‘ಮಾದಕ ದುನಿಯಾ’ದಲ್ಲಿ ದೋಸ್ತಿ, ಜೈಲಲ್ಲಿ ದುಶ್ಮನ್: ನಶೆ ರಾಣಿಯರ ಕಿತ್ತಾಟ ಬಲು ಜೋರು!

ಬೆಂಗಳೂರು: ‘ಮಾದಕ ದುನಿಯಾ’ದಲ್ಲಿ ಕುಚಿಕು ಕುಚಿಕು ಆಗಿದ್ದ ನಟಿಮಣಿಯರು ಪರಪ್ಪನ ಅಗ್ರಹಾರದಲ್ಲಿ ದುಶ್ಮನ್ ಅಗಿಬಿಟ್ಟಿದ್ದಾರಂತೆ. ಪರಪ್ಪನ ‘ಪಂಜರ’ದಲ್ಲಿ ಜೈಲು ಹಕ್ಕಿಗಳ ಜಗಳ ‘ಡಿಶುಂ ಡಿಶುಂ’ ಮಟ್ಟಕ್ಕೆ ತಲುಪಿದ್ದಾರಂತೆ. ಅಂದ ಹಾಗೆ, ನಟಿಯರು ಚಿಕ್ಕ ಚಿಕ್ಕ ಮಕ್ಕಳಂತೆ ಕಿತ್ತಾಡಿಕೊಳ್ತಿರೋದು ಯಾಕೆ? ಬೆಳಗ್ಗೆ ಶುರುವಾಗೋ ಜಗಳ ರಾತ್ರಿಯಾದ್ರೂ ಮುಗಿಯುತ್ತಿಲ್ಲ ಯಾಕೆ? ಅಸಲಿಗೆ ನಟಿಮಣಿಯರ ಫೈಟಿಂಗ್​ಗೆ ಕಾರಣವಾದ ವಿಚಾರ ಏನು? ಅದೆಲ್ಲದರ ಕಂಪ್ಲೀಟ್ ಡಿಟೇಲ್ಸ್​ ಟಿವಿ 9ಗೆ ಲಭ್ಯವಾಗಿದೆ. ಕೈದಿಗಳಿಗೆ ನಿತ್ಯ ತಲೆನೋವು ರಾಗಿಣಿ ಹಾಗೂ ಸಂಜನಾ ನಡುವೆ ಜೈಲಿನಲ್ಲಿ ದಿನನಿತ್ಯ […]

‘ಮಾದಕ ದುನಿಯಾ’ದಲ್ಲಿ ದೋಸ್ತಿ, ಜೈಲಲ್ಲಿ ದುಶ್ಮನ್: ನಶೆ ರಾಣಿಯರ ಕಿತ್ತಾಟ ಬಲು ಜೋರು!
ರಾಗಿಣಿ ದ್ವಿವೇದಿ (ಎಡ); ಸಂಜನಾ ಗಲ್ರಾನಿ (ಬಲ)
Follow us
KUSHAL V
|

Updated on:Oct 09, 2020 | 10:06 AM

ಬೆಂಗಳೂರು: ‘ಮಾದಕ ದುನಿಯಾ’ದಲ್ಲಿ ಕುಚಿಕು ಕುಚಿಕು ಆಗಿದ್ದ ನಟಿಮಣಿಯರು ಪರಪ್ಪನ ಅಗ್ರಹಾರದಲ್ಲಿ ದುಶ್ಮನ್ ಅಗಿಬಿಟ್ಟಿದ್ದಾರಂತೆ. ಪರಪ್ಪನ ‘ಪಂಜರ’ದಲ್ಲಿ ಜೈಲು ಹಕ್ಕಿಗಳ ಜಗಳ ‘ಡಿಶುಂ ಡಿಶುಂ’ ಮಟ್ಟಕ್ಕೆ ತಲುಪಿದ್ದಾರಂತೆ. ಅಂದ ಹಾಗೆ, ನಟಿಯರು ಚಿಕ್ಕ ಚಿಕ್ಕ ಮಕ್ಕಳಂತೆ ಕಿತ್ತಾಡಿಕೊಳ್ತಿರೋದು ಯಾಕೆ? ಬೆಳಗ್ಗೆ ಶುರುವಾಗೋ ಜಗಳ ರಾತ್ರಿಯಾದ್ರೂ ಮುಗಿಯುತ್ತಿಲ್ಲ ಯಾಕೆ? ಅಸಲಿಗೆ ನಟಿಮಣಿಯರ ಫೈಟಿಂಗ್​ಗೆ ಕಾರಣವಾದ ವಿಚಾರ ಏನು? ಅದೆಲ್ಲದರ ಕಂಪ್ಲೀಟ್ ಡಿಟೇಲ್ಸ್​ ಟಿವಿ 9ಗೆ ಲಭ್ಯವಾಗಿದೆ.

ಕೈದಿಗಳಿಗೆ ನಿತ್ಯ ತಲೆನೋವು ರಾಗಿಣಿ ಹಾಗೂ ಸಂಜನಾ ನಡುವೆ ಜೈಲಿನಲ್ಲಿ ದಿನನಿತ್ಯ ಕಿತ್ತಾಟ ನಡೀತಿದೆ ಎಂದು ತಿಳಿದುಬಂದಿದೆ. ನಟಿಮಣಿಯರ ಜಗಳ ಇತರೆ ಕೈದಿಗಳಿಗೆ ನಿತ್ಯ ತಲೆನೋವು ಆಗಿಬಿಟ್ಟಿದೆಯಂತೆ. ಒಬ್ಬರು ಕೂತ್ರೆ ಇನ್ನೊಬ್ಬರಿಗೆ ತಪ್ಪು, ಇನ್ನೊಬ್ಬರು ನಿಂತ್ರೆ ಮತ್ತೊಬ್ಬರಿಗೆ ತಪ್ಪು ಅನ್ನುವಷ್ಟರ ಮಟ್ಟಿಗೆ ಇವರ ಜಡೆಜಗಳ ತಲುಪಿಬಿಟ್ಟಿದೆಯಂತೆ. ಕೆಲವೊಮ್ಮೆ ಕೈ ಕೈ ಮಿಲಾಯಿಸೋ ಹಂತವು ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೈಲಿನ ಸಿಬ್ಬಂದಿ ಇಬ್ಬರ ಜಗಳ ಬಿಡಿಸೋಕೆ ಬಂದ್ರೂ ಸುಮ್ಮನಾಗುತ್ತಿಲ್ಲವಂತೆ. ಹಾಗಾಗಿ, ನಟಿಯರ ಜಡೆಜಗಳಕ್ಕೆ ಜೈಲ್ ಸಿಬ್ಬಂದಿಯೇ ಕಂಗಾಲಾಗಿ ಹೋಗಿದ್ದಾರೆ.

ಮೊದಲು ಕಿತ್ತಾಟ ಆಮೇಲೆ ಕಣ್ಣೀರು! ಬೈ ದಿ ಬೈ, ನಶೆರಾಣಿಯರ ಜಡೆಜಗಳ ಕೇವಲ ಕಿತ್ತಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗಳದ ನಂತರ ರಾಗಿಣಿ ಮತ್ತು ಸಂಜನಾ ಬಿಕ್ಕಿ ಬಿಕ್ಕಿ ಅಳಲು ಶುರುಮಾಡ್ತಾರಂತೆ. ಅಸಲಿಗೆ, ಸಂಜನಾ ಹಾಗೂ ರಾಗಿಣಿ ಕಿತ್ತಾಟದ ಜೊತೆಗೆ ಕಣ್ಣೀರಿಡ್ತಿರೋದಕ್ಕೆ ಕಾರಣ ED ಗುನ್ನಾ. ಹೌದು, ನಟಿಮಣಿಯರ ಕಿತ್ತಾಟ ಹಾಗೂ ಕಣ್ಣೀರಿನ ಹಿಂದಿನ ಅಸಲಿ ಕಹಾನಿಯನ್ನು ಟಿವಿ 9 ಬಿಚ್ಚಿಟ್ಟಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂಟ್ರಿ ಕೊಟ್ಟ ಬಳಿಕ ತುಪ್ಪದ ಹುಡುಗಿ ಹಾಗೂ ಗಂಡ ಹೆಂಡತಿ ಬೆಡಗಿ ನಡುವೆ ಬಿರುಕು ಶುರುವಾಗಿದೆ ಎಂದು ತಿಳಿದುಬಂದಿದೆ. ಖಾಕಿ ತನಿಖೆಯಿಂದ ತಪ್ಪಿಸಿಕೊಳ್ಳೋ ಪ್ಲ್ಯಾನ್​ನಲ್ಲಿದ್ದವರಿಗೆ ED ಗುನ್ನಾದ ಏಟು ಕಷ್ಟವಾಗಿಬಿಟ್ಟಿದೆ. ಹಾಗಾಗಿ, ED ತನಿಖೆಯಲ್ಲಿ ಸಿಲುಕಿರುವ ಸಂಜನಾ, ರಾಗಿಣಿ ಜೈಲಿನಲ್ಲಿ ಪರಸ್ಪರ ಕಿತ್ತಾಡುತ್ತಾ, ಕಣ್ಣೀರಿಡ್ತಿದ್ದಾರೆ ಎಂದು ಹೇಳಲಾಗಿದೆ. ಇಬ್ರೂ ಯಾವಾಗ ಬೇಲ್ ತಗೊಂಡು ಹೋಗ್ತಾರೋ -ಜಡೆಜಗಳಕ್ಕೆ ಸಿಬ್ಬಂದಿ, ಕೈದಿ ಕಂಗಾಲು

Published On - 9:43 am, Fri, 9 October 20

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ