ಹ್ಯುರನ್ (Hurun)ನಿಂದ ಮಾರ್ಚ್ 2ನೇ ತಾರೀಕಿನಂದು ಹತ್ತನೇ ಆವೃತ್ತಿಯ ಹ್ಯುರನ್ ಜಾಗತಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜಗತ್ತಿನಾದ್ಯಂತ 3228 ಶತಕೋಟ್ಯಧಿಪತಿಗಳು ಇದ್ದಾರೆ. ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ ಬಿಲಿಯನೇರ್ಗಳ ಒಟ್ಟಾರೆ ಆಸ್ತಿಯು ಶೇ 32ರಷ್ಟು ಏರಿಕೆಯಾಗಿ, 14.7 ಲಕ್ಷ ಕೋಟಿ ಅಮೆರಿಕನ್ ಡಾಲರ್ ತಲುಪಿದೆ. ಇದನ್ನು ರೂಪಾಯಿ ಲಕ್ಷಗಳಲ್ಲಿ ಹೇಳಬೇಕಾದರೆ ಒಂದು ಸಾವಿರ ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಒಂದು ಅಮೆರಿಕನ್ ಡಾಲರ್ಗೆ ಭಾರತದ ರೂಪಾಯಿ ಮೌಲ್ಯ 72.86 ಇದೆ.
ಭಾರತೀಯ ಉದ್ಯಮಿ ಮತ್ತು ಏಷ್ಯಾದ ಅತ್ಯಂತ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಹ್ಯುರನ್ ಭಾರತ ಶ್ರೀಮಂತರ ಪಟ್ಟಿ 2021ರಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ 8500 ಕೋಟಿ ಅಮೆರಿಕನ್ ಡಾಲರ್ ಆಗಿದೆ. ಇದನ್ನೇ ಭಾರತದ ರೂಪಾಯಿ ಲೆಕ್ಕದಲ್ಲಿ ನೋಡುವುದಾದರೆ 6.12 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಕರ್ನಾಟಕವನ್ನು ಮೂರು ವರ್ಷ ತನ್ನ ದುಡ್ಡಿಂದ ನಡೆಸಿಕೊಂಡು ಹೋಗಬಹುದು ಅಷ್ಟು ಆಸ್ತಿ ಮುಕೇಶ್ ಅಂಬಾನಿ ಅವರ ಬಳಿ ಇದ್ದಂತಾಯಿತು.
ಹ್ಯುರನ್ ಪಟ್ಟಿಯ ಪ್ರಕಾರ ಭಾರತೀಯರು 209 ಮಂದಿ ಶತಕೋಟ್ಯಧಿಪತಿಗಳಿದ್ದಾರೆ. ಅದರಲ್ಲಿ 177 ಮಂದಿ ಭಾರತದಲ್ಲಿ ವಾಸವಿದ್ದಾರೆ. ಇದು ಜನವರಿ 15, 2021ರ ಸಂಪತ್ತಿನ ಲೆಕ್ಕಾಚಾರ. ಭಾರತದ ಅತ್ಯಂತ ಸಿರಿವಂತ ಟಾಪ್ 10 ಯಾರು? ಅವರ ಆಸ್ತಿ ಮೌಲ್ಯ ಎಂಬ ವಿವರ ಹೀಗಿದೆ:
ಮುಕೇಶ್ ಅಂಬಾನಿ- ರಿಲಯನ್ಸ್ ಇಂಡಸ್ಟ್ರೀಸ್- 8300 ಕೋಟಿ ಯುಎಸ್ಡಿ
ಗೌತಮ್ ಅದಾನಿ ಕುಟುಂಬ- ಅದಾನಿ ಸಮೂಹ- 3200 ಕೋಟಿ ಯುಎಸ್ಡಿ
ಶಿವ್ ನಾಡಾರ್ ಕುಟುಂಬ- ಎಚ್ಸಿಎಲ್ ಟೆಕ್ನಾಲಜೀಸ್- 2700 ಕೋಟಿ ಯುಎಸ್ಡಿ
ಲಕ್ಷ್ಮಿ ಎನ್. ಮಿತ್ತಲ್- ಅರ್ಸೆಲರ್ ಮಿತ್ತಲ್- 1900 ಕೋಟಿ ಯುಎಸ್ಡಿ
ಸೈರಸ್ ಪೂನವಾಲಾ- ಸೆರಮ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ- 1850 ಕೋಟಿ ಯುಎಸ್ಡಿ
ಹಿಂದೂಜಾ ಸಹೋದರರು- ಹಿಂದೂಜಾ ಸಮೂಹ- 1800 ಕೋಟಿ ಯುಎಸ್ಡಿ
ಉದಯ್ ಕೊಟಕ್- ಕೊಟಕ್ ಮಹೀಂದ್ರಾ ಬ್ಯಾಂಕ್- 1500 ಕೋಟಿ ಯುಎಸ್ಡಿ
ರಾಧಾಕಿಶನ್ ದಮಾನಿ ಮತ್ತು ಕುಟುಂಬ- ಅವೆನ್ಯೂ ಸೂಪರ್ಮಾರ್ಟ್- 1450 ಕೋಟಿ ಯುಎಸ್ಡಿ
ಜಯ್ ಚೌಧರಿ- Zscaler- 1300 ಕೋಟಿ ಯುಎಸ್ಡಿ
ದಿಲೀಪ್ ಸಾಂಘ್ವಿ ಮತ್ತು ಕುಟುಂಬ- ಸನ್ ಫಾರ್ಮಾಸ್ಯುಟಿಕಲ್ಸ್ ಇಂಡಸ್ಟ್ರೀಸ್- 1250 ಕೋಟಿ ಯುಎಸ್ಡಿ
ಇದನ್ನೂ ಓದಿ: Elon Musk: ಎಲಾನ್ ಮಸ್ಕ್ 1.14 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಒಂದೇ ಟ್ವೀಟ್ಗೆ ಖಲಾಸ್
ಇದನ್ನೂ ಓದಿ: Corona impact on global wealth: ಅತಿ ಶ್ರೀಮಂತರಿಗೆ ನಾನಾ ದೇಶದಲ್ಲಿ ನಾನಾ ಅಳತೆಗೋಲು
Published On - 5:27 pm, Wed, 3 March 21