ಕಾಂಗ್ರೆಸ್​ನಿಂದ ರಾಜಭವನ ಚಲೋ.. ಟ್ರಾಫಿಕ್ ಜಾಮ್ ಸಮಸ್ಯೆ, ಪೊಲೀಸರಿಂದ ಪರ್ಯಾಯ ಮಾರ್ಗ

|

Updated on: Jan 20, 2021 | 9:50 AM

ಬೆಂಗಳೂರಿನ ಕೆಲ ಮಾರ್ಗಗಳಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ. ಕಾರ್ಪೊರೇಷನ್, ವಿಧಾನಸೌಧ, ಬನಶಂಕರಿಯತ್ತ ತೆರಳುವ ವಾಹನಗಳ ಸಂಚಾರ ಮಾರ್ಗ ಬದಲಾಯಿಸಿಲಾಗಿದೆ. ಓಕಳಿಪುರಂ ಜಂಕ್ಷನ್‌ಗೆ ವಾಹನಗಳಿಗೆ ಪ್ರವೇಶ ಇಲ್ಲ. ಓಕಳಿಪುರಂನಿಂದ ಕೃಷ್ಣ ಫ್ಲೋರ್ ಮಿಲ್ ಕಡೆ ಡೈವರ್ಟ್ ಮಾಡಲಾಗಿದೆ.

ಕಾಂಗ್ರೆಸ್​ನಿಂದ ರಾಜಭವನ ಚಲೋ.. ಟ್ರಾಫಿಕ್ ಜಾಮ್ ಸಮಸ್ಯೆ, ಪೊಲೀಸರಿಂದ ಪರ್ಯಾಯ ಮಾರ್ಗ
ಸಂಗ್ರಹ ಚಿತ್ರ
Follow us on

ಬೆಂಗಳೂರು: ಸಿಲಿಕಾನ್ ಸಿಟಿಯಲಿಂದು ಕಾಂಗ್ರೆಸ್​ನಿಂದ ಬೃಹತ್ ಪ್ರತಿಭಟನಾ ಱಲಿ ಹಮ್ಮಿಕೊಳ್ಳಲಾಗಿದೆ. ಕೃಷಿ ಕಾಯ್ದೆ, ಬೆಲೆ ಏರಿಕೆ ಖಂಡಿಸಿ ರಾಜಭವನ ಚಲೋ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.

ಬೆಂಗಳೂರಿನ ಕೆಲ ಮಾರ್ಗಗಳಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ. ಕಾರ್ಪೊರೇಷನ್, ವಿಧಾನಸೌಧ, ಬನಶಂಕರಿಯತ್ತ ತೆರಳುವ ವಾಹನಗಳ ಸಂಚಾರ ಮಾರ್ಗ ಬದಲಾಯಿಸಲಾಗಿದೆ. ಓಕಳಿಪುರಂ ಜಂಕ್ಷನ್‌ಗೆ ವಾಹನಗಳಿಗೆ ಪ್ರವೇಶ ಇಲ್ಲ. ಓಕಳಿಪುರಂನಿಂದ ಕೃಷ್ಣ ಫ್ಲೋರ್ ಮಿಲ್ ಕಡೆ ಡೈವರ್ಟ್ ಮಾಡಲಾಗಿದೆ. ಶಾಂತಲಾ ಸಿಲ್ಕ್ ನಿಂದ ಮೆಜೆಸ್ಟಿಕ್ ಗೆ ಬರುವ ವಾಹನ ಡೈವರ್ಟ್ ಮಾಡಲಾಗಿದೆ. ಮಲ್ಲೇಶ್ವರಂ ಸರ್ಕಲ್‌ನಲ್ಲಿಯೇ ವಾಹನಗಳ ಡೈವರ್ಟ್ ಮಾಡಲಾಗಿದ್ದು ರೇಸ್‌ಕೋರ್ಸ್ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಱಲಿ ಆರಂಭವಾಗುತ್ತಿದ್ದಂತೆ ಕೆಲ ರಸ್ತೆಗಳಲ್ಲಿ ಸಂಚಾರ ಬಂದ್ ಆಗಿದೆ. ಕೆಎಸ್ಆರ್ ರೈಲ್ವೆ ನಿಲ್ದಾಣದಿಂದ ಇಂದು ಱಲಿ ಆರಂಭವಾಗುತ್ತಿದ್ದಂತೆ ಶೇಷಾದ್ರಿ ರೋಡ್ ಕ್ಲೋಸ್ ಆಗಿದೆ. ಟ್ರಾಫಿಕ್ ನಿಯಂತ್ರಣಕ್ಕೆ 220 ಟ್ರಾಫಿಕ್ ಪೊಲೀಸರ ನಿಯೋಜನೆ ಮಾಡಲಾಗಿದೆ.

ರಾಜಧಾನಿ ಬೆಂಗಳೂರಲ್ಲಿ ಪೊಲೀಸ್ ಬಿಗಿಬಂದೋಬಸ್ತ್
ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೂ ಭದ್ರತೆ ಕೈಗೊಳ್ಳಲಾಗಿದೆ. ಪಶ್ಚಿಮ ವಿಭಾಗ ಡಿಸಿಪಿ, ಕೇಂದ್ರ ವಿಭಾಗ ಡಿಸಿಪಿ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 6ಕ್ಕೂ ಹೆಚ್ಚು ಕೆಎಸ್​ಆರ್​​ಪಿ ತುಕಡಿ ನಿಯೋಜನೆಗೊಂಡಿದೆ.

ಕೃಷಿ ಕಾಯಿದೆ ವಿರೋಧಿಸಿ ಬೆಂಗಳೂರಿನಲ್ಲಿ ಮೊಳಗಲಿದೆ ‘ಕೈ’ ನಾಯಕರ ಕಹಳೆ, ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್