಬೈಲ್​ನಲ್ಲಿ ಹೆಚ್ಚು ಸ್ಟೋರೇಜ್​ ಬೇಡ
  • ಲಿಂಕ್ ಕ್ಲಿಕ್​ ಮಾಡಿದ ನಂತರ ಡೌನ್​ಲೋಡ್​ ಆಯ್ಕೆ ನಿಮಗೆ ಸಿಗಲಿದೆ.
  • APK ಫೈಲ್​ ಡೌನ್​ಲೋಡ್​ ಮಾಡಿ
  • ನಂತರ ಆ್ಯಪ್​ ಇನ್​ಸ್ಟಾಲ್​ ಮಾಡಿ
  • ಇನ್​ಸ್ಟಾಲ್​ ಆದ ನಂತರ ಗೆಸ್ಟ್​ ಆಯ್ಕೆ ಕ್ಲಿಕ್​ ಮಾಡಿ.. ನಂತರ ಆಟವಾಡಿ.

ಕಿಲ್ಲರ್ ಗೇಮ್! PubG ಆಡಬೇಡ ಎಂದಿದ್ದಕ್ಕೆ ತಂದೆಯ ಕತ್ತನ್ನೇ ಕತ್ತರಿಸಿದ ಮಗ

Published On - 9:10 am, Sat, 26 December 20