ನಂಬಿದ ಸ್ನೇಹಿತನಿಂದಲೇ ನಡೆಯಿತಾ ಮೋಸ? ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್​ನೋಟ್​ನಲ್ಲಿತ್ತು ನೊಂದವನ ಕರುಣಾಜನಕ ಕತೆ

ಲ ವರ್ಷದ ಹಿಂದೆ ಸುನಿಲ್ ಜೋಶಿಗೆ ಆರ್ಥಿಕಸಮಸ್ಯೆ ಉಂಟಾಗಿತ್ತು. ಆಗ ಸುನಿಲ್ ಧಾರವಾಡದ ಕೆವಿಜಿ ಬ್ಯಾಂಕ್ನಲ್ಲಿ ಸಾಲ ಮಾಡಿದ್ನಂತೆ. ಆ ಸಾಲಕ್ಕೆ ಕಾರ್ತಿಕ್ ಜಾಮೀನು ನೀಡಿದ್ದ. ಆದರೆ ಸುನಿಲ್ ಸಾಲ ತೀರಿಸದೇ ಇದ್ದಿದ್ದಕ್ಕೆ ಬ್ಯಾಂಕ್ ಆತನಿಗೆ ನೋಟಿಸ್ ಕೊಟ್ಟಿತ್ತು.

ನಂಬಿದ ಸ್ನೇಹಿತನಿಂದಲೇ ನಡೆಯಿತಾ ಮೋಸ? ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್​ನೋಟ್​ನಲ್ಲಿತ್ತು ನೊಂದವನ ಕರುಣಾಜನಕ ಕತೆ
ಮೃತ ಯುವಕ ಕಾರ್ತಿಕ್ ಕಾಟಕರ್
Follow us
ಪೃಥ್ವಿಶಂಕರ
|

Updated on:Dec 26, 2020 | 9:51 AM

ಧಾರವಾಡ: ಅವರಿಬ್ಬರೂ ಕುಚಿಕುಗಳು. ಒಬ್ಬರಿಗೊಬ್ಬರು ಜೀವ ಬೇಕಾದರೂ ಬಿಡುವಷ್ಟು ಆತ್ಮೀಯತೆ. ಇದೇ ಕಾರಣಕ್ಕೆ ಅದರಲ್ಲಿ ಒಬ್ಬನಿಗೆ ತೊಂದರೆಯಾದಾಗ ಮತ್ತೊಬ್ಬ ಸಹಾಯ ಮಾಡಿದ್ದ. ಆದ್ರೆ ಸಹಾಯ ಪಡೆದ ಗೆಳೆಯ ಮಾತ್ರ ಕೈಕೊಟ್ಟ. ಈ ಕಾರಣಕ್ಕೆ ಸಹಾಯ ಮಾಡಿದ್ದ ಯುವಕ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾನೆ.

ಮೃತ ಯುವಕ ಕಾರ್ತಿಕ ಕಾಟಕರ್

ಈತನ ಹೆಸ್ರು ಕಾರ್ತಿಕ್ ಕಾಟಕರ್. 26 ವರ್ಷದ ಈ ಯುವಕ ಧಾರವಾಡ ನಗರದ ಗಾಂಧಿ ವೃತ್ತದ ಬಳಿಯ ನಿವಾಸಿ. ಲಾಂಡ್ರಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ಕಾರ್ತಿಕ್ ಮಟಮಟ ಮಧ್ಯಾಹ್ನವೇ ಜಗತ್ತನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾನೆ. ಆದ್ರೆ ಇವನ ಆತ್ಮಹತ್ಯೆಗೆ ಕಾರಣ ಮಾತ್ರ ಕರುಣಾಜನಕವಾಗಿದ್ದು, ನಂಬಿದ ಸ್ನೇಹಿತನೇ ಈ ಘಟನೆಗೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸ್ನೇಹದ ಮೇಲೆ ಭರವಸೆ ಇಟ್ಟು ಶ್ಯೂರಿಟಿ ಹಾಕಿದ ಗೆಳೆಯ.. ಹೌದು ಕಾರ್ತಿಕ್ ಕಾಟಕರ್ ಹಾಗೂ ಸುನಿಲ್ ಜೋಶಿ ಎಂಬಾತ ಆತ್ಮೀಯ ಗೆಳೆಯರು. ಕೆಲ ವರ್ಷದ ಹಿಂದೆ ಸುನಿಲ್ ಜೋಶಿಗೆ ಆರ್ಥಿಕಸಮಸ್ಯೆ ಉಂಟಾಗಿತ್ತು. ಆಗ ಸುನಿಲ್ ಧಾರವಾಡದ ಕೆವಿಜಿ ಬ್ಯಾಂಕ್ನಲ್ಲಿ ಸಾಲ ಮಾಡಿದ್ನಂತೆ. ಆ ಸಾಲಕ್ಕೆ ಕಾರ್ತಿಕ್ ಜಾಮೀನು ನೀಡಿದ್ದ. ಆದರೆ ಸುನಿಲ್ ಸಾಲ ತೀರಿಸದೇ ಇದ್ದಿದ್ದಕ್ಕೆ ಬ್ಯಾಂಕ್ ಆತನಿಗೆ ನೋಟಿಸ್ ಕೊಟ್ಟಿತ್ತು. 3 ತಿಂಗಳ ಹಿಂದೆ ಸುನಿಲ್ ಊರು ಬಿಟ್ಟು ಓಡಿ ಹೋಗಿದ್ದಾನಂತೆ. ಆತ ಎಲ್ಲಿದ್ದಾನೆ ಅನ್ನೋದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಸುಮಾರು 4ರಿಂದ 5 ಲಕ್ಷ ಸಾಲವನ್ನು ಇದೀಗ ಕಾರ್ತಿಕ್ ತೀರಿಸೋ ಸ್ಥಿತಿ ನಿರ್ಮಾಣವಾಗಿತ್ತಂತೆ. ಈ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ಕಾರ್ತಿಕ್ ಕಾಟಕರ್ ನೇಣಿಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೂ ಮುನ್ನ ಕಾರ್ತಿಕ್ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಸಾವಿಗೆ ಕಾರಣ ಗೆಳೆಯ ಸುನಿಲ್ ಜೋಶಿ ಅಂತಾ ಸ್ಪಷ್ಟವಾಗಿ ದಾಖಲಿಸಿದ್ದಾನೆ. ಗೆಳೆಯನಾದ ಸುನಿಲ್ ಜೋಶಿ ನನ್ನ ಸಾವಿಗೆ ಕಾರಣ. ಕೆವಿಜಿ ಬ್ಯಾಂಕ್‌ನಲ್ಲಿ ಸುನಿಲ್ ಮಾಡಿದ್ದ ಸಾಲಕ್ಕೆ ಶ್ಯೂರಿಟಿ ಹಾಕಿದ್ದೆ. ಆತ ಬ್ಯಾಂಕ್​ಗೆ ಸಾಲ ಕಟ್ಟದೇ ಇದ್ದಿದ್ದಕ್ಕೆ ಆ ಸಾಲ ನಾನು ತೀರಿಸುವ ಪರಿಸ್ಥಿತಿ ಬಂದಿತ್ತು. ಸುನಿಲ್ ಜೋಶಿ ಕಾರಣದಿಂದಲೇ ನಾನು ಪ್ರಾಣ ಕಳೆದುಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ನಲ್ಲಿ ಬರೆದಿದ್ದಾನೆ ಕಾರ್ತಿಕ್. ಅಲ್ದೆ ಅಣ್ಣ.. ಅಮ್ಮನ ಚೆನ್ನಾಗಿ ನೋಡ್ಕೋ, ನೀನು ಚೆನ್ನಾಗಿರು ಅಂತಾ ಕಾರ್ತಿಕ್ ನೋವನ್ನು ತೋಡಿಕೊಂಡಿದ್ದಾನೆ. ಮತ್ತೊಂದ್ಕಡೆ ಸ್ನೇಹಿತರು ಕಾರ್ತಿಕ್ ಡೆತ್ ನೋಟ್ ನೋಡಿ ಕಂಬನಿ ಮಿಡಿಯುತ್ತಿದ್ದಾರೆ.

ಈ ನಡುವೆ ಕಾರ್ತಿಕ್ ಆತ್ಮಹತ್ಯೆಗೆ ಇದೊಂದೇ ವಿಚಾರ ಕಾರಣವಲ್ಲ ಎನ್ನಲಾಗುತ್ತಿದೆ. ಯಾಕೆಂದರೆ ಕಾರ್ತಿಕ್​ಕೂಡ ಅನೇಕ ಕಡೆ ಸಾಲ ಮಾಡಿದ್ದನಂತೆ. ಆ ಸಾಲದ ಸಮಸ್ಯೆಯೊಂದಿಗೆ ಇದೀಗ ಸುನಿಲ್ ಮಾಡಿದ್ದ ಸಾಲವೂ ಸೇರಿ ಕಾರ್ತಿಕ್ ಇಂತಹ ನಿರ್ಧಾರಕ್ಕೆ ಬಂದಿರೋದು ವಿರ್ಪಯಾಸವೇ ಸರಿ.

ಧಾರವಾಡ: ಗಾಂಧಿ ವೃತ್ತದ ಬಳಿ ಮನೆಯಲ್ಲಿ ಯುವಕ ನೇಣಿಗೆ ಶರಣು

Published On - 9:50 am, Sat, 26 December 20

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್