ಮೈಸೂರಲ್ಲಿ ಬಂದ್ ಕಾವು; ಅರೆಬೆತ್ತಲೆ ಪ್ರತಿಭಟನೆ, ಟೈರ್ಗೆ ಬೆಂಕಿ..
ವಿನೋಬನಗರದಲ್ಲಿ ಪ್ರತಿಭಟನಾಕಾರರು ತೆರೆದಿದ್ದ ಬಟ್ಟೆ ಮಳಿಗೆಗೆ ಮುತ್ತಿಗೆ ಹಾಕಿ, ಬಾಗಿಲು ಮುಚ್ಚಿಸಿದರು. ನೀವು ಹೊಟ್ಟೆಗೆ ಏನು ತಿನ್ನುತ್ತೀರಿ ಎಂದು ಅಂಗಡಿಯವರಿಗೆ ಬೈದಿದ್ದಾರೆ. ಇವರ ಒತ್ತಡಕ್ಕೆ ಮಣಿದ ಅಂಗಡಿಯವರು ಬಾಗಿಲು ಮುಚ್ಚಿದ್ದಾರೆ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಬಂದ್ ಬಿಸಿ ತುಸು ಹೆಚ್ಚಾಗಿಯೇ ಇದೆ. ಇಲ್ಲಿನ ಗನ್ಹೌಸ್ ವೃತ್ತದಲ್ಲಿ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಇನ್ನು ಜೆಎಸ್ಎಸ್ ಕಾಲೇಜಿನ ಬಳಿ ಹೋರಾಟಗಾರರು ಏಕಾಏಕಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಹಿನ್ನೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766 ಟ್ರಾಫಿಕ್ ಜಾಮ್ ಆಗಿತ್ತು. ಈ ವಾಹನ ದಟ್ಟಣೆಯಲ್ಲಿ ಆ್ಯಂಬುಲೆನ್ಸ್ ಸಿಲುಕಿಕೊಂಡಿತ್ತು. ಪೊಲೀಸರು ಬರುತ್ತಿದ್ದಂತೆ ಈ ಪ್ರತಿಭಟನಾಕಾರರು ಕಾಲ್ಕಿತ್ತಿದ್ದಾರೆ.
ಮಳಿಗೆಗೆ ಮುತ್ತಿಗೆ ಹಾಗೇ ವಿನೋಬನಗರದಲ್ಲಿ ಪ್ರತಿಭಟನಾಕಾರರು ತೆರೆದಿದ್ದ ಬಟ್ಟೆ ಮಳಿಗೆಗೆ ಮುತ್ತಿಗೆ ಹಾಕಿ, ಬಾಗಿಲು ಮುಚ್ಚಿಸಿದರು. ನೀವು ಹೊಟ್ಟೆಗೆ ಏನು ತಿನ್ನುತ್ತೀರಿ ಎಂದು ಅಂಗಡಿಯವರಿಗೆ ಬೈದಿದ್ದಾರೆ. ಇವರ ಒತ್ತಡಕ್ಕೆ ಮಣಿದ ಅಂಗಡಿಯವರು ಬಾಗಿಲು ಮುಚ್ಚಿದ್ದಾರೆ.
ಭಾರತ್ ಬಂದ್ ಇದುವರೆಗೆ ಯಾವತ್ತೂ ಯಶಸ್ವಿಯಾಗಿಲ್ಲ.. ತಲೆಕೆಡಿಸಿಕೊಳ್ಳಬೇಡಿ: ಮುಖ್ಯಮಂತ್ರಿ ಯಡಿಯೂರಪ್ಪ
Published On - 12:08 pm, Tue, 8 December 20