ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕನಿಗೆ ಇಂದು ಅಪೋಲೊ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಭಾನುವಾರ ಸಂಜೆ ಬೆಂಗಳೂರಿನ ಮಂಜುನಾಥ ನಗರದ ಮನೆಯಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಬೆನ್ನುಮೂಳೆಗೆ ಪೆಟ್ಟು ಬಿದ್ದಿತ್ತು. ಈ ಕಾರಣ ವೃಕ್ಷ ಮಾತೆಗೆ ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾಲು ಮರದ ತಿಮ್ಮಕ್ಕ 1950-1970ರ ಅವಧಿಯಲ್ಲಿ ಹುಲಿಕರ್-ಕುದೂರು ಹೆದ್ದಾರಿಯಲ್ಲಿ ಸುಮಾರು 4km ದೂರದಲ್ಲಿ 385 ಮರಗಳನ್ನು ನೆಟ್ಟಿ ಬೆಳೆಸಿದ್ದಾರೆ. ಸದ್ಯ ಈಗ ಈ ಮರಗಳನ್ನು ಬೆಳೆಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿದೆ. ಆದ್ರೆ ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿಗಾಗಿ ಮರಗಳನ್ನು ಕಡಿದಿದೆ ಎಂಬ ಆರೋಪ ಸಹ ಇದೆ.
ತಿಮ್ಮಕ್ಕ ತಮ್ಮ ಇಳಿ ವಯಸ್ಸಿನಲ್ಲೂ ಪರಿಸರ ರಕ್ಷಣೆ, ಕಾಳಜಿಯನ್ನು ಮರೆತಿಲ್ಲ. ನಿಸ್ವಾರ್ಥ ಮನಸ್ಸಿನಿಂದ ಪರಿಸರಕ್ಕೆ ಸೇವೆ ಸಲ್ಲಿಸಿದ್ದಾರೆ. ಇವರ ಈ ಕಾರ್ಯವನ್ನು ಮೆಚ್ಚಿ ಈಗಾಗಲೇ ಹಲವು ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಲಭಿಸಿದೆ. ಬಿಬಿಸಿ 2016ರಲ್ಲಿ ಜಗತ್ತಿನ ಅತಿ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾಲು ಮರದ ತಿಮ್ಮಕ್ಕ ಸ್ಥಾನ ಪಡೆದಿದ್ದಾರೆ. ಇವರಿಗೆ 2019ರ ಮಾರ್ಚ್ನಲ್ಲಿ ಪದ್ಮ ಶ್ರೀ ಪ್ರಶಸ್ತಿ ಲಭಿಸಿತ್ತು.
ಸಾಲುಮರದ ತಿಮ್ಮಕ್ಕರನ್ನು ನೋಡಿ ಕಲೀರಿ -ಪಟಾಕಿ ಹೊಡಿಬೇಡಿ ಅಂದಿದ್ದಕ್ಕೆ ಕೊಹ್ಲಿಗೆ ಫುಲ್ ಟ್ರೋಲ್!