ಬಸ್‌ಗಾಗಿ ಕಾಯುತ್ತಿದ್ದ ಯುವತಿಯನ್ನ ಕಿಡ್ನ್ಯಾಪ್ ಮಾಡಿ ಚಲಿಸುತ್ತಿದ್ದ ಕಾರಿನಲ್ಲೇ ಮ್ಯಾರೇಜ್!

|

Updated on: Feb 05, 2020 | 10:41 AM

ಹಾಸನ: ಬಸ್‌ಗಾಗಿ ಕಾಯುತ್ತಿದ್ದ ಯುವತಿಯನ್ನ ಹೊತ್ತೊಯ್ದು ಕಾರಿನಲ್ಲೇ ತಾಳಿಕಟ್ಟಿರುವ ಘಟನೆ ನಡೆದಿದೆ. ಬಸ್​ಗಾಗಿ ಕಾಯುತ್ತಿದ್ದ ಯುವತಿಗೆ ಕಾರಿನೊಳಕ್ಕೆ ಎಳೆದ ಯುವಕ ಆಕೆಗೆ ಏನ್ ಆಗ್ತಿದೆ ಎಂಬ ಅರಿವು ಬರುವ ಮುನ್ನವೇ ತಾಳಿ ಕಟ್ಟಿದ್ದಾನೆ. ಹಾಸನ ತಾಲ್ಲೂಕಿನ ಯುವತಿ ಮೇಲೆ ಅರಸೀಕೆರೆ ತಾಲ್ಲೂಕಿನ ಕುಡುಕುಂದಿ ಗ್ರಾಮದ ಯುವಕ ಬಲವಂತವಾಗಿ ಮದುವೆಯಾಗಿದ್ದಾನೆ. ಮದುವೆಯಾದ ಯುವಕ ಬೇರೆ ಯಾರು ಅಲ್ಲ. ಸ್ವಂತ ಅತ್ತೆ ಮಗ ಮನು. ಮನುಗೆ ಯುವತಿಯನ್ನ ಮದುವೆ ಮಾಡಿಕೊಳ್ಳುವ ಆಸೆ ಇತ್ತಂತೆ. ಆದರೆ ಯುವತಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. […]

ಬಸ್‌ಗಾಗಿ ಕಾಯುತ್ತಿದ್ದ ಯುವತಿಯನ್ನ ಕಿಡ್ನ್ಯಾಪ್ ಮಾಡಿ ಚಲಿಸುತ್ತಿದ್ದ ಕಾರಿನಲ್ಲೇ ಮ್ಯಾರೇಜ್!
Follow us on

ಹಾಸನ: ಬಸ್‌ಗಾಗಿ ಕಾಯುತ್ತಿದ್ದ ಯುವತಿಯನ್ನ ಹೊತ್ತೊಯ್ದು ಕಾರಿನಲ್ಲೇ ತಾಳಿಕಟ್ಟಿರುವ ಘಟನೆ ನಡೆದಿದೆ. ಬಸ್​ಗಾಗಿ ಕಾಯುತ್ತಿದ್ದ ಯುವತಿಗೆ ಕಾರಿನೊಳಕ್ಕೆ ಎಳೆದ ಯುವಕ ಆಕೆಗೆ ಏನ್ ಆಗ್ತಿದೆ ಎಂಬ ಅರಿವು ಬರುವ ಮುನ್ನವೇ ತಾಳಿ ಕಟ್ಟಿದ್ದಾನೆ.

ಹಾಸನ ತಾಲ್ಲೂಕಿನ ಯುವತಿ ಮೇಲೆ ಅರಸೀಕೆರೆ ತಾಲ್ಲೂಕಿನ ಕುಡುಕುಂದಿ ಗ್ರಾಮದ ಯುವಕ ಬಲವಂತವಾಗಿ ಮದುವೆಯಾಗಿದ್ದಾನೆ. ಮದುವೆಯಾದ ಯುವಕ ಬೇರೆ ಯಾರು ಅಲ್ಲ. ಸ್ವಂತ ಅತ್ತೆ ಮಗ ಮನು. ಮನುಗೆ ಯುವತಿಯನ್ನ ಮದುವೆ ಮಾಡಿಕೊಳ್ಳುವ ಆಸೆ ಇತ್ತಂತೆ. ಆದರೆ ಯುವತಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಹೀಗಾಗಿ ಮನು ತನ್ನ ಸ್ನೇಹಿತರ ಸಾಹಯದಿಂದ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಬಲವಂತವಾಗಿ ಕಾರಿನಲ್ಲೇ ತಾಳಿ ಕಟ್ಟಿದ್ದಾನೆ. ಯುವತಿ ಪೋಷಕರಿಂದ ದುದ್ದ ಠಾಣೆಯಲ್ಲಿ ದೂರು ದಾಖಲಾಗಿದೆ.

Published On - 8:26 am, Wed, 5 February 20