‘ಸಂತೋಷ್ ನನ್ನ ಒಳ್ಳೇತನವನ್ನ ಗುರುತಿಸಿದ್ದಾರೆ, ಡಿಕೆಶಿ ಮತ್ತು ಎಲ್ರಿಗೂ ಒಳ್ಳೇದಾದ್ರೆ ಕಲಿಯಲಿ, ತಪ್ಪೇನಿದೆ?’

|

Updated on: Dec 01, 2020 | 2:31 PM

ಎನ್.ಆರ್.ಸಂತೋಷ್ ನನ್ನಲ್ಲಿರುವ ಒಳ್ಳೇತನ ಗುರುತಿಸಿದ್ದಾರೆ. ಹಾಗಂತ ಅವರ ಹೇಳಿಕೆಯನ್ನು ನಾನು ಸ್ವಾಗತಿಸುವುದಿಲ್ಲ. ನನ್ನಲ್ಲಿರುವ ಒಳ್ಳೇತನವನ್ನು ಬಿಜೆಪಿ, RSSನವರು ಕಲಿಯಬೇಕು.

‘ಸಂತೋಷ್ ನನ್ನ ಒಳ್ಳೇತನವನ್ನ ಗುರುತಿಸಿದ್ದಾರೆ, ಡಿಕೆಶಿ ಮತ್ತು ಎಲ್ರಿಗೂ ಒಳ್ಳೇದಾದ್ರೆ ಕಲಿಯಲಿ, ತಪ್ಪೇನಿದೆ?’
ಸಿದ್ದರಾಮಯ್ಯ (ಎಡ); N.R. ಸಂತೋಷ್​ (ಬಲ)
Follow us on

ಬೆಂಗಳೂರು: ಎನ್.ಆರ್.ಸಂತೋಷ್ ನನ್ನಲ್ಲಿರುವ ಒಳ್ಳೇತನ ಗುರುತಿಸಿದ್ದಾರೆ. ಹಾಗಂತ ಅವರ ಹೇಳಿಕೆಯನ್ನು ನಾನು ಸ್ವಾಗತಿಸುವುದಿಲ್ಲ. ನನ್ನಲ್ಲಿರುವ ಒಳ್ಳೇತನವನ್ನು ಬಿಜೆಪಿ, RSSನವರು ಕಲಿಯಬೇಕು. ಒಳ್ಳೆಯದನ್ನ ಎಲ್ಲರೂ ಕಲಿಯಬೇಕಲ್ವಾ ಎಂದು ಸಿದ್ದರಾಮಯ್ಯ ಹೇಳಿದರು.

ಡಿಕೆಶಿ ಸಿದ್ದರಾಮಯ್ಯರನ್ನು ನೋಡಿ ಕಲಿಯಬೇಕೆಂಬ ಎನ್.ಆರ್.ಸಂತೋಷ್ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ಡಿಕೆಶಿ ಸೇರಿದಂತೆ ಸಮಾಜಕ್ಕೆ ಒಳ್ಳೆಯದಾದರೆ ಎಲ್ಲರೂ ಕಲಿಯಲಿ, ತಪ್ಪೇನಿದೆ? ಎಂದು ಸಿದ್ದರಾಮಯ್ಯ ತಮಾಷೆಯಾಗಿಯೇ ಚಾಟಿ ಬೀಸಿದರು.

‘ನನ್ನನ್ನ ಕಾಂಗ್ರೆಸ್ ಗೆ ಕರೆತಂದಿದ್ದು ವಿಶ್ವನಾಥ್ ಅಲ್ಲ’
ನನ್ನನ್ನ ಕಾಂಗ್ರೆಸ್ ಗೆ ಕರೆತಂದಿದ್ದು ವಿಶ್ವನಾಥ್ ಅಲ್ಲ. ರಾಜ್ಯದ ಯಾವ ನಾಯಕರೂ ನನ್ನನ್ನು ಕಾಂಗ್ರೆಸ್‌ಗೆ ಕರೆತಂದಿಲ್ಲ. ಅಹ್ಮದ್ ಪಟೇಲ್ ನನ್ನನ್ನು ಕಾಂಗ್ರೆಸ್‌ಗೆ ಕರೆತಂದಿದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಎಂಎಲ್‌ಸಿ ವಿಶ್ವನಾಥ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ಡಿಕೆಶಿಗೆ ಒಂದು ತಿಂಗಳು ರಜೆ ಕೊಟ್ಟು ಆಸ್ಪತ್ರೆಗೆ ಸೇರಿಸಿ -ಡಿಸ್ಚಾರ್ಜ್ ಆದ ಸಂತೋಷ್ ಸಲಹೆ

Published On - 2:20 pm, Tue, 1 December 20