ತಾಯಿ-ಮಗಳಿದ್ದ ಸ್ಕೂಟರ್​ಗೆ ಬೈಕ್ ಗುದ್ದಿಸಿ.. ಚಿನ್ನಾಭರಣ ದೋಚಿ ಪರಾರಿ!

ರಾಮನಗರ: ಸ್ಕೂಟರ್​ಗೆ ಬೈಕ್​ನಿಂದ ಗುದ್ದಿಸಿದ ದುಷ್ಕರ್ಮಿಗಳು ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯ ಶಿವನಹಳ್ಳಿ ಗ್ರಾಮದ ಬಳಿ ಇಂದು ನಡೆದಿದೆ. ಸಂಬಂಧಿಕರ ಮದುವೆಗೆಂದು ಹೊನ್ನಿಗಾನಹಳ್ಳಿಗೆ ಗೌರಮ್ಮ ಹಾಗೂ ಅವರ ಪುತ್ರಿ ರಶ್ಮಿ ಹೋಂಡಾ ಆಕ್ಟೀವಾದಲ್ಲಿ ಹೋಗುತ್ತಿದ್ದರು. ಈ ಸಂದರ್ಭ, ಅವರ ಸ್ಕೂಟರ್​ಗೆ ತಮ್ಮ ಬೈಕ್ ಡಿಕ್ಕಿ ಹೊಡೆಸಿದ ಇಬ್ಬರು ಹೆಲ್ಮೆಟ್​ಧಾರಿ ದುಷ್ಕರ್ಮಿಗಳು 55 ಗ್ರಾಂ ಮಾಂಗಲ್ಯ ಸರ, ನೆಕ್ಲೆಸ್ ಹಾಗೂ ಲಾಂಗ್​ ಚೈನ್​ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳು ಹೆಲ್ಮೆಟ್ ಧರಿಸಿದ್ದರಿಂದ ಅವರ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. […]

ತಾಯಿ-ಮಗಳಿದ್ದ ಸ್ಕೂಟರ್​ಗೆ ಬೈಕ್ ಗುದ್ದಿಸಿ.. ಚಿನ್ನಾಭರಣ ದೋಚಿ ಪರಾರಿ!
Edited By:

Updated on: Nov 20, 2020 | 6:05 PM

ರಾಮನಗರ: ಸ್ಕೂಟರ್​ಗೆ ಬೈಕ್​ನಿಂದ ಗುದ್ದಿಸಿದ ದುಷ್ಕರ್ಮಿಗಳು ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯ ಶಿವನಹಳ್ಳಿ ಗ್ರಾಮದ ಬಳಿ ಇಂದು ನಡೆದಿದೆ.
ಸಂಬಂಧಿಕರ ಮದುವೆಗೆಂದು ಹೊನ್ನಿಗಾನಹಳ್ಳಿಗೆ ಗೌರಮ್ಮ ಹಾಗೂ ಅವರ ಪುತ್ರಿ ರಶ್ಮಿ ಹೋಂಡಾ ಆಕ್ಟೀವಾದಲ್ಲಿ ಹೋಗುತ್ತಿದ್ದರು. ಈ ಸಂದರ್ಭ, ಅವರ ಸ್ಕೂಟರ್​ಗೆ ತಮ್ಮ ಬೈಕ್ ಡಿಕ್ಕಿ ಹೊಡೆಸಿದ ಇಬ್ಬರು ಹೆಲ್ಮೆಟ್​ಧಾರಿ ದುಷ್ಕರ್ಮಿಗಳು 55 ಗ್ರಾಂ ಮಾಂಗಲ್ಯ ಸರ, ನೆಕ್ಲೆಸ್ ಹಾಗೂ ಲಾಂಗ್​ ಚೈನ್​ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಆರೋಪಿಗಳು ಹೆಲ್ಮೆಟ್ ಧರಿಸಿದ್ದರಿಂದ ಅವರ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 6:04 pm, Fri, 20 November 20