ರಾಮನಗರ: ಟೆಕ್ನಾಲಜಿ ಎಲ್ಲಿಂದ-ಎಲ್ಲಿಗೆ ಹಬ್ಬಿದೆ ನೋಡಿ! ನರೇಗಾ ಕಾಮಗಾರಿಗೂ ಡ್ರೋನ್! ಗ್ರಾಮೀಣ ಭಾಗದಲ್ಲಿ ಕೆರೆ, ಕಲ್ಯಾಣಿ, ಕಾಲುದಾರಿ ವೀಕ್ಷಣೆ, ಸಿಬ್ಬಂದಿಗಳ ಕಾರ್ಯವೈಖರಿ. ಹೀಗೆ ಹತ್ತಾರು ಕಾಮಗಾರಿಗಳನ್ನು ಕುಳಿತ್ತಲ್ಲಿಯೇ ವೀಕ್ಷಿಸಲೂ ಸಹ ಈ ಡ್ರೋನ್ ಎಂಬ ಪಕ್ಷಿನೋಟ ಬಳಕೆಯಾಗುತ್ತಿದೆ.
ಡ್ರೋನ್ ಹದ್ದಿನಕಣ್ಣು!
ಕುಳಿತಲ್ಲಿಯೇ ಡ್ರೋನ್ ಮೂಲಕ ನರೇಗಾ ಕಾಮಗಾರಿಗಳ ವೀಕ್ಷಿಸುವುದು, ರಸ್ತೆ ಬದಿ ಕಾಮಗಾರಿ, ಕಲ್ಯಾಣಿ, ಕೆರೆ-ಕುಂಟೆಗಳ ವೀಕ್ಷಣೆ ಮೂಲಕ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಡ್ರೋನ್ ಬಳಕೆ ಮಾಡಲಾಗುವುದು.
ಇದರೊಂದಿಗೆ ಏಕಾಏಕಿ ಗ್ರಾಪಂಗಳ ಮೇಲೆ ಡ್ರೋನ್ ಹಾರಿಸುವ ಮೂಲಕ ಗ್ರಾಪಂ ಸಿಬ್ಬಂದಿಯ ಕಾರ್ಯವೈಖರಿಯ ಪರಿಶೀಲನೆಗೂ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಡ್ರೋನ್ ನೀಡುವ ಮೂಲಕ ಆಯಾ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆಯನ್ನು ಜಿಪಂ ಇಸಿಓ ಇಕ್ರಮ್ ಅವರು ಕುಳಿತಲ್ಲಿಯೇ ಪರಿಶೀಲನೆ ನಡೆಸಲಿದ್ದಾರೆ.
ಡ್ರೋನ್ ವಿಶೇಷ
1.90 ಲಕ್ಷ ಮೌಲ್ಯದ ಡ್ರೋನ್ ಇದಾಗಿದ್ದು, 120 ಡಿಗ್ರಿ ವರೆಗು ಕ್ಯಾಮಾರಾ ತಿರುಗಲಿದೆ. ಸುಮಾರು ಒಂದು ಸಾವಿರ ಅಡಿ ಎತ್ತರ ಹಾರಲಿರುವ ಡ್ರೋನ್ ಇದಾಗಿದ್ದು, 8 ಕಿ.ಮಿ ದೂರ ಸಂಚರಿಸಲಿದೆ.
ಆದರೆ, ಇದರ ಬ್ಯಾಟರಿ ಕೇವಲ 15 ನಿಮಿಷವಷ್ಟೆ ಬರಲಿದೆ. ಹೀಗಾಗಿ 5 ಬ್ಯಾಟರಿಗಳನ್ನು ಹೆಚ್ಚುವರಿಯಾಗಿ ಬಳಕೆ ಮಾಡಿಕೊಳ್ಳುವ ಮೂಲಕ 1 ಗಂಟೆಗಳ ಕಾಲ ಡ್ರೋನ್ ಹಾರಾಟ ನಡೆಸಲು ಸಿದ್ದಂತೆ ನಡೆಸಲಾಗಿದೆ.
Published On - 4:39 pm, Sat, 30 May 20