ಅರಮನೆ ಆವರಣದಲ್ಲಿ ರಾಜವಂಶಸ್ಥ ಯದುವೀರ್​, ಪುಟ್ಟ ಆದ್ಯವೀರ್​ ರೌಂಡ್ಸ್!

ಮೈಸೂರು: ದಸರಾ ಹಬ್ಬದಾಚರಣೆ ಮತ್ತು ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದ ಬಳಿಕ ಕೊಂಚ ರಿಲಾಕ್ಸ್​ ಆಗಿದ್ದ ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರು ತಮ್ಮ ಪುತ್ರನೊಟ್ಟಿಗೆ ಅರಮನೆ ಆವರಣದಲ್ಲಿದ್ದ ಗಜಪಡೆಯ ವೀಕ್ಷಣೆ ಮಾಡಿದರು. ಪುತ್ರ ಆದ್ಯವೀರ್​ ಜೊತೆ ತಮ್ಮ BMW ಕಾರ್​ನಲ್ಲಿ ರೌಂಡ್ಸ್ ಹಾಕಿದ ಯದುವೀರ್​ ಮೊದಲು ಅರಮನೆಯ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಗಜಪಡೆಯ ಸಾರಥಿ ಅಭಿಮನ್ಯು ಹಾಗೂ ಇತರೆ ಆನೆಗಳಿರುವ ಬಿಡಾರಕ್ಕೆ ಬಂದು ಅವುಗಳೊಂದಿಗೆ ಪೋಟೋ ಕ್ಲಿಕ್ಕಿಸಿಕೊಂಡರು. ಈ ಸಂದರ್ಭದಲ್ಲಿ ಅಭಿಮನ್ಯು […]

ಅರಮನೆ ಆವರಣದಲ್ಲಿ ರಾಜವಂಶಸ್ಥ ಯದುವೀರ್​, ಪುಟ್ಟ ಆದ್ಯವೀರ್​ ರೌಂಡ್ಸ್!
Edited By:

Updated on: Oct 28, 2020 | 12:04 PM

ಮೈಸೂರು: ದಸರಾ ಹಬ್ಬದಾಚರಣೆ ಮತ್ತು ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದ ಬಳಿಕ ಕೊಂಚ ರಿಲಾಕ್ಸ್​ ಆಗಿದ್ದ ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರು ತಮ್ಮ ಪುತ್ರನೊಟ್ಟಿಗೆ ಅರಮನೆ ಆವರಣದಲ್ಲಿದ್ದ ಗಜಪಡೆಯ ವೀಕ್ಷಣೆ ಮಾಡಿದರು.

ಪುತ್ರ ಆದ್ಯವೀರ್​ ಜೊತೆ ತಮ್ಮ BMW ಕಾರ್​ನಲ್ಲಿ ರೌಂಡ್ಸ್ ಹಾಕಿದ ಯದುವೀರ್​ ಮೊದಲು ಅರಮನೆಯ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಗಜಪಡೆಯ ಸಾರಥಿ ಅಭಿಮನ್ಯು ಹಾಗೂ ಇತರೆ ಆನೆಗಳಿರುವ ಬಿಡಾರಕ್ಕೆ ಬಂದು ಅವುಗಳೊಂದಿಗೆ ಪೋಟೋ ಕ್ಲಿಕ್ಕಿಸಿಕೊಂಡರು. ಈ ಸಂದರ್ಭದಲ್ಲಿ ಅಭಿಮನ್ಯು ಆನೆಯನ್ನು ಮುಟ್ಟಿ ಪುಟ್ಟ ಆದ್ಯವೀರ್​ ಸಂತಸ ತೋರಿದರು.