Shivamogga Blast ಪ್ರಕರಣಕ್ಕೆ ತಮಿಳುನಾಡು ಲಿಂಕ್​, ಮೃತಪಟ್ಟವರೆಲ್ಲರು ಭದ್ರಾವತಿ ಮೂಲದವರು..!

|

Updated on: Jan 23, 2021 | 11:05 AM

ಕಳೆದ ಐದಾರು ವರ್ಷಗಳಿಂದ ಪ್ರವೀಣ ಮತ್ತು ಮಂಜುನಾಥ್ ಈ ದಂಧೆ ಮಾಡ್ತಿದ್ರಂತೆ. ತಮಿಳುನಾಡಿನಿಂದ ಕರ್ನಾಟಕಕ್ಕೆ ಸ್ಫೋಟಕಗಳನ್ನ ತಂದು ಸಪ್ಲೈ ಮಾಡುತ್ತಿದ್ದರಂತೆ.

Shivamogga Blast ಪ್ರಕರಣಕ್ಕೆ ತಮಿಳುನಾಡು ಲಿಂಕ್​, ಮೃತಪಟ್ಟವರೆಲ್ಲರು ಭದ್ರಾವತಿ ಮೂಲದವರು..!
ಸ್ಫೋಟದಲ್ಲಿ ಛಿದ್ರಗೊಂಡ ವಾಹನ
Follow us on

ಶಿವಮೊಗ್ಗ: ನಗರದ ಹುಣಸೋಡುನಲ್ಲಿ ನಿನ್ನೆ ನಡೆದ ಸ್ಫೋಟ ಪ್ರಕರಣದಲ್ಲಿ ಸ್ಫೋಟಗೊಂಡಿದ್ದ ವಾಹನ ಮಹೀಂದ್ರಾ ಪಿಕ್‌ಅಪ್ ಎಂಬುದು ತಿಳಿದುಬಂದಿದೆ. ಈ ವಾಹನವನ್ನು ಜಿಲಿಟಿನ್ ಕಡ್ಡಿ ಸಾಗಿಸಲು ಬಳಸಲಾಗುತಿತ್ತು.

ಸ್ಪೋಟದಲ್ಲಿ ಮೃತಪಟ್ಟವರೆಲ್ಲರೂ ಭದ್ರಾವತಿಯವರು ಎಂಬುದು ಪತ್ತೆಯಾಗಿದೆ. ಕ್ರಷರ್​ಗಳಿಗೆ ಸ್ಫೋಟಕಗಳನ್ನು ಸಪ್ಲೈ ಮಾಡಲು ಭದ್ರಾವತಿಯ ಅಂತರಗಂಗೆಯಿಂದ ಈ ಟೀಮ್‌ ಬಂದಿತ್ತು. ಮೃತಪಟ್ಟವರು ಭದ್ರಾವತಿಯ ಅಂತರಗಂಗೆಯ ನಿವಾಸಿಗಳಾಗಿದ್ದು, ಗ್ರಾಮದ ಪ್ರವೀಣ ಮತ್ತು ಮಂಜುನಾಥ್ ಎಂಬುವವರ ಮೃತ ದೇಹಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ.

ಜಿಲೇಟಿನ್ ಮತ್ತು ಡೈನಾಮೆಟ್​ಗಳನ್ನು ಗಣಿಗಾರಿಕೆಗೆ ಸಪ್ಲೈ ‌ಮಾಡುತ್ತಿದ್ರು
ಸ್ಪೋಟದಲ್ಲಿ ಮೃತಪಟ್ಟ ಮಂಜುನಾಥ್ ಮತ್ತು ಪ್ರವೀಣ ಇಬ್ಬರು ಜಿಲೇಟಿನ್ ಮತ್ತು ಡೈನಾಮೆಟ್​ಗಳನ್ನು ಗಣಿಗಾರಿಕೆಗೆ ಸಪ್ಲೈ ‌ಮಾಡುತ್ತಿದ್ರು. ಹೀಗಾಗಿ ಇವುಗಳನ್ನು ಸಪ್ಲೈ ಮಾಡಲು ಹೊನಗೋಡಿಗೆ ಬಂದಿದ್ರು. ಈ ವೇಳೆ ವಾಹನದಲ್ಲಿದ್ದ ಸ್ಪೋಟಗಳ ಸ್ಪೋಟವಾಗಿದೆ. ಇವರ ಜೊತೆ ವಾಹನದಲ್ಲಿ ಇನ್ನೂ ನಾಲ್ಕು ಜನರಿದ್ದರು ಎಂಬುದು ತಿಳಿದುಬಂದಿದೆ. ಪ್ರವೀಣ, ಮಂಜುನಾಥ್ ಸೇರಿ ಒಟ್ಟು ಆರು ಜನರು ವಾಹನದಲ್ಲಿದ್ದರು.

ತಮಿಳುನಾಡಿನಿಂದ ಕರ್ನಾಟಕಕ್ಕೆ ಸ್ಫೋಟಕಗಳನ್ನ ತರುತ್ತಿದ್ದರು
ಗಣಿಗಾರಿಕೆಗೆ ಬೇಕಾಗುವ ವಸ್ತುಗಳನ್ನು ಸಪ್ಲೈ ಮಾಡುವುದು ಇವರ ಕೆಲಸವಾಗಿತ್ತು. ಕಳೆದ ಐದಾರು ವರ್ಷಗಳಿಂದ ಪ್ರವೀಣ ಮತ್ತು ಮಂಜುನಾಥ್ ಈ ದಂಧೆ ಮಾಡ್ತಿದ್ರಂತೆ. ತಮಿಳುನಾಡಿನಿಂದ ಕರ್ನಾಟಕಕ್ಕೆ ಸ್ಫೋಟಕಗಳನ್ನ ತಂದು ಸಪ್ಲೈ ಮಾಡುತ್ತಿದ್ದರಂತೆ. ಇದಕ್ಕೆ ಮೂಲ ಮಾಲೀಕ ಅಂತರಗಂಗೆಯ‌ ಪ್ರಭಾವಿ ವ್ಯಕ್ತಿ ಅನ್ನೋ ಮಾಹಿತಿ ಟಿವಿ9 ಗೆ ಲಭ್ಯವಾಗಿದೆ. ಅಲ್ಲದೆ ಆತನದ್ದು ನಾಲ್ಕು ಬಂಡೆ ಹೊಡೆಯುವ ಮೆಷಿನ್​ಗಳಿದ್ದು, ಈತನೇ ಇದಕ್ಕೆ ಮೂಲ ಕಾರಣ ಅನ್ನುವ ‌ಮಾಹಿತಿ‌ ಕೇಳಿ ಬರುತ್ತಿದೆ.

ಅಲ್ಲದೆ ಅಂತರಗಂಗೆಯ ಗೌರಪುರದ ನಾಗರಾಜ್, ಶಶಿಕಿರಣ ಎಂಬುವವರು ಮೃತಪಟ್ಟವರ ಜೊತೆಯಲ್ಲಿ ಇದ್ರಂತೆ. ಅವರು ಈ‌ ಸ್ಪೋಟದಲ್ಲಿ ಮೃತಪಟ್ಟಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗುತ್ತಿದೆ. ತರೀಕೆರೆ ಬಳಿಯ ಬೆಳೆನಹಳ್ಳಿ ಮತ್ತು ಶಿವಮೊಗ್ಗದ ಹೊನಗೋಡಿಗೆ ಸಪ್ಲೈ ಮಾಡಲು ಎರಡು ವಾಹನಗಳಲ್ಲಿ ಜಿಲೇಟಿನ್ ಮತ್ತು ಡೈನಾಮೆಟ್​ಗಳ ಲೋಡ್ ತಂದಿದರೆಂದು ತಿಳಿದುಬಂದಿದೆ. ಅದರಲ್ಲಿ ಒಂದು ವಾಹನ ಸ್ಪೋಟಗೊಂಡಿದೆ. ಮತ್ತೊಂದು ವಾಹನದಲ್ಲಿ ಕೂಡ ಸ್ಪೋಟಗಳು ಇತ್ತು.

ಸ್ಪೋಟದ ಸ್ಥಳದಲ್ಲಿ ಸಿಕ್ಕ ಎರಡು ಸಾವಿರ ರುಪಾಯಿ ನೋಟುಗಳು ಪ್ರವೀಣ ಮತ್ತು ಮಂಜುನಾಥ್ ನದ್ದು ಅನ್ನುವ ಮಾಹಿತಿ ‌ಇದೆ. ಪ್ರವೀಣ, ಮಂಜುನಾಥ್ ಇಬ್ಬರು ಡೈನಾಮೆಟ್, ಜಿಲೇಟಿನ್ ಸಪ್ಲೈಯರ್​ಗಳಾಗಿದ್ದು ಇವರ ಬಳಿ ಲಕ್ಷಾಂತರ ರೂಪಾಯಿ ಹಣ ಇರ್ತಿತ್ತು ಅಂತ ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.

Gelatin Truck Explosion Tragedy in Shivamogga: ದುರ್ಘಟನೆಯ ಬಗ್ಗೆ ಸಂತಾಪ ಸೂಚಿಸಿದ ಗಣ್ಯರು

Published On - 9:05 am, Sat, 23 January 21