ಚಿಕ್ಕಬಳ್ಳಾಪುರ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಆತ, ನೆಮ್ಮದಿಯಾಗಿ ಇರೋಣ ಅಂತ ಸ್ವಯಂ ನಿವೃತ್ತಿ ಪಡೆದಿದ್ರು, ಆದ್ರೆ ನಿವೃತ್ತಿ ಪಡೆದ ಕೆಲವೇ ವರ್ಷಗಳಲ್ಲಿ ಅವರ ಜೀವನ ಬೀದಿಗೆ ಬಂದಿದೆ. ಅವ್ರು ಈಗಿರುವ ಪರಿಸ್ಥಿತಿಯನ್ನ ನೀವು ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಿ.
ಉದ್ದ ಗಡ್ಡ.. ಮೀಸೆ.. ಗಲೀಜಾಗಿರುವ ಬಟ್ಟೆ.. ಬೀದಿ ಬೀದಿಯಲ್ಲಿ ಚಿಂದಿ ಆಯುತ್ತಿರುವ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ, ಇವರೇ ನಾವು ಹೇಳಿದ ನಿವೃತ್ತ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಧುಸೂದನ್ ರಾವ್.ಯಾರೂ ಊಹಿಸಲು ಆಗದಂತಹ ಸ್ಥಿತಿಗೆ ತಲುಪಿದ್ದಾರೆ. ಅಷ್ಟಕ್ಕೂ ನಿವೃತ್ತ ಪೊಲೀಸ್ ಅಧಿಕಾರಿಗೆ ಇಂಥ ಗತಿಯಾದ್ರೂ ಯ್ಯಾಕೆ ಬಂತು ಅಂತ ಅವರೆ ಹೇಳಿಕೊಂಡಿದ್ದಾರೆ.
ಮಧುಸೂದನ್ ಗೆ ಪ್ರತಿ ತಿಂಗಳು 9 ಸಾವಿರ ರೂಪಾಯಿ ಪೆನಷನ್ ಬರ್ತಿದೆ, ಅಕೌಂಟ್ ನಲ್ಲಿ ಲಕ್ಷ ಲಕ್ಷ ಹಣ ಇದೆ ಆದ್ರೂ ಅದ್ಯಾವುದನ್ನು ಪಡೆಯದ ಮಧುಸೂದನ್. ಮಕ್ಕಳ ಸಹವಾಸದಿಂದ ದೂರವಿದ್ದು ಇರೋ ಹಣವನ್ನು ಬಳಸಿಕೊಳ್ಳದೆ ಬೀದಿಯಲ್ಲಿ ಚಿಂದಿ ಕಾಯಕ ಮಾಡಿ ಅದರಿಂದ ಬರುವ ಹಣದಿಂದಲೆ ಕುಡಿಯೋದು, ತಿನ್ನೋದು, ಬೀದಿಯಲ್ಲಿ ಜೀವನ ಮಾಡೋದು ಮಾಡ್ತಿದ್ದಾರೆ. ಬೀದಿ ಜೀವನವೇ ತಮಗೆ ನೆಮ್ಮದಿ ನೀಡ್ತಿದೆ ಅಂತ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.