ಬೆಮೆಲ್ ಕೃಷ್ಣಪ್ಪ ಹತ್ಯೆ ಆರೋಪಿಗಳು ಜೈಲಿಂದಲೇ ಕೊಲೆ ಬೆದರಿಕೆ ಹಾಕ್ತಿದಾರೆ! ಯಾರಿಗೆ?

| Updated By: ಸಾಧು ಶ್ರೀನಾಥ್​

Updated on: Aug 18, 2020 | 10:34 AM

ನೆಲಮಂಗಲ: ಜೈಲಿನಿಂದಲೇ ಫೋನ್ ಮಾಡಿ ಒಂದು ಕೋಟಿ ಹಣ ನೀಡದಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ರೌಡಿಗಳಾದ ಬೆತ್ತನಗೆರೆ ಮಂಜ ಮತ್ತು ಶಂಕರ ವಿರುದ್ಧ ಮೊಕದ್ದಮೆ ಹಾಕಲಾಗಿದೆ. ಬೆಮೆಲ್ ಕೃಷ್ಣಪ್ಪ ಹತ್ಯೆ ಕೇಸ್‌ ಪ್ರಮುಖ ಆರೋಪಿಗಳು ನೆಲಮಂಗಲದ ತಿಪ್ಪಗೊಂಡನಹಳ್ಳಿಯ ವ್ಯವಸಾಯ ಸಂಘದ ಕಾರ್ಯದರ್ಶಿ ಭೈರೇಗೌಡ ಎಂಬುವವರು ನಟೋರಿಯಸ್ ರೌಡಿಗಳಾದ ಬೆತ್ತನಗೆರೆ ಮಂಜ, ಶಂಕರ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. IPC ಸೆಕ್ಷನ್‌ 384, 504, 506, […]

ಬೆಮೆಲ್ ಕೃಷ್ಣಪ್ಪ ಹತ್ಯೆ ಆರೋಪಿಗಳು ಜೈಲಿಂದಲೇ ಕೊಲೆ ಬೆದರಿಕೆ ಹಾಕ್ತಿದಾರೆ! ಯಾರಿಗೆ?
Follow us on

ನೆಲಮಂಗಲ: ಜೈಲಿನಿಂದಲೇ ಫೋನ್ ಮಾಡಿ ಒಂದು ಕೋಟಿ ಹಣ ನೀಡದಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ರೌಡಿಗಳಾದ ಬೆತ್ತನಗೆರೆ ಮಂಜ ಮತ್ತು ಶಂಕರ ವಿರುದ್ಧ ಮೊಕದ್ದಮೆ ಹಾಕಲಾಗಿದೆ.

ಬೆಮೆಲ್ ಕೃಷ್ಣಪ್ಪ ಹತ್ಯೆ ಕೇಸ್‌ ಪ್ರಮುಖ ಆರೋಪಿಗಳು
ನೆಲಮಂಗಲದ ತಿಪ್ಪಗೊಂಡನಹಳ್ಳಿಯ ವ್ಯವಸಾಯ ಸಂಘದ ಕಾರ್ಯದರ್ಶಿ ಭೈರೇಗೌಡ ಎಂಬುವವರು ನಟೋರಿಯಸ್ ರೌಡಿಗಳಾದ ಬೆತ್ತನಗೆರೆ ಮಂಜ, ಶಂಕರ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. IPC ಸೆಕ್ಷನ್‌ 384, 504, 506, 34ಅಡಿ ಕೇಸ್ ದಾಖಲಾಗಿದೆ. 2 ಗಂಟೆಯಲ್ಲಿ ಹಣ ಕೊಡದಿದ್ರೆ ಹುಡುಗರನ್ನ ಕಳಿಸುತ್ತೇವೆ.

ಹುಡುಗರನ್ನ ಕಳಿಸಿ ಕೊಲೆ ಮಾಡುವುದಾಗಿ ಜೈಲಿನಲ್ಲೇ ಕೂತು ಮಂಜ ಮತ್ತು ಶಂಕರ ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆ. ಇವರಿಬ್ಬರು ವಿವಿಧ ಕೇಸ್‌ಗಳು ಸೇರಿದಂತೆ ಬೆಮೆಲ್ ಕೃಷ್ಣಪ್ಪ ಹತ್ಯೆ ಕೇಸ್‌ನಲ್ಲೂ ಪ್ರಮುಖ ಆರೋಪಿಗಳಾಗಿದ್ದಾರೆ.

Published On - 10:24 am, Tue, 18 August 20