AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತನ ರಾಜಕೀಯ ‘ಯೋಗ’ ಶುರುವಾಗಿದ್ದೇ ನನ್ನ ಮನೆಯಿಂದ -ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಇನ್ನೊಂದೇ ದಿನ ಬಾಕಿಯಿದೆ. ಈಗಾಗಲೇ ಬಿಜೆಪಿ ವಲಯದಲ್ಲಿ ಸಚಿವಾಕಾಂಕ್ಷಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಮಧ್ಯೆ ಸಿ.ಪಿ. ಯೋಗೇಶ್ವರ್ ಹೆಸರೂ ಹರಿದಾಡುತ್ತಿದೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಮಧ್ಯೆ, ಯೋಗಿ ಹಾಗೂ ಡಿಕೆಶಿ ನಡುವೆಯೂ ಮನಸ್ತಾಪ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಈ ಹಿಂದೆ ಸಿ.ಪಿ.ಯೋಗೇಶ್ವರ್ ನನ್ನ ಮನೆಯ ಮುಂದೆ ಕಾಯ್ತಿದ್ದ. ಯೋಗೇಶ್ವರ್ ರಾಜಕೀಯ ಶುರು ಆಗಿದ್ದೇ ನನ್ನ ಮನೆಯಿಂದ ಎಂದು ವ್ಯಂಗ್ಯವಾಡಿದ್ದಾರೆ. ಯೋಗೇಶ್ವರ್ […]

ಆತನ ರಾಜಕೀಯ ‘ಯೋಗ’ ಶುರುವಾಗಿದ್ದೇ ನನ್ನ ಮನೆಯಿಂದ -ಡಿಕೆ ಶಿವಕುಮಾರ್
ಸಾಧು ಶ್ರೀನಾಥ್​
|

Updated on:Feb 05, 2020 | 12:10 PM

Share

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಇನ್ನೊಂದೇ ದಿನ ಬಾಕಿಯಿದೆ. ಈಗಾಗಲೇ ಬಿಜೆಪಿ ವಲಯದಲ್ಲಿ ಸಚಿವಾಕಾಂಕ್ಷಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಮಧ್ಯೆ ಸಿ.ಪಿ. ಯೋಗೇಶ್ವರ್ ಹೆಸರೂ ಹರಿದಾಡುತ್ತಿದೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಮಧ್ಯೆ, ಯೋಗಿ ಹಾಗೂ ಡಿಕೆಶಿ ನಡುವೆಯೂ ಮನಸ್ತಾಪ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಈ ಹಿಂದೆ ಸಿ.ಪಿ.ಯೋಗೇಶ್ವರ್ ನನ್ನ ಮನೆಯ ಮುಂದೆ ಕಾಯ್ತಿದ್ದ. ಯೋಗೇಶ್ವರ್ ರಾಜಕೀಯ ಶುರು ಆಗಿದ್ದೇ ನನ್ನ ಮನೆಯಿಂದ ಎಂದು ವ್ಯಂಗ್ಯವಾಡಿದ್ದಾರೆ.

ಯೋಗೇಶ್ವರ್ ನನ್ನ ವೆಲ್ ವಿಷರ್ ಅಲ್ಲ ಅಂತ ನಾನು ಹೇಳಲ್ಲ. ಆದರೆ ಅವನ ರಾಜಕೀಯ ಶುರು ಆಗಿದ್ದೇ ನನ್ನ ಮನೆಯಿಂದ. ಈಗ ಎಷ್ಟೆಷ್ಟೋ ಕೊಲೆ ಆಗಿದೆ, ಹಾಗಾಗಿದೆ ಹೀಗಾಗಿದೆ ಅಂತೆಲ್ಲಾ ಮಾತನಾಡ್ತಾರೆ. ಸದನಕ್ಕೆ ಬರಲಿ ಆಗ ದಾಖಲೆ ಇಟ್ಕೊಂಡು ಮಾತನಾಡ್ತೇನೆ. ಬಿಜೆಪಿಯವರು ಸೋತವರಿಗಾದರೂ ಮಂತ್ರಿ ಮಾಡಲಿ, ಗೆದ್ದವರಿಗಾದರೂ ಮಂತ್ರಿ ಮಾಡಲಿ. ಆದ್ರೆ, ನಮ್ಮನ್ನು ಬಿಟ್ಟು ಹೋದ ಏಳು ಜನರು ಎಷ್ಟು ಕಷ್ಟ ಪಡ್ತಿದ್ದಾರೆ ನನಗೆ ಗೊತ್ತಿದೆ. ಆಗಲಿ ಅವರಿಗೆಲ್ಲ ಒಳ್ಳೆಯದಾಗಲಿ ಎಂದರು.

‘ಕಮಿಷನರ್ ಭಾಸ್ಕರ್ ರಾವ್​ಗೆ ಅಸೆಂಬ್ಲಿಯಲ್ಲಿ ಕಾದಿದೆ’: ದುಡ್ಡು ಕಟ್ಟಿ ಪ್ರೊಟೆಸ್ಟ್ ಮಾಡಿ ಅನ್ನೋದು ಯಾವ ಸರ್ಕಾರ ಇದು? ಯಾವ ಬಾಂಡ್ ರೀ ಇದು? ಯಾರಿಗೆ ಹೇಳ್ತಿದ್ದೀರಿ ಇದನ್ನೆಲ್ಲ? ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ವಿರುದ್ಧ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂಗೆ, ಗೃಹ ಸಚಿವರಿಗೆ ಮಾಹಿತಿ ಇಲ್ಲದೆ ಇದನ್ನೆಲ್ಲ ಮಾಡೋದಕ್ಕೆ ಆಗತ್ತಾ? ಪ್ರಜಾಪ್ರಭುತ್ವ ರಾಷ್ಟ್ರ ಕಣ್ರಿ ಇದು. ಪ್ರತಿಭಟನೆ ಮಾಡೋದಕ್ಕೆ 10 ಲಕ್ಷ ಕಟ್ಟಿ ಅನ್ನೋದೆಲ್ಲ ಎನ್ರೀ ಇದು? ಬಾಂಡ್ ಬರ್ಕೊಡು ಅದೂ ಇದು ಅನ್ನೋದನ್ನ ಯಾವುದಾದ್ರೂ ದೇಶದಲ್ಲಿ ಕೇಳಿದ್ದೀರಾ? ಈ ಬಗ್ಗೆ ಅಸೆಂಬ್ಲಿಯಲ್ಲಿ ಕಮಿಷನರ್ ಸಾಹೇಬ್ರು ಉತ್ತರ ಕೊಡಲಿ ಎಂದು ಕಿಡಿಕಾರಿದರು.

ದಾಸೋಹ ಸ್ಥಗಿತಕ್ಕೆ ಡಿಕೆಶಿ ಆಕ್ರೋಶ: ತುಮಕೂರಿನ ಸಿದ್ಧಗಂಗಾ ಮಠಕ್ಕೆ ದಾಸೋಹ ಸ್ಥಗಿತಗೊಳಿಸಿದ ಸರ್ಕಾರದ ವಿರುದ್ಧವೂ ಡಿಕೆಶಿ ಸಿಟ್ಟು ವ್ಯಕ್ತಪಡಿಸಿದ್ದಾರೆ.ಬಿಜೆಪಿ ಸರ್ಕಾರ ಚೂಸ್ ಆಂಡ್ ಪಿಕ್ ಮಾಡ್ತಿದೆ. ದಾಸೋಹ ಸ್ಥಗಿತಗೊಳಿಸಿದ್ದು ಖಂಡನೀಯ. ಈ ಹಿಂದೆ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಕೊಲ್ಲೂರು ದೇವಸ್ಥಾನದ ಹಣ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಇದೇ ಬಿಜೆಪಿಯವರು ದೊಡ್ಡ ರಾಜಕಾರಣ ಮಾಡಿದ್ರು. ಈಗ ನೋಡಿದ್ರೆ ಮಠ ಮಾನ್ಯಗಳ ದಾಸೋಹ ಸ್ಥಗಿತಗೊಳಿಸಿದ್ದಾರೆ.

ಇದನ್ನೇ ಮುಂದುವರೆಸಿದರೆ ನಾವು ಹೋರಾಟ ಮಾಡಬೇಕಾಗುತ್ತದೆ. ನಾವು ಜಾತಿ ಧರ್ಮ ನೋಡಿ ಯೋಜನೆ ಜಾರಿಗೆ ತಂದಿರಲಿಲ್ಲ. ಮಠ ಮಾನ್ಯಗಳ ಬಗ್ಗೆ ಬಿಜೆಪಿಯವರ ಧೋರಣೆ ಜನರಿಗೆ ಅರ್ಥವಾಗ್ತಿದೆ. ಯಾರಾದ್ರೂ ಮಿಸ್ ಯೂಸ್ ಮಾಡ್ತಿದ್ರೆ ಕ್ರಮ ತೆಗೆದುಕೊಳ್ಳಲಿ ಎಂದು ಡಿಕೆಶಿ ಆಗ್ರಹಿಸಿದರು.

Published On - 11:59 am, Wed, 5 February 20