ಕುಡಿದು ಬಿಸಾಕಿದ್ದ ಬೀರ್ ಕ್ಯಾನ್ ಒಳಗೆ ತಗಲಾಕಿಕೊಂಡ ಹಾವಿನ ರಕ್ಷಣೆ!
ಮೈಸೂರು: ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್ ಒಳಗೆ ಸಿಲುಕಿಕೊಂಡಿದ್ದ ಹಾವೊಂದನ್ನು ಪ್ರಜ್ಞಾವಂತ ಯುವಕರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಸಮೀಪ ಕಂಬಿಬೋರೆ ಅರಣ್ಯ ಪ್ರದೇಶದ ರಸ್ತೆಯಲ್ಲಿ ನಡೆದಿದೆ. ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್ ಅನ್ನು (Beer Can) ಯಾಕೆ ಮೂಸಿ ನೋಡಲು ಹೋಯಿತೋ ಹಾವು, ಅಂತೂ ಅದರೊಳಕ್ಕೆ ನುಸುಳಿಬಿಟ್ಟಿದೆ. ಆ ಕೇರೆ ಹಾವು ಹೊರಬರಲಾರದೆ ಒದ್ದಾಡಿದೆ. ಹಾವಿನ ಒದ್ದಾಟವನ್ನು ಗಮನಿಸಿದ ಸ್ನೇಕ್ ಗಿರೀಶ್ ಹಾಗೂ ಅವರ ತಂಡ, ಕಟರ್ ನಿಂದ ಕ್ಯಾನ್ ಕತ್ತರಿಸಿ […]

ಮೈಸೂರು: ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್ ಒಳಗೆ ಸಿಲುಕಿಕೊಂಡಿದ್ದ ಹಾವೊಂದನ್ನು ಪ್ರಜ್ಞಾವಂತ ಯುವಕರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಸಮೀಪ ಕಂಬಿಬೋರೆ ಅರಣ್ಯ ಪ್ರದೇಶದ ರಸ್ತೆಯಲ್ಲಿ ನಡೆದಿದೆ.

ಕುಡಿದು ಬಿಸಾಡಿದ್ದ ಬಿಯರ್ ಕ್ಯಾನ್ ಅನ್ನು (Beer Can) ಯಾಕೆ ಮೂಸಿ ನೋಡಲು ಹೋಯಿತೋ ಹಾವು, ಅಂತೂ ಅದರೊಳಕ್ಕೆ ನುಸುಳಿಬಿಟ್ಟಿದೆ. ಆ ಕೇರೆ ಹಾವು ಹೊರಬರಲಾರದೆ ಒದ್ದಾಡಿದೆ. ಹಾವಿನ ಒದ್ದಾಟವನ್ನು ಗಮನಿಸಿದ ಸ್ನೇಕ್ ಗಿರೀಶ್ ಹಾಗೂ ಅವರ ತಂಡ, ಕಟರ್ ನಿಂದ ಕ್ಯಾನ್ ಕತ್ತರಿಸಿ ಹಾವನ್ನು ರಕ್ಷಿಸಿದೆ.
ಹೀಗೆ ರಕ್ಷಣೆ ಮಾಡಿದ ಹಾವನ್ನು, ಯುವ ತಂಡ ಮತ್ತೆ ಕಾಡಿಗೆ ಬಿಟ್ಟು ಪ್ರಾಣಿ ಪ್ರೇಮ ಮೆರೆದಿದೆ. ಸ್ನೇಕ್ ಗಿರೀಶ್ ಮತ್ತು ಅವರ ಸ್ನೇಹಿತರ ಈ ಕಾರ್ಯವನ್ನು ಜನ ಈಗ ಶ್ಲಾಘಿಸುತ್ತಿದ್ದಾರೆ.
Published On - 10:25 am, Mon, 10 August 20



