ಬೆಂಗಳೂರು: ನಗರದಲ್ಲಿ ಕಿಲ್ಲರ್ ಕೊರೊನಾ ಯಾರನ್ನೂ ಬಿಡುತ್ತಿಲ್ಲ. ಬೆಡಂಭೂತದಂತೆ ಕಾಡುತ್ತಿದೆ. ಸಿಕ್ಕ ಸಿಕ್ಕವರ ದೇಹ ಸೇರಿ ಹಿಂಸಿಸುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಮಾರ್ಚ್‌ನಿಂದ ಈವರೆಗೆ ಒಟ್ಟು 631 ಜನ ಬಲಿಯಾಗಿದ್ದಾರೆ. ಆದ್ರೆ ಬೆಂಗಳೂರಿನ ವಿದ್ಯುತ್ ಚಿತಾಗಾರದಲ್ಲಿ ಫೆಬ್ರವರಿಯಿಂದ ಏಪ್ರಿಲ್‌ವರೆಗೆ 4,457 ಜನರ ಅಂತ್ಯಕ್ರಿಯೆ ನಡೆದಿದೆ.
ಮಾರ್ಚ್ ನಿಂದ ಜೂಲೈ17ರವರೆಗೂ 4,278 ಶವಗಳ ಅಂತ್ಯಸಂಸ್ಕಾರ ಆಗಿದೆ. ಕೇವಲ ವಿದ್ಯುತ್ ಚಿತಾಗಾರದಲ್ಲೇ ಇಷ್ಟೊಂದು ಶವಗಳ ಅಂತ್ಯಸಂಸ್ಕಾರ ಹೇಗೆ? ಸದ್ದಿಲ್ಲದೆ ರಾಜಧಾನಿಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ. ಅಲ್ಲದೆ ಮುಸ್ಲಿಂ ಖಬ್ರಸ್ತಾನ್, ಕ್ರಿಶ್ಚಿಯನ್ ಸಮಾಧಿ, ಹಿಂದೂ ರುಧ್ರಭೂಮಿಗಳನ್ನ ಹೊರತುಪಡಿಸಿ ಕಳೆದ ಆರು ತಿಂಗಳಲ್ಲಿ 8,735 ಜನ ಮೃತಪಟ್ಟವರ ಶವವನ್ನ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.
ಈ 8,735 ಶವಗಳಿಗೆ ಕೋವಿಡ್ ಟೆಸ್ಟ್ ಮಾಡಿಲ್ಲ ವೆಂಬ ಆರೋಪವಿದೆ. ಮುಸ್ಲಿಂ ಖಬ್ರಸ್ತಾನ್, ಕ್ರಿಶ್ಚಿಯನ್ ಸಮಾಧಿ, ಹಿಂದೂ ರುಧ್ರಭೂಮಿಗಳಲ್ಲಿ ಅಂತ್ಯ ಸಂಸ್ಕಾರ ಮಾಡಿದ ಶವಗಳ ಲೆಕ್ಕವಿಲ್ಲ. ಹೀಗಾಗಿ ಮೃತಪಡುವ ಪ್ರತಿ ವ್ಯಕ್ತಿಗಳನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಬೇಕು. ಆಗ ಮಾತ್ರ ನಗರದಲ್ಲಿ ಸೋಂಕನ್ನು ಒಂದು ಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗುತ್ತೆ.
Published On - 10:36 am, Sun, 19 July 20