ಬಾಗಲಕೋಟೆ: ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಅನ್ನಭಾಗ್ಯದ ಅಕ್ಕಿ ಚೀಲಗಳು ಚರಂಡಿ ಮತ್ತು ರಸ್ತೆಯಲ್ಲೆಲ್ಲಾ ಪತ್ತೆಯಾಗಿರುವ ಘಟನೆ ಜಿಲ್ಲೆಯ ಜಮಖಂಡಿಯ ಜೋಳದ ಬಜಾರ್‌ನಲ್ಲಿ ನಡೆದಿದೆ.
ಅನ್ನಭಾಗ್ಯ ಯೋಜನೆಯ 13 ಅಕ್ಕಿ ಮೂಟೆಗಳು ಜೋಳದ ಬಜಾರ್‌ನಲ್ಲಿ ಪತ್ತೆಯಾಗಿದೆ. ಹೀಗಾಗಿ, ಅಕ್ಕಿ ಮೂಟೆಗಳ ಕಳ್ಳ ಸಾಗಾಟಕ್ಕೆ ಯತ್ನಿಸಿ ಕೊನೆಗೆ ಅದನ್ನು ಅಲ್ಲೇ ಬಿಟ್ಟುಹೋಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಘಟನೆ ಬಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.