’ಯುವ ಜನಾಂಗ ಸಂಪೂರ್ಣವಾಗಿ ಸಮತೋಲನ ಕಳೆದು ಕೊಳ್ತಿದೆ’
ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜಧಾನಿಯಲ್ಲಿ ಡ್ರಗ್ಸ್ ದಂಧೆ ಜೋರಾಗಿದೆ. ಪೊಲೀಸರು ಇದರ ಜಾಡು ಹಿಡಿದು, ಇದರ ಹಿಂದಿರುವ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಈಗ ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ಬರೋಬ್ಬರಿ ಒಂದೂವರೆ ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದಾರೆ. ಹಾಗೂ ಕೇರಳ ಮೂಲದ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿ LSD, MDMA ಡ್ರಗ್ ಸೀಜ್ ಮಾಡಿದ್ದಾರೆ. ಶಹದ್ ಮೊಹಮ್ಮದ್, ಅಜ್ಮಲ್, ಅಜಿನ್ ಕೆಜಿವರ್ಗೇಶ್, ನಿತಿನ್ ಮೋಹನ್ ಸೇರಿದಂತೆ ಕೇರಳ ಮೂಲದ […]

ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜಧಾನಿಯಲ್ಲಿ ಡ್ರಗ್ಸ್ ದಂಧೆ ಜೋರಾಗಿದೆ. ಪೊಲೀಸರು ಇದರ ಜಾಡು ಹಿಡಿದು, ಇದರ ಹಿಂದಿರುವ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಈಗ ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ಬರೋಬ್ಬರಿ ಒಂದೂವರೆ ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದಾರೆ. ಹಾಗೂ ಕೇರಳ ಮೂಲದ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿ LSD, MDMA ಡ್ರಗ್ ಸೀಜ್ ಮಾಡಿದ್ದಾರೆ. ಶಹದ್ ಮೊಹಮ್ಮದ್, ಅಜ್ಮಲ್, ಅಜಿನ್ ಕೆಜಿವರ್ಗೇಶ್, ನಿತಿನ್ ಮೋಹನ್ ಸೇರಿದಂತೆ ಕೇರಳ ಮೂಲದ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಕಿಂಗ್ ಪಿನ್ ಧೀರಜ್ಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.
ಕಿಂಗ್ ಪಿನ್ ಧೀರಜ್ಗಾಗಿ ಹುಡುಕಾಟ ಆರೋಪಿಗಳು ಕಿಂಗ್ ಪಿನ್ ಧೀರಜ್ ಹೇಳಿದಂತೆ ಡ್ರಗ್ ಡೀಲ್ ಮಾಡ್ತಿದ್ದರು. ಧೀರಜ್ ನೆದರ್‌ಲ್ಯಾಂಡ್, ಜರ್ಮನಿಯಿಂದ ಪೋಸ್ಟಲ್ ಮೂಲಕ ಡ್ರಗ್ಸ್ ತರಿಸ್ತಿದ್ದ. ತನ್ನ ಹುಡುಗರ ಮೂಲಕ ಡ್ರಗ್ಸ್ ರಿಸೀವ್ ಮಾಡಿಸಿಕೊಂಡು ಮಾರಾಟ ಮಾಡ್ತಿದ್ದ. ಯಾರಿಗೆ ಡ್ರಗ್ಸ್ ಮಾರಾಟ ಮಾಡ್ಬೇಕು ಅಂತಾ ಮೆಸೇಜ್ ಕೊಡ್ತಿದ್ದ. ಕಾಲು ಇಂಚು ಇರೊ ಪೇಪರ್ನ ಕಡಿಮೆ ಅಂದ್ರೆ ಐದು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಡಿಜೆಗಳಲ್ಲಿ ಹೆಚ್ಚಾಗಿ ಎಲ್ಎಸ್ಡಿ ಮಾರಾಟ ಮಾಡ್ತಿದ್ದರು. ಸದ್ಯ ಈಗ ಕಿಂಗ್ ಪಿನ್ ಧೀರಜ್ಗಾಗಿ ಬಲೆ ಬೀಸಲಾಗಿದೆ.
ಯುವ ಜನಾಂಗ ಸಂಪೂರ್ಣವಾಗಿ ಸಮತೋಲನ ಕಳೆದು ಕೊಳ್ತಿದೆ ಮಾದಕ ವಸ್ತುಗಳ ಸೇವನೆಯಿಂದ ಯುವ ಜನಾಂಗ ಸಂಪೂರ್ಣವಾಗಿ ಸಮತೋಲನ ಕಳೆದು ಕೊಳ್ತಿದೆ. ಇಡೀ ಸಮಾಜಕ್ಕೆ ಈ ವಸ್ತು ಮಾರಕವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿ ಮಾದಕವಸ್ತು ಜಾಲಕ್ಕೆ ಬ್ರೇಕ್ ಹಾಕಲು ಸೂಚಿಸಿದ್ದಾರೆ.
ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ರಾಜ್ಯದ ಪ್ರಮುಖ ನಗರಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಈ ವರ್ಷ ಜೂನ್ ಅಂತ್ಯದ ವೇಳೆಗೆ 533 ಕೇಸ್ ದಾಖಲಾಗಿದೆ. 14 ವಿದೇಶಿಯರು ಸೇರಿ 799 ಆರೋಪಿಗಳ ಬಂಧನವಾಗಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ರು.
Published On - 11:47 am, Wed, 29 July 20