ರಾಯಚೂರು: ಮೊನ್ನೆ ಬಳ್ಳಾರಿ, ನಿನ್ನೆ ಯಾದಗಿರಿ ಮತ್ತು ದಾವಣಗೆರೆ. ಇದೀಗ ರಾಯಚೂರು ಜಿಲ್ಲೆಯ ಸರದಿ. ಜನರನ್ನೇ ಬೆಚ್ಚಿ ಬೀಳಿಸುವಂತಹ ಘೋರ ಸಂಸ್ಕಾರ ರಾಯಚೂರಿನಲ್ಲಿ ನಡೆದಿದೆ.
ನಿನ್ನೆ ಮೊನ್ನೆಯೆಲ್ಲ ಸಂಸ್ಕಾರವನ್ನೇ ಅಂತ್ಯ ಮಾಡಿ ಕೊರೊನಾ ಸೋಂಕಿತರ ಶವಗಳನ್ನು ದರದರ ಎಳೆದು ಗುಂಡಿಗಳಲ್ಲಿ ಬೀಸಾಡಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಅದೇ ರೀತಿ ಇಂದು ರಾಯಚೂರಿನ ಎಲ್.ಬಿ.ಎಸ್ ನಗರದಲ್ಲಿ ಭೀತಿ ಹುಟ್ಟಿಸುವಂತಹ ಶವ ಸಂಸ್ಕಾರ ನಡೆದಿದೆ.
ಶ್ರದ್ದಾಂಜಲಿ ವಾಹನದಲ್ಲಿ ಕೊರೊನಾ ಸೋಂಕಿತನ ಶವ ಹೊತ್ತು ತಂದ ಸಿಬ್ಬಂದಿ ಮನೆಗಳ ಮುಂದೆಯೇ ಶವ ಹೂತು ಹೋಗಿದ್ದಾರೆ. ಪಕ್ಕದಲ್ಲೇ ಮಕ್ಕಳು ಆಟ ಆಡ್ತಿರೋದನ್ನು ಗಮನಿಸದೆ. ಜೆಸಿಬಿ ಬಳಸಿ ನೆಲ ಅಗೆದು ಸೋಂಕಿತನ ಶವ ಹೂತು ಹಾಕಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
Published On - 9:24 am, Thu, 2 July 20