ಒಂದಲ್ಲ-ಎರಡಲ್ಲ, ಸ್ಯಾಮ್​ಸಂಗ್​ನ ಈ 4 ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ

|

Updated on: Jan 11, 2024 | 3:08 PM

Samsung Galaxy Mobile Price Cut: ಸ್ಯಾಮ್​ಸಂಗ್ ಗ್ಯಾಲಕ್ಸಿ M14 , ಗ್ಯಾಲಕ್ಸಿ F14 , ಗ್ಯಾಲಕ್ಸಿ M04 ಮತ್ತು ಗ್ಯಾಲಕ್ಸಿ F04 ಬೆಲೆಗಳನ್ನು ಅಧಿಕೃತವಾಗಿ ಕಡಿಮೆ ಮಾಡಲಾಗಿದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಗ್ರಾಹಕರು ರಿಯಾಯಿತಿ ದರದಲ್ಲಿ ಈ ಫೋನ್‌ಗಳನ್ನು ಖರೀದಿಸಬಹುದು.

ಒಂದಲ್ಲ-ಎರಡಲ್ಲ, ಸ್ಯಾಮ್​ಸಂಗ್​ನ ಈ 4 ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ
Samsung
Follow us on

ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್​ಸಂಗ್ (Samsung) ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುವ ಕಂಪನಿ ಆಗಿದೆ. ಪ್ರತಿ ತಿಂಗಳು ಈ ಕಂಪನಿಯ ಫೋನುಗಳು ದೇಶದಲ್ಲಿ ರಿಲೀಸ್ ಆಗುತ್ತವೆ. ಹೀಗೆ ಮೊಬೈಲ್​ಗಳು ಅನಾವರಣಗೊಂಡಾಗ ಸ್ಯಾಮ್​ಸಂಗ್ ತನ್ನ ಹಳೆಯ ಫೋನುಗಳ ಬೆಲೆಯಲ್ಲಿ ಇಳಿಕೆ ಮಾಡುತ್ತದೆ. ಆದರೀಗ ಯಾವುದೇ ಸ್ಮಾರ್ಟ್​ಫೋನ್ಸ್ ಬಿಡುಗಡೆ ಮಾಡಿಲ್ಲದಿದ್ದರೂ ಕಂಪನಿ ತನ್ನ ನಾಲ್ಕು ಫೋನುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ M14 , ಗ್ಯಾಲಕ್ಸಿ F14 , ಗ್ಯಾಲಕ್ಸಿ M04 ಮತ್ತು ಗ್ಯಾಲಕ್ಸಿ F04 ಬೆಲೆಗಳನ್ನು ಅಧಿಕೃತವಾಗಿ ಕಡಿಮೆ ಮಾಡಲಾಗಿದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಗ್ರಾಹಕರು ರಿಯಾಯಿತಿ ದರದಲ್ಲಿ ಈ ಫೋನ್‌ಗಳನ್ನು ಖರೀದಿಸಬಹುದು.

ಸ್ಯಾಮ್​ಸಂಗ್ ಗ್ಯಾಲಕ್ಸಿ M14, F14, M04 ಮತ್ತು F04 ಭಾರತದ ಬೆಲೆಗಳು:

ಫೋನ್                                   ಸ್ಟೋರೇಜ್                           ಬಿಡುಗಡೆ ಬೆಲೆ                           ಹೊಸ ಬೆಲೆ

ಗ್ಯಾಲಕ್ಸಿ M14                           4GB/128GB                                13,490 ರೂ                                12,490 ರೂ

ಇದನ್ನೂ ಓದಿ
ಅನ್ಲಿಮಿಟೆಡ್ ಡೇಟಾ, ಅನ್ಲಿಮಿಟೆಡ್ ಕಾಲ್: ಜಿಯೋದಿಂದ ಧಮಾಕ ಪ್ಲಾನ್ ಬಿಡುಗಡೆ
mAadhaar ಎಂದರೇನು?: ಈ ಅಪ್ಲಿಕೇಶನ್‌ನ ಉಪಯೋಗವೇನು?
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024ಕ್ಕೆ ದಿನಾಂಕ ಫಿಕ್ಸ್: ಯಾವಾಗ?
ಗ್ಯಾಜೆಟ್ ಲೋಕ ಪ್ರವೇಶಿಸಿದ ಹುವೈ ಸ್ಮಾರ್ಟ್​ಫೋನ್

ಗ್ಯಾಲಕ್ಸಿ M14                           6GB/128GB                                14,990 ರೂ                                13,990 ರೂ

ಗ್ಯಾಲಕ್ಸಿ F14                            4GB/128GB                                14,490 ರೂ                                 11,990 ರೂ

ಗ್ಯಾಲಕ್ಸಿ F14                            6GB/128GB                                15,990 ರೂ                                 13,490 ರೂ

ಗ್ಯಾಲಕ್ಸಿ M04                          4GB/64GB                                  8,499 ರೂ                                  7,999 ರೂ

ಗ್ಯಾಲಕ್ಸಿ F04                           4GB/64GB                                  9,499 ರೂ                                   7,999 ರೂ

ಸ್ಯಾಮ್​ಸಂಗ್ ಗ್ಯಾಲಕ್ಸಿ M14 5G ಫೀಚರ್ಸ್

ಡಿಸ್‌ಪ್ಲೇ : 6.6-ಇಂಚಿನ FHD+ IPS LCD ಜೊತೆಗೆ 90Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಲೇಯರ್, ಮತ್ತು ಸೆಲ್ಫಿ ಸ್ನ್ಯಾಪರ್ ಅನ್ನು ಇರಿಸಲು ವಾಟರ್‌ಡ್ರಾಪ್ ನಾಚ್ ನೀಡಲಾಗಿದೆ.

Vivo Y100i Power 5G: ವಿವೋ ಸ್ಮಾರ್ಟ್​ಫೋನ್ ಸರಣಿಗೆ ಮತ್ತೊಂದು ಹೊಸ ಸೇರ್ಪಡೆ

ಬ್ಯಾಟರಿ : 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿ.

OS : ಈ ಫೋನ್ ಆಂಡ್ರಾಯ್ಡ್ 13-ಆಧಾರಿತ OneUI 5.0 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಪ್ರೊಸೆಸರ್ : Exynos 1330 SoC ಗ್ರಾಫಿಕ್ಸ್‌ಗಾಗಿ Mali-G68 MP2 GPU ಜೊತೆಗೆ ಜೋಡಿಸಲಾಗಿದೆ.

RAM/ಸ್ಟೋರೇಜ್ : 4GB LPDDR4x RAM ಮತ್ತು 64GB/128GB ಸಂಗ್ರಹಣೆಯನ್ನು ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾಗಿದೆ.

ಕನೆಕ್ಟಿವಿಟಿ : ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್, NFC, GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಇತರೆ : ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್.

ಕ್ಯಾಮೆರಾಗಳು : 50MP ಮುಖ್ಯ ಕ್ಯಾಮೆರಾ, 2MP ಡೆಪ್ತ್ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಸಂವೇದಕ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 13MP ಸ್ನ್ಯಾಪರ್ ಇದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ F14 5G ಫೀಚರ್ಸ್

ಡಿಸ್ ಪ್ಲೇ: 6.6-ಇಂಚಿನ FHD+ ಇನ್ಫಿನಿಟಿ-V LCD ಸ್ಕ್ರೀನ್ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ.

ಪ್ರೊಸೆಸರ್ : ಎಕ್ಸಿನೊಸ್ 1330 5nm ಪ್ರೊಸೆಸರ್ ಜೊತೆಗೆ Mali-G68 MP2 GPU

RAM/ಸ್ಟೋರೇಜ್ : 4GB/6GB LPDDR4x RAM ಮತ್ತು 128GB ಆಂತರಿಕ ಸಂಗ್ರಹಣೆ, ಇದನ್ನು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ.

ಕ್ಯಾಮೆರಾಗಳು : f/1.8 ದ್ಯುತಿರಂಧ್ರದೊಂದಿಗೆ 50MP ಪ್ರಾಥಮಿಕ ಸಂವೇದಕ, 2MP ಡೆಪ್ತ್ ಮತ್ತು 2MP ಮ್ಯಾಕ್ರೋ ಸಂವೇದಕ. 13MP ಫ್ರಂಟ್ ಕ್ಯಾಮೆರಾ ಇದೆ.

ಇತರೆ : ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್
ಸಂಪರ್ಕ : 5G SA/ NSA, ಡ್ಯುಯಲ್ 4G VoLTE, Wi-Fi 802.11 ac, ಬ್ಲೂಟೂತ್ 5.2, GPS, ಮತ್ತು USB ಟೈಪ್-C.

ಬ್ಯಾಟರಿ : 6000mAh (ವಿಶಿಷ್ಟ) ಬ್ಯಾಟರಿ ಜೊತೆಗೆ 25W ವೇಗದ ಚಾರ್ಜಿಂಗ್.

ಸ್ಯಾಮ್​ಸಂಗ್ ಗ್ಯಾಲಕ್ಸಿ F04 ಫೀಚರ್ಸ್

ಡಿಸ್‌ಪ್ಲೇ : 6.5-ಇಂಚಿನ HD+ LCD ಜೊತೆಗೆ 1600x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು ಸೆಲ್ಫಿ ಶೂಟರ್‌ಗಾಗಿ ವಾಟರ್‌ಡ್ರಾಪ್ ನಾಚ್.

ಪ್ರೊಸೆಸರ್ : IMG PowerVR GE8320 GPU ನೊಂದಿಗೆ ಜೋಡಿಯಾಗಿರುವ ಮೀಡಿಯಾಟೆಕ್ ಹಿಲಿಯೊ P35 SoC ನಿಂದ ಫೋನ್‌ ಚಾಲಿತವಾಗಿವೆ.

RAM ಮತ್ತು ಸಂಗ್ರಹಣೆ : 4GB RAM ಮತ್ತು 128GB ವರೆಗಿನ ಸಂಗ್ರಹಣೆಯನ್ನು ಮೈಕ್ರೊ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ.

ಕ್ಯಾಮೆರಾಗಳು : f/2.2 ದ್ಯುತಿರಂಧ್ರದೊಂದಿಗೆ 13MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸರ್ ಇದೆ. ಸೆಲ್ಫಿ ಶೂಟರ್‌ಗಾಗಿ ಮುಂಭಾಗದಲ್ಲಿ 5MP ಶೂಟರ್ ಇದೆ.

ಬ್ಯಾಟರಿ : 15W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Thu, 11 January 24