ಮೂರನೇ ಟೆಸ್ಟ್ನ ಮೂರನೇ ಸೆಷನ್ ಅಂದ್ರೆ ಅದು ಟೀ ಟೈಂ. ಟೀಂ ಇಂಡಿಯಾ ಸೋಲುವ ಹಂತಕ್ಕೆ ತಲುಪಿತ್ತು. ಆದರೆ, ಆರ್. ಅಶ್ವಿನ್ ಹಾಗೂ ಹನುಮ ವಿಹಾರಿ ಅದ್ಭುತ ಪ್ರದರ್ಶನದಿಂದ ಟೀಂ ಇಂಡಿಯಾ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ವಿಶೇಷ ಎಂದರೆ, ಮೂರನೇ ಟೆಸ್ಟ್ ಅಂತಿಮ ಘಟ್ಟದಲ್ಲಿ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ನೀಡಿದ ಸಂದೇಶವೊಂದು ಬ್ಯಾಟಿಂಗ್ ಮಾಡುತ್ತಿರುವವರಿಗೆ ಸಿಗಲೇ ಇಲ್ಲ! ಅಷ್ಟಕ್ಕೂ ಏನು ಆ ಸಂದೇಶ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವ ಹಂತಕ್ಕೆ ಬಂದಿತ್ತು. ಈ ವೇಳೆ ವಿಹಾರಿ ಹಾಗೂ ಅಶ್ವಿನ್ ಅದ್ಭುತವಾಗಿ ಆಟವಾಡುತ್ತಿದ್ದರು. ಈ ವೇಳೆ ಶಾರ್ದೂಲ್ ಠಾಕೂರ್ ಅವರನ್ನು ಕರೆದ ರವಿ ಶಾಸ್ತ್ರಿ, ನಾನೊಂದು ತಂತ್ರ ಹೇಳಿಕೊಡುತ್ತೇನೆ. ಇದನ್ನು ಅವರ ಬಳಿ ಹೇಳಿ ಬಾ ಎಂದಿದ್ದರು. ಠಾಕೂರ್ ಏನು ಆ ತಂತ್ರ ಎಂದು ಮರು ಪ್ರಶ್ನೆ ಮಾಡಿದ್ದರು.
ಇದಕ್ಕೆ ಉತ್ತರಿಸಿದ್ದ ರವಿ ಶಾಸ್ತ್ರಿ, ಆರ್. ಅಶ್ವಿನ್ ಅತ್ಯುತ್ತಮ ಬ್ಯಾಟ್ಸ್ಮನ್. ಸ್ಪಿನ್ನರ್ಗಳನ್ನು ಅಶ್ವಿನ್ ಚೆನ್ನಾಗಿ ಫೇಸ್ ಮಾಡುತ್ತಾರೆ. ಹೀಗಾಗಿ, ಲೈನ್ ಬೌಲಿಂಗ್ಅನ್ನು ಅಶ್ವಿನ್ ಫೇಸ್ ಮಾಡಬೇಕು. ಸ್ಟಾರ್ಕ್ ಹಾಗೂ ಪಾಟ್ ಕುಮ್ಮಿಸ್ ಬೌಲಿಂಗ್ ವೇಳೆ ವಿಹಾರಿ ಬ್ಯಾಟ್ ಮಾಡಬೇಕು. ಇದನ್ನು ಚಾಚೂ ತಪ್ಪದಂತೆ ಅವರು ಪಾಲಿಸುವಂತಾಗಬೇಕು. ಈ ಸಂದೇಶವನ್ನು ಅವರ ಬಳಿ ಹೇಳಿ ಬಾ ಎಂದು ಠಾಕೂರ್ಗೆ ಸೂಚಿಸಿದ್ದರು.
ಅಶ್ವಿನ್ ಹಾಗೂ ವಿಹಾರಿಗೆ ನೀರು ಕೊಡಲು ಹೋದಾಗ ಠಾಕೂರ್ ಗೊಂದಲದ ಗೂಡಾದರು. ಅವರದೇ ಥಿಯರಿಯಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಒಂದೊಮ್ಮೆ ನಾನು ಇದನ್ನು ಹೇಳಿದರೆ ಇವರು ಗೊಂದಲ ಮಾಡಿಕೊಂಡು ಔಟ್ ಆದರೆ ಎನ್ನುವ ಭಯ ಕಾಡಿತ್ತು. ಹೀಗಾಗಿ, ಅವರು ತುಂಬಾನೇ ಹೇಳಿದ್ದಾರೆ. ಆದರೆ, ಏನು ಹೇಳಬೇಕು ಎನ್ನುವುದು ನನಗೆ ಗೊತ್ತಾಗುತ್ತಿಲ್ಲ ಎಂದಿದ್ದರು ಶಾರ್ದೂಲ್. ಇದಕ್ಕೆ ಉತ್ತರಿಸಿದ ಅಶ್ವಿನ್ ಇದನ್ನು ಹೇಳೋಕೆ ಅಲ್ಲಿಂದ ಇಲ್ಲಿವರೆಗೂ ಬಂದೆಯಾ ಎಂದು ಪ್ರಶ್ನಿಸಿದ್ದರು. ಆಗ ಶಾರ್ದೂಲ್, ನೀವು ಉತ್ತಮವಾಗಿ ಆಡುತ್ತಿದ್ದೀರಿ. ಇದನ್ನೇ ಮುಂದುವರಿಸಲು ರವಿ ಶಾಸ್ತ್ರಿ ಸೂಚಿಸಿದ್ದಾರೆ ಎಂದಿದ್ದರು. ಈ ಮೂಲಕ ರವಿ ಶಾಸ್ತ್ರಿ ಹೇಳಿದ ಸಂದೇಶವನ್ನು ಕೊನೆಗೂ ಠಾಕೂರ್ ಹೇಳಲೇ ಇಲ್ಲ. ಈ ವಿಚಾರವನ್ನು ಅಶ್ವಿನ್ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.
ನನ್ನ ದಾಖಲೆಯನ್ನು ಸರಿಗಟ್ಟುವ ಅವಕಾಶ ರವಿಚಂದ್ರನ್ ಅಶ್ವಿನ್ಗಿದೆ: ಮುರಳೀಧರನ್
Published On - 6:46 pm, Sat, 23 January 21