ಟಿವಿ 9 ಅಭಿಯಾನಕ್ಕೆ ಮಹಾ ಗೆಲುವು: ವಿದ್ಯಾಗಮ ಯೋಜನೆ ತಾತ್ಕಾಲಿಕ ಸ್ಥಗಿತಕ್ಕೆ ಸರ್ಕಾರ ನಿರ್ದೇಶನ
ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ಶಾಲೆಗಳು ಬಂದ್ ಆಗಿವೆ. ಹೀಗಾಗಿ, ಸರ್ಕಾರ ವಿದ್ಯಾಗಮ ಯೋಜನೆಯನ್ನು ರೂಪಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಒದಗಿಸಲು ಮುಂದಾಗಿತ್ತು. ಆದರೆ, ಯೋಜನೆ ಅಡಿ ಪಾಠ ಮಾಡಲು ಹೋದ ಶಿಕ್ಷಕರೇ ಕೊರೊನಾಗೆ ಸಾವನ್ನಪ್ಪಿದ್ದಾರೆ. ಇದುವರೆಗೆ, ಸುಮಾರು 150ಕ್ಕೂ ಹೆಚ್ಚು ಶಿಕ್ಷಕರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ, ನಿಮ್ಮ ಟಿವಿ 9 ಈ ಬಗ್ಗೆ ಸರ್ಕಾರಕ್ಕೆ ಅರಿವು ಮೂಡಿಸಲು ನಿರಂತರ ಅಭಿಯಾನ ಕೈಗೊಂಡಿತ್ತು. ಟಿವಿ 9 ವರದಿಯಿಂದ ಸರ್ಕಾರದ ಕಣ್ಣು ತೆರೆದಿದ್ದು, ಇದೀಗ […]

ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ಶಾಲೆಗಳು ಬಂದ್ ಆಗಿವೆ. ಹೀಗಾಗಿ, ಸರ್ಕಾರ ವಿದ್ಯಾಗಮ ಯೋಜನೆಯನ್ನು ರೂಪಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಒದಗಿಸಲು ಮುಂದಾಗಿತ್ತು. ಆದರೆ, ಯೋಜನೆ ಅಡಿ ಪಾಠ ಮಾಡಲು ಹೋದ ಶಿಕ್ಷಕರೇ ಕೊರೊನಾಗೆ ಸಾವನ್ನಪ್ಪಿದ್ದಾರೆ. ಇದುವರೆಗೆ, ಸುಮಾರು 150ಕ್ಕೂ ಹೆಚ್ಚು ಶಿಕ್ಷಕರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಹೀಗಾಗಿ, ನಿಮ್ಮ ಟಿವಿ 9 ಈ ಬಗ್ಗೆ ಸರ್ಕಾರಕ್ಕೆ ಅರಿವು ಮೂಡಿಸಲು ನಿರಂತರ ಅಭಿಯಾನ ಕೈಗೊಂಡಿತ್ತು. ಟಿವಿ 9 ವರದಿಯಿಂದ ಸರ್ಕಾರದ ಕಣ್ಣು ತೆರೆದಿದ್ದು, ಇದೀಗ ವಿದ್ಯಾಗಮ ಯೋಜನೆಯ ತಾತ್ಕಾಲಿಕ ಸ್ಥಗಿತಕ್ಕೆ ನಿರ್ದೇಶನ ನೀಡಿದೆ. ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ದೇಶನ ನೀಡಿದ್ದಾರೆ. ಟಿವಿ 9 ಅಭಿಯಾನದ ಫಲಶ್ರುತಿಯಾಗಿ ಹೊರಬಂದಿರುವ ಸರ್ಕಾರದ ನಿರ್ದೇಶನದಿಂದ ವಿದ್ಯಾಗಮ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿದ್ದ ನೂರಾರು ವಿದ್ಯಾರ್ಥಿಗಳ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
48 ಗಂಟೆಗಳ ನಿರಂತರ ಹೋರಾಟಕ್ಕೆ ಅತಿದೊಡ್ಡ ಗೆಲುವು: ಮನೆಗೆ ಆಧಾರವಾಗಿದ್ದವರನ್ನ ಕಳೆದುಕೊಂಡ ಶಿಕ್ಷಕರ ಕುಟುಂಬಗಳು ಅನಾಥರಾಗಿದ್ದಾರೆ.‘ವಿದ್ಯಾಗಮ’ ವಿದ್ಯಾರ್ಥಿಗಳಿಗೂ ಕೊರೊನಾದಿಂದ ಸಂಕಷ್ಟ ಉಂಟಾಗಿದೆ. ಕಳೆದ 2 ದಿನದಿಂದ ವಿನಾಶದ ವಿದ್ಯಾಗಮದ ಜಾಗೃತಿ ಮೂಡಿಸಿದ್ದ ಟಿವಿ9 ರಾಜ್ಯದ ಮೂಲೆ ಮೂಲೆಯಿಂದ ಶಿಕ್ಷಕರ ಸಾವಿನ ವರದಿ ಬಿತ್ತರಿಸಿತ್ತು. ಟಿವಿ9, ವಿದ್ಯಾಗಮ ನಿಲ್ಲೋವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದಿತ್ತು. ವಿದ್ಯಾಗಮ ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ನೇರಾನೇರ ಆಗ್ರಹಿಸಿತ್ತು. ಸದ್ಯ ಟಿವಿ9 ಅಭಿಯಾನಕ್ಕೆ ಫಲ ಸಿಕ್ಕಿದೆ.
Published On - 2:16 pm, Sat, 10 October 20




