ಮಾಹಿತಿ ಮುಚ್ಚಿಟ್ಟು ಸೋಂಕಿತೆಗೆ 7 ಲಕ್ಷ ಬಿಲ್ ಕೊಟ್ಟ ಧನದಾಹಿ Saint Philomena

| Updated By:

Updated on: Jul 30, 2020 | 8:51 PM

ಬೆಂಗಳೂರು: ನಗರದ ಧನದಾಹಿ ಖಾಸಗಿ ಆಸ್ಪತ್ರೆಯೊಂದರ ‘ಸೋಂಕಿತರ ಸುಲಿಗೆ’ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಈ ಆರೋಪ ಸೇಂಟ್ ಫಿಲೋಮಿನಾ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ. ಪಾಟರಿ ಟೌನ್​ ನಿವಾಸಿಯಾಗಿದ್ದ ಸೋಂಕಿತೆಯನ್ನ ಚಿಕಿತ್ಸೆಗೆಂದು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮಧ್ಯೆ ಕೊವಿಡ್ ಚಿಕಿತ್ಸೆ, ಲ್ಯಾಬ್​ ಚಾರ್ಜ್ ಹಾಗೂ ವೈದ್ಯರ ಭೇಟಿಗೆ ಎಂದು ಹೇಳಿ ಸೋಂಕಿತೆಗೆ ಆಸ್ಪತ್ರೆಯು 7,02,778 ರೂಪಾಯಿ ಬಿಲ್ ನೀಡಿದೆ. ಅಚ್ಚರಿಯೆಂದರೆ ಬಿಲ್‌ನಲ್ಲಿ ಕೊವಿಡ್‌ಗೆ ಚಿಕಿತ್ಸೆ ಎಂದು ನಮೂದಿಸಿರುವ ಆಸ್ಪತ್ರೆಯು BU ನಂಬರ್​ ನೀಡಿಲ್ಲವಂತೆ. […]

ಮಾಹಿತಿ ಮುಚ್ಚಿಟ್ಟು ಸೋಂಕಿತೆಗೆ 7 ಲಕ್ಷ ಬಿಲ್ ಕೊಟ್ಟ ಧನದಾಹಿ Saint Philomena
Follow us on

ಬೆಂಗಳೂರು: ನಗರದ ಧನದಾಹಿ ಖಾಸಗಿ ಆಸ್ಪತ್ರೆಯೊಂದರ ‘ಸೋಂಕಿತರ ಸುಲಿಗೆ’ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಈ ಆರೋಪ ಸೇಂಟ್ ಫಿಲೋಮಿನಾ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ.

ಪಾಟರಿ ಟೌನ್​ ನಿವಾಸಿಯಾಗಿದ್ದ ಸೋಂಕಿತೆಯನ್ನ ಚಿಕಿತ್ಸೆಗೆಂದು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮಧ್ಯೆ ಕೊವಿಡ್ ಚಿಕಿತ್ಸೆ, ಲ್ಯಾಬ್​ ಚಾರ್ಜ್ ಹಾಗೂ ವೈದ್ಯರ ಭೇಟಿಗೆ ಎಂದು ಹೇಳಿ ಸೋಂಕಿತೆಗೆ ಆಸ್ಪತ್ರೆಯು 7,02,778 ರೂಪಾಯಿ ಬಿಲ್ ನೀಡಿದೆ.

ಅಚ್ಚರಿಯೆಂದರೆ ಬಿಲ್‌ನಲ್ಲಿ ಕೊವಿಡ್‌ಗೆ ಚಿಕಿತ್ಸೆ ಎಂದು ನಮೂದಿಸಿರುವ ಆಸ್ಪತ್ರೆಯು BU ನಂಬರ್​ ನೀಡಿಲ್ಲವಂತೆ. ಸರ್ಕಾರದ ರೆಫರೆನ್ಸ್‌ ಮೇರೆಗೆ ಆಸ್ಪತ್ರೆಗೆ ಸೇರಿಸಿಕೊಳ್ಳಲು ಬಿಟ್ಟಿಲ್ಲ ಎಂದು ತಿಳಿದುಬಂದಿದೆ. ಸರ್ಕಾರದ ರೆಫರೆನ್ಸ್‌ನಿಂದ ಬಂದ್ರೆ ಆಸ್ಪತ್ರೆ ನಿಗದಿತ ದರ ಪಡೆಯಬೇಕಾಗುತ್ತದೆ. ಹೀಗಾಗಿ, ಸೋಂಕಿತೆಯ ಕೊವಿಡ್ BU ನಂಬರ್ ನೀಡದೆ ಸೇಂಟ್ ಫಿಲೋಮಿನಾ ಮುಚ್ಚಿಟ್ಟಿದೆ ಎಂಬ ಆರೋಪ ಕೇಳಿಬಂದಿದೆ.

ಜೊತೆಗೆ, ಸೋಂಕಿತೆಯ ಕುಟುಂಬಸ್ಥರು ಈಗಾಗಲೇ 3 ಲಕ್ಷ ರೂ. ಖರ್ಚು ಮಾಡಿದ್ದು ಉಳಿದ ಹಣಕ್ಕಾಗಿ ಪರದಾಡುತ್ತಿದ್ದಾರೆ. ಪೇಂಟಿಂಗ್ ಕೆಲಸ ಮಾಡೋ ಪೇಷಂಟ್ ಪತಿ ಬಳಿ ಹುಡುಕಾಡಿದರೂ ಕೈಯಲ್ಲಿ ಕಾಸಿಲ್ಲ. ಹೀಗಾಗಿ, ಅತನು ದುಡ್ಡಿಗಾಗಿ ಅಲೆಯುವಂಥ ಪರಿಸ್ಥಿತಿ ಎದುರಾಗಿದೆ.

Published On - 11:00 am, Wed, 29 July 20