ಬೆಂಗಳೂರು: ರಾಜ ರಾಜಕೀಯದಲ್ಲಿ ಖಾತೆ ಬದಲಾವಣೆಯ ಬಿರುಗಾಳಿ ಎದ್ದಿದೆ. ಕ್ಷಣ ಕ್ಷಣಕ್ಕೂ ಖಾತೆಯ ಅದಲು-ಬದಲು ಆಟ ನಡೆಯುತ್ತಿದೆ. ಈ ನಡುವೆ ನಾನು ಶಾಸಕನಾಗಿಯೇ ಉಳಿದು ಬಿಡುತ್ತೇನೆ ಎಂದು ಪರೋಕ್ಷವಾಗಿ ಸಚಿವ ಆನಂದ್ ಸಿಂಗ್ ರಾಜೀನಾಮೆ ಸುಳಿವು ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಆನಂದ್ ಸಿಂಗ್ ಜೊತೆ ಆರ್ ಅಶೋಕ್ ಗರಂ ಆಗಿದ್ದಾರೆ.
ಭಟ್ಕಳದ ಐಬಿಯಲ್ಲಿರುವ ಆರ್ ಅಶೋಕ್, ಆನಂದ್ ಸಿಂಗ್ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರಂತೆ. ಯಾವಾಗ ಆನಂದ್ ಸಿಂಗ್ ರಾಜೀನಾಮೆ ಗುಮಾನಿ ವಿಚಾರ ತಿಳಿಯಿತು ತಕ್ಷಣ ಕರೆ ಮಾಡಿದ ಅಶೋಕ್ “ನಿಮಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ವಾ. ಎಲ್ಲವನ್ನು ಸರಿಮಾಡೋಣ ಆದ್ರೆ ರಾಜೀನಾಮೆ ಬೇಡ. ರಾಜೀನಾಮೆ ಕೊಡುವ ಪ್ರಹಸನ ಮಾಡಬೇಡಿ” ಎಂದು ಮನವೊಲಿಕೆಗೆ ಯತ್ನಿಸಿದ್ದಾರೆ. ಭಟ್ಕಳದ ಐಬಿಯಲ್ಲಿದ್ದಾಗ ಕರೆ ಮಾಡಿ ಆನಂದ್ ಸಿಂಗ್ ಜೊತೆ ಅಶೋಕ್ ಚರ್ಚೆ ನಡೆಸಿದ್ದಾರಂತೆ.
ನನಗ್ಯಾವ ಅಸಮಾಧಾನವೂ ಇಲ್ಲ..ಯಾವ ಖಾತೆಗಳೂ ಬೇಡ, ಶಾಸಕನಾಗಿ ಉಳಿಯುತ್ತೇನೆ: ಆನಂದ್ ಸಿಂಗ್