ಆಟೋ ಹತ್ತಿದ ಯುವತಿ ಮೇಲೆ ಕಾಮುಕ ಚಾಲಕನಿಂದ ನೀಚ ಕೃತ್ಯ, ಆರೋಪಿ ಬಂಧನ

|

Updated on: Dec 18, 2020 | 7:24 AM

ಆಟೋ ಹತ್ತಿದ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ‌. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಆಟೋ ಹತ್ತಿದ ಯುವತಿ ಮೇಲೆ ಕಾಮುಕ ಚಾಲಕನಿಂದ ನೀಚ ಕೃತ್ಯ, ಆರೋಪಿ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಆಟೋ ಹತ್ತಿದ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದೇವನಹಳ್ಳಿಯ ನಿವಾಸಿ ಮುಬಾರಕ್(28) ಬಂಧಿತ ಆರೋಪಿ. ಸಂತ್ರಸ್ತೆ ನೀಡಿದ ದೂರು ಆಧರಿಸಿ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ.

ಕಂಪ್ಯೂಟರ್ ಸೈನ್ಸ್ ಕೋರ್ಸ್ ವ್ಯಾಸಂಗದ ಜತೆಗೆ ಪಾರ್ಟ್ ಟೈಂ ಕೆಲಸ ಮಾಡ್ತಿದ್ದ ಸಂತ್ರಸ್ತೆ ಮದುವೆಗಳಲ್ಲಿ ಸ್ವಾಗತಕಾರರಾಗಿ ಕೆಲಸ ಮಾಡುತ್ತಿದ್ದರು. ಆದ್ರೆ ಅಂದು ವಿವಾಹ ಸಮಾರಂಭ ಮುಗಿಯುವುದರೊಳಗೆ ತಡ ರಾತ್ರಿಯಾಗಿತ್ತು. ಹೀಗಾಗಿ ಆಕೆ ರಾತ್ರಿಯಿಡಿ ಮಂಟಪದಲ್ಲಿಯೇ ತಗ್ಗಿ ಬೆಳಗ್ಗೆ 6ಗಂಟೆಗೆ ಥಣಿಸಂದ್ರ ಮುಖ್ಯರಸ್ತೆ ಬಳಿ ಬಸ್‌ಗಾಗಿ ಕಾಯುವ ವೇಳೆ ಬಸ್​ಗೆ ಕಾದರೇ ಸಮಯ ವ್ಯರ್ಥ ಎಂದು ಆರೋಪಿ ಮುಬಾರಕ್ ಆಟೋ ಹತ್ತಿದ್ದಾರೆ.

ಕೃತ್ಯ ಎಸಗಿ ಎಸ್ಕೇಪ್ ಆದ:
ನಾಗವಾರದ ಕಡೆ ಹೋಗಲು ತಿಳಿಸಿದ್ದಾರೆ. ಆದರೆ ಆರೋಪಿ ಆಟೋ ಚಾಲಕ ಸಂತ್ರಸ್ತೆ ಹೇಳಿದ ಸ್ಥಳದಲ್ಲಿ ನಿಲ್ಲಿಸದೆ ಬೇರೆ ಕಡೆ ಹೋಗಿ ಸ್ನೇಹಿತರೊಬ್ಬರು ಹಣ ನೀಡುತ್ತಾರೆ, ಪಡೆಯಬೇಕೆಂದಿದ್ದಾನೆ. ಆಟೋ ಚಾಲಕನ ಮಾತು ನಂಬಿ ಸಂತ್ರಸ್ತೆ ಸುಮ್ಮನಾಗಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೃತ್ಯವೆಸಗಿ ಯುವತಿಯನ್ನ ಬಿಟ್ಟು ಪರಾರಿಯಾಗಿದ್ದಾನೆ.

ನಂತರ ರಸ್ತೆಯಲ್ಲಿ ಹೋಗುತ್ತಿದ್ದವರ ಸಹಾಯ ಪಡೆದು ಸಂತ್ರಸ್ತೆ ಮನೆಗೆ ಹೋಗಿದ್ದಾರೆ. ಆಟೋ ನಂಬರ್ ಸಮೇತ ಠಾಣೆಗೆ ದೂರು ನೀಡಿದ್ದಾರೆ. ಯುವತಿ ದೂರು ಆಧರಿಸಿ ಆರೋಪಿ ಮುಬಾರಕ್​ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ‌. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಫ್ರೆಂಡ್ಸ್ ಜೊತೆ ಎಣ್ಣೆ ಪಾರ್ಟಿ ಮಾಡಿ ಮನೆಗೆ ಹೋಗುತ್ತಿದ್ದವ ನಡು ರಸ್ತೆಯಲ್ಲಿ ಭೀಕರವಾಗಿ ಕೊಲೆಯಾದ..