ಭೈರತಿ ನಾಳೆಯೇ ಮಂತ್ರಿ, ಆದ್ರೆ ಇದೇನಿದು KR Puram ಇನ್ಸ್‌ಪೆಕ್ಟರ್ ಅಸಹ್ಯ!
ಬೆಂಗಳೂರು: ಅತ್ತೂಕರೆದು, ವಿಧಾನಸೌಧಕ್ಕೆ ಓಡೋಡಿಬಂದು, ಕೊನೆಗೂ ನಾಳೆಯೇ ಮಂತ್ರಿ ಸ್ಥಾನ ಅಲಂಕರಿಸಲು ಕೋಟುಬೂಟು ತೊಟ್ಟು ಸಿದ್ಧರಾಗಿರುವ ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜ್ ತೀರಾ ಮುಜುಗುರದ ಸನ್ನಿವೇಶ ಎದುರಿಸಿದ್ದಾರೆ. ಮೂವರು ಇನ್ಸ್ಪೆಕ್ಟರ್ಗಳು ಅವರನ್ನು ಸುತ್ತುವರಿದು ವಾಚಾಮಗೋಚರ ಹೊಗಳಿ ಹೊನ್ನಶೂಲಕ್ಕೇರಿಸಿ, ಕೈಗೊಂದು ಬೆಳ್ಳಿ ಗದೆ ಮತ್ತು ಬಾಯಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ಇದನ್ನು ಕಂಡು ಸ್ವತಃ ಭೈರತಿಗೆ ತೀವ್ರ ಮುಜುಗುರವಾಗಿದೆ. ಕಮಿಷನರ್ ಭಾಸ್ಕರ್ ರಾವ್ ಎಲ್ಲಿದ್ದರೂ ಇದರತ್ತ ಸ್ವಲ್ಪ ಕಣ್ಣಾಡಿಸಲಿ ತಾನು ಒಬ್ಬ ಪೊಲೀಸ್ ಅಧಿಕಾರಿ ಎಂಬುದನ್ನೂ […]
ಬೆಂಗಳೂರು: ಅತ್ತೂಕರೆದು, ವಿಧಾನಸೌಧಕ್ಕೆ ಓಡೋಡಿಬಂದು, ಕೊನೆಗೂ ನಾಳೆಯೇ ಮಂತ್ರಿ ಸ್ಥಾನ ಅಲಂಕರಿಸಲು ಕೋಟುಬೂಟು ತೊಟ್ಟು ಸಿದ್ಧರಾಗಿರುವ ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜ್ ತೀರಾ ಮುಜುಗುರದ ಸನ್ನಿವೇಶ ಎದುರಿಸಿದ್ದಾರೆ. ಮೂವರು ಇನ್ಸ್ಪೆಕ್ಟರ್ಗಳು ಅವರನ್ನು ಸುತ್ತುವರಿದು ವಾಚಾಮಗೋಚರ ಹೊಗಳಿ ಹೊನ್ನಶೂಲಕ್ಕೇರಿಸಿ, ಕೈಗೊಂದು ಬೆಳ್ಳಿ ಗದೆ ಮತ್ತು ಬಾಯಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ಇದನ್ನು ಕಂಡು ಸ್ವತಃ ಭೈರತಿಗೆ ತೀವ್ರ ಮುಜುಗುರವಾಗಿದೆ.
ಕಮಿಷನರ್ ಭಾಸ್ಕರ್ ರಾವ್ ಎಲ್ಲಿದ್ದರೂ ಇದರತ್ತ ಸ್ವಲ್ಪ ಕಣ್ಣಾಡಿಸಲಿ ತಾನು ಒಬ್ಬ ಪೊಲೀಸ್ ಅಧಿಕಾರಿ ಎಂಬುದನ್ನೂ ಮರೆತು, ಹಾದಿಬೀದಿಯ ಕಾರ್ಯಕರ್ತನಂತೆ ಜೈಕಾರ ಹಾಕಿದ್ದನ್ನು ಕಂಡು ಸ್ವತಃ ಭೈರತಿ ಸಿಟ್ಟು ಮಾಡಿಕೊಂಡಿದ್ದಾನೆ. ಬಿಹೇವ್ ಯುವರ್ ಸೆಲ್ಫ್ ಎಂದು ಇನ್ಸ್‌ಪೆಕ್ಟರ್ ಅಂಬರೀಶ್ಗೆ ಕೈತೋರಿಸಿ, ಬೈದಿದ್ದಾರೆ. ಆದರೂ ಆ ಪೊಲೀಸಪ್ಪ ಇನ್ನೂ ಜೋರಾಗಿಯೇ ಜೈಕಾರ ಹಾಕಿದ್ದಾನೆ. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಎಲ್ಲಿದ್ದರೂ ಈ ಪ್ರಕರಣದತ್ತ ಸ್ವಲ್ಪ ಕಣ್ಣಾಡಿಸಬೇಕು ಎಂದು ಕೆಆರ್ ಪುರಂ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ಪೊಲೀಸರ ದೊಡ್ಡ ‘ಅಪರಾಧ’ ಇಷ್ಟಕ್ಕೂ ಏನಾಯಿತೆಂದ್ರೆ ಮೊನ್ನೆ ಭೈರತಿ ಬಸವರಾಜ್ ಅವರ 56 ನೇ ಹುಟ್ಟುಹಬ್ಬ ಇತ್ತು. ಇದೇ ಸುಸಂದರ್ಭ ಎಂದು ಕೆ ಆರ್ ಪುರಂ ಠಾಣೆಯ ಇನ್ಸ್‌ಪೆಕ್ಟರ್ ಅಂಬರೀಶ್ ಭರ್ಜರಿ ಪಾರ್ಟಿ ನಡೆಸಿದ್ದಾರೆ. ಇವರಿಗೆ ಅಕ್ಕಪಕ್ಕ ಸ್ಟೇಷನ್ಗಳ ಇನ್ನೂ ಇಬ್ಬರು ಇನ್ಸ್ಪೆಕ್ಟರ್ಗಳು ಸಾಥ್ ನೀಡಿದ್ದಾರೆ. ಖುದ್ದು ಅಂಬರೀಶ್, ಭೈರತಿಗೆ ಬೆಳ್ಳಿ ಗದೆ ನೀಡಿದ್ದಾರೆ. ಸಾಲದು ಅಂತಾ ಕೇಕ್ ತಿನ್ನಿಸಿ, ಜೈಕಾರಗಳನ್ನು ಹಾಕಿದ್ದಾರೆ. ಇದನ್ನೆಲ್ಲ ಕಂಡು, ಶಿಸ್ತಿಗೆ ಹೆಸರಾದ ಇಲಾಖೆಯಲ್ಲಿ ಏನಿದು ಅಸಹ್ಯ? ಇದು ಪೊಲೀಸರ ದೊಡ್ಡ ‘ಅಪರಾಧ’ವೇ ಸರಿ ಎಂದು ಕೆ ಆರ್ ಪುರಂ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ಸ್ಪೆಕ್ಟರ್ಗೆ ಖಡಕ್ ನೋಟಿಸ್ ಜಾರಿ ಇದನ್ನೆಲ್ಲ ಕಂಡು ಕೆಂಡಾಮಂಡಲಗೊಂಡಿರುವ ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್ ಸೀದಾ ನೋಟಿಸ್ ಜಾರಿ ಮಾಡಿದ್ದಾರೆ. ಮಹಾನುಭಾವ ಅಂಬರೀಶ್ ಏನಿದೆಲ್ಲ ನಿನ್ನ ಅವತಾರ? ಇಲಾಖೆಯ ಮಾನ ಮರ್ಯಾದೆ ಹೀಗಾ ಹರಾಜಿಗೆ ಹಾಕೋದು? ಎಂದು ಗದರಿಕೊಂಡು, ವಿವರಣೆ ನೀಡುವಂತೆ ಖಡಕ್ ನೋಟಿಸ್ ನೀಡಿದ್ದಾರೆ.
Published On - 12:51 pm, Wed, 5 February 20