ಪಿಯುಸಿ ಮುಗಿದ ಬಳಿಕ ‘ಸಾಕಿನ್ನು’ ಅಂದಿದ್ರು ಸುದೀಪ್: ಸಂಚಿತ್ ಸಂಜೀವ್
ಸಂಚಿತ್ಗೆ ಮೊದಲಿನಿಂದಲೂ ಚಿತ್ರರಂಗದ ಮೇಲೆ ಆಸಕ್ತಿ. ಹೀಗಾಗಿ, ಪಿಯುಸಿ ಮುಗಿದ ಬಳಿಕ ಅವರು ಚಿತ್ರರಂಗದತ್ತ ವಾಲಿದರು.
ಸಂಚಿತ್ ಸಂಜೀವ್ ಅವರು ‘ಜಿಮ್ಮಿ’ ಚಿತ್ರದ (Jimmy Movie) ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರ ಆದಷ್ಟು ಬೇಗೆ ತೆರೆಮೇಲೆ ಬರಲಿ ಅನ್ನೋದು ಅಭಿಮಾನಿಗಳ ಆಸೆ. ಈ ಚಿತ್ರದ ಬಗ್ಗೆ ಸಂಚಿತ್ ಸಂಜೀವ್ ಅವರು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ‘ಪಿಯುಸಿ ಪರೀಕ್ಷೆ ಮುಗಿದ ಬಳಿಕ ಸುದೀಪ್ (Sudeep) ಅವರು ‘ಸಾಕಿನ್ನು, ಬಾ ಚಿತ್ರರಂಗಕ್ಕೆ ಎಂದರು. ನಾಲ್ಕು ತಿಂಗಳ ಬಳಿಕ ಮಾಣಿಕ್ಯ ಸಿನಿಮಾ ಶುರುವಾಯ್ತು. ನಾನು ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಿದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ