ಕಾಂಗ್ರೆಸ್​ನಲ್ಲಿ ಲಿಂಗಾಯತರು ಮತ್ತು ಬಿಜೆಪಿಯಲ್ಲಿ ಮುಸಲ್ಮಾನರು-ಎರಡರ ಅರ್ಥ ಒಂದೇ: ಸಿಎಂ ಇಬ್ರಾಹಿಂ

|

Updated on: Mar 09, 2023 | 7:09 PM

ಸೋಮಣ್ಣ ಅವರು ಜೆಡಿಎಸ್ ಪ್ರಾಡಕ್ಟ್ ಆಗಿರುವುದರಿಂದ ಅವರನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವುದಾಗಿ ಇಬ್ರಾಹಿಂ ಹೇಳಿದರು.

ಬೆಂಗಳೂರು: ತಮಾಷೆ ಮಾಡುವುದರಲ್ಲಿ ಬೇರೆಯವರ ಕಾಲೆಳೆಯುವುದರಲ್ಲಿ ಎತ್ತಿದ ಕೈಯೆನಿಸಿಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಇಂದು ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ಬಿಜೆಪಿಯಲ್ಲಿ ಸಾಬರಿರೋದು ಮತ್ತು ಕಾಂಗ್ರೆಸ್ ನಲ್ಲಿ ಲಿಂಗಾಯತರಿರೋದು-ಎರಡೂ ಒಂದೇ ಅಂತ ಹೇಳಿದರು. ಸಚಿವ ವಿ ಸೋಮಣ್ಣ (V Somanna) ಬಗ್ಗೆ ಮಾತಾಡಿದ ಇಬ್ರಾಹಿಂ, ಅವರ್ಯಾವತ್ತೂ ಕಾಂಗ್ರೆಸ್ ಸೇರೋದಿಲ್ಲ, ಅವರ ಬಗ್ಗೆ ತನಗೆ ಚೆನ್ನಾಗಿ ಗೊತ್ತು ಅಂತ ಹೇಳಿದರು. ಸೋಮಣ್ಣ ಅವರು ಜೆಡಿಎಸ್ ಪ್ರಾಡಕ್ಟ್ (JDS product) ಆಗಿರುವುದರಿಂದ ಅವರನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವುದಾಗಿ ಇಬ್ರಾಹಿಂ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 09, 2023 07:09 PM