ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2020ಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ನಡುವೆ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಜಂಬೂಸವಾರಿಯನ್ನ ಮಾವುತರೆ ಮಾಡ್ತಾರೆ ಅದಕ್ಯಾಕೆ ಜನ ಬೇಕು? ಎಂದಿದ್ದಾರೆ.
ಕಳೆದ ವರ್ಷ ದಸರಾ ಉದ್ಘಾಟಿಸಿದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಈ ಬಾರಿ ದಸರಾಗೆ ಜನ ಸೇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರು ಸೇರುವುದು ಬೇಡ. ಜಂಬೂಸವಾರಿಗೆ ಕೇವಲ ಮಾವುತರು ಇದ್ದರೆ ಸಾಕು. ಅದಕ್ಕೆ ಏಕೆ ಹೆಚ್ಚು ಜನರನ್ನು ಸೇರಿಸಬೇಕು.
ಹೆಚ್ಚು ಜನರು ಸೇರಿ ಸಮಸ್ಯೆಯಾದರೆ ಯಾರು ಹೊಣೆ? ಎಲ್ಲರೂ ಅವರ ಮನೆಗಳಲ್ಲೇ ದಸರಾ ಆಚರಣೆ ಮಾಡಲಿ. ಅದಕ್ಕೆ 200 ಮಂದಿ ಯಾಕೇ ಭಾಗಿಯಾಗಬೇಕು. ಕೆಲವರು ದಸರಾದಿಂದ ಬಿಸಿನೆಸ್ ಅಂತಾರೆ. ಜನರನ್ನ ಒಟ್ಟಾಗಿ ಸೇರಿಸಿ ಕೊರೊನಾ ಹೆಚ್ಚಾದರೆ ಹೊಣೆ ಯಾರು.? ಬಿಸಿನೆಸ್ ಎಲ್ಲಬಿಟ್ಟು ಜನರ ಆರೋಗ್ಯದ ಬಗ್ಗೆ ಯೋಚಿಸಿ ಎಂದು ಮೈಸೂರಿನಲ್ಲಿ ಎಸ್.ಎಲ್.ಭೈರಪ್ಪ ಹೇಳಿದ್ರು.
Published On - 3:26 pm, Sat, 10 October 20