ಭಾನುವಾರದ ಬಾಡೂಟಕ್ಕೆ ಮಾಸ್ಕ್, ಅಂತರ ಎಲ್ಲಾ ಮರೆತು ಹೊಯ್ತು
ಬೆಂಗಳೂರು: ನಗರದಲ್ಲಿ ಒಂದು ವಾರಗಳ ಕಾಲ ಲಾಕ್ಡೌನ್ ಘೋಷಣೆ ಆಗುವ ಮೊದಲು ಭಾನುವಾರದ ದಿನ ಕರ್ಫ್ಯೂ ಜಾರಿಯಲ್ಲಿತ್ತು. ಆದ್ರೆ ಈ ಸಂಡೇ ಅಗತ್ಯವಸ್ತು ಖರೀದಿಸಲು 12 ಗಂಟೆವರೆಗೂ ಅನುನತಿ ನೀಡಲಾಗಿದೆ. ಹೀಗಾಗಿ ನಗರದ ಅನೇಕ ಕಡೆ ಜನ ಮಟನ್ ಖರೀದಿಗೆ ಕ್ಯೂ ನಿಂತಿದ್ದಾರೆ. ಭಾನುವಾರದ ಬಾಡೂಟಕ್ಕೆ ಮಟನ್ ಚಿಕನ್ ಅಂಗಡಿಗಳ ಮುಂದೆ ಜನ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿದೆ. ಹೊಸೂರು ಮುಖ್ಯ ರಸ್ತೆಯಲ್ಲಿ ಕೋಳಿ ಕುರಿ ಮಾಂಸ ಖರೀದಿಸಲು ಸಾಮಾಜಿಕ ಅಂತರ, ಮಾಸ್ಕ್ ಎಲ್ಲವನ್ನು ಮರೆತು ಜನ […]
ಬೆಂಗಳೂರು: ನಗರದಲ್ಲಿ ಒಂದು ವಾರಗಳ ಕಾಲ ಲಾಕ್ಡೌನ್ ಘೋಷಣೆ ಆಗುವ ಮೊದಲು ಭಾನುವಾರದ ದಿನ ಕರ್ಫ್ಯೂ ಜಾರಿಯಲ್ಲಿತ್ತು. ಆದ್ರೆ ಈ ಸಂಡೇ ಅಗತ್ಯವಸ್ತು ಖರೀದಿಸಲು 12 ಗಂಟೆವರೆಗೂ ಅನುನತಿ ನೀಡಲಾಗಿದೆ. ಹೀಗಾಗಿ ನಗರದ ಅನೇಕ ಕಡೆ ಜನ ಮಟನ್ ಖರೀದಿಗೆ ಕ್ಯೂ ನಿಂತಿದ್ದಾರೆ.
ಭಾನುವಾರದ ಬಾಡೂಟಕ್ಕೆ ಮಟನ್ ಚಿಕನ್ ಅಂಗಡಿಗಳ ಮುಂದೆ ಜನ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿದೆ. ಹೊಸೂರು ಮುಖ್ಯ ರಸ್ತೆಯಲ್ಲಿ ಕೋಳಿ ಕುರಿ ಮಾಂಸ ಖರೀದಿಸಲು ಸಾಮಾಜಿಕ ಅಂತರ, ಮಾಸ್ಕ್ ಎಲ್ಲವನ್ನು ಮರೆತು ಜನ ನಿಂತಿದ್ದಾರೆ. ಆಟೋಗಳಲ್ಲಿ ಮೀನಿನ ಮಾರಾಟ ಜೋರಾಗಿದೆ.
ಇನ್ನು ಇದೇ ರೀತಿ ಸಂಡೇ ಲಾಕ್ಡೌನ್ ಮರೆತು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದದಲ್ಲೂ ಚಿಕನ್ ಮಟನ್ ಖರೀದಿಗೆ ಜನ ಕ್ಯೂ ನಿಂತ ದೃಶ್ಯ ಕಂಡು ಬಂದಿದೆ. ಅಲ್ಲದೆ ನಾಳೆಯಿಂದ ಶ್ರಾವಣ ಆರಂಭ ಹಿನ್ನೆಲೆಯಲ್ಲಿ ಬೆಳ್ಳಂಬೆಳಿಗ್ಗೆಯೇ ಮಟನ್ ಸ್ಟಾಲ್ ಮುಂದೆ ನೂರಾರು ಜನ ಸರದಿ ಸಾಲಿನಲ್ಲಿ ಕ್ಯೂ ನಿಂತು ಮಾಂಸ ಖರೀದಿಸುತ್ತಿದ್ದಾರೆ.