ಸಕ್ಕರೆ ನಾಡು ಮಂಡ್ಯದಲ್ಲಿ ರೇಶನ್ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಕ್ಕಿಯೂ ಸಿಗುತ್ತಿದೆ!

|

Updated on: Oct 09, 2020 | 10:42 AM

ಮಂಡ್ಯ: ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮತ್ತು ರಬ್ಬರ್ ಕಾಳುಗಳನ್ನು ಮಿಕ್ಸ್ ಮಾಡಲಾಗಿದೆ ಎಂದು ಜಿಲ್ಲೆಯ ಮದ್ದೂರು ತಾಲೂಕಿನ ಗುರುದೇವರಹಳ್ಳಿ ಕಾಲೋನಿ ನಿವಾಸಿಗಳು ಆರೋಪಿಸಿದ್ದಾರೆ. ಈ ತಿಂಗಳು ನೀಡಿರೋ ಪಡಿತರ ಅಕ್ಕಿಯಲ್ಲಿ ವಿಭಿನ್ನ ಮಾದರಿಯ ಕಾಳುಗಳ ಮಿಶ್ರಣವಿದ್ದು ಹಳದಿ ಬಣ್ಣದ ಅಕ್ಕಿ ಕಾಳುಗಳು ಸಿಕ್ಕಿದೆಯಂತೆ. ಇದೀಗ, ಪ್ಲಾಸ್ಟಿಕ್ ಹಾಗೂ ರಬ್ಬರ್ ಮಿಶ್ರತ ಅಕ್ಕಿ ಕಾಳುಗಳನ್ನು ನೋಡಿ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಜೊತೆಗೆ, ಅಕ್ಕಿಯನ್ನು ನೀರಿನಲ್ಲಿ ನೆನೆಸಿದರೆ ಬಣ್ಣ ಬಿಟ್ಟು ಮುದ್ದೆಯಂತೆ ಆಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಹಾಗಾಗಿ, ಅಕ್ಕಿಯನ್ನು ಅಡುಗೆಗೆ […]

ಸಕ್ಕರೆ ನಾಡು ಮಂಡ್ಯದಲ್ಲಿ ರೇಶನ್ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಕ್ಕಿಯೂ ಸಿಗುತ್ತಿದೆ!
Follow us on

ಮಂಡ್ಯ: ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮತ್ತು ರಬ್ಬರ್ ಕಾಳುಗಳನ್ನು ಮಿಕ್ಸ್ ಮಾಡಲಾಗಿದೆ ಎಂದು ಜಿಲ್ಲೆಯ ಮದ್ದೂರು ತಾಲೂಕಿನ ಗುರುದೇವರಹಳ್ಳಿ ಕಾಲೋನಿ ನಿವಾಸಿಗಳು ಆರೋಪಿಸಿದ್ದಾರೆ. ಈ ತಿಂಗಳು ನೀಡಿರೋ ಪಡಿತರ ಅಕ್ಕಿಯಲ್ಲಿ ವಿಭಿನ್ನ ಮಾದರಿಯ ಕಾಳುಗಳ ಮಿಶ್ರಣವಿದ್ದು ಹಳದಿ ಬಣ್ಣದ ಅಕ್ಕಿ ಕಾಳುಗಳು ಸಿಕ್ಕಿದೆಯಂತೆ. ಇದೀಗ, ಪ್ಲಾಸ್ಟಿಕ್ ಹಾಗೂ ರಬ್ಬರ್ ಮಿಶ್ರತ ಅಕ್ಕಿ ಕಾಳುಗಳನ್ನು ನೋಡಿ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಜೊತೆಗೆ, ಅಕ್ಕಿಯನ್ನು ನೀರಿನಲ್ಲಿ ನೆನೆಸಿದರೆ ಬಣ್ಣ ಬಿಟ್ಟು ಮುದ್ದೆಯಂತೆ ಆಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಹಾಗಾಗಿ, ಅಕ್ಕಿಯನ್ನು ಅಡುಗೆಗೆ ಬಳಸಲು ಭಯಪಡುತ್ತಿದ್ದಾರೆ. ಪಡಿತರ ಅಕ್ಕಿಯನ್ನೇ ನಂಬಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತೇವೆ. ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Published On - 10:36 am, Fri, 9 October 20