ಅನಗತ್ಯ ಓಡಾಡುವವರಿಗೆ ಬ್ರೇಕ್ ಹಾಕಲು ಫೀಲ್ಡಿಗಿಳಿದ ಎಸ್ಪಿ ರವಿ ಚನ್ನಣ್ಣನವರ್

ದೇವನಹಳ್ಳಿ: ಸರ್ಕಾರದಿಂದ ಖಡಕ್ ಲಾಕ್​ಡೌನ್ ಸೂಚನೆ ಇದ್ರೂ ಜನ ಮಾತ್ರ ಯಾವುದಕ್ಕೂ ಕ್ಯಾರೇ ಅಂತಿಲ್ಲ. ಹೀಗಾಗಿ ಲಾಕ್​ಡೌನ್ ನಡುವೆಯೂ ಅನಗತ್ಯವಾಗಿ ಓಡಾಡುವವರಿಗೆ ಬ್ರೇಕ್ ಹಾಕಲು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಫೀಲ್ಡಿಗಿಳಿದಿದ್ದಾರೆ. ಹೊಸಕೋಟೆಯ ಟೋಲ್ ಬಳಿ ವಾಹನ ಸವಾರರಿಗೆ‌ ವಾರ್ನಿಂಗ್ ಕೊಟ್ಟಿದ್ದಾರೆ. ಅನಗತ್ಯವಾಗಿ ಓಡಾಡಿದ್ರೆ ಕಾನೂನು ಕ್ರಮ ಕೈಗೊಳ್ಳೋದಾಗಿ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನು ದೇವನಹಳ್ಳಿ ತಾಲೂಕು ವೆಂಕಟಗಿರಿಕೋಟೆ ಬಳಿಯ ಚೆಕ್ ಪೋಸ್ಟ್ ಬಳಿ ವಾಹನ ಸವಾರರ ಐಡಿ ಕಾರ್ಡ್, ವಾಹನ ದಾಖಲೆಗಳನ್ನು ತಪಾಸಣೆ […]

ಅನಗತ್ಯ ಓಡಾಡುವವರಿಗೆ ಬ್ರೇಕ್ ಹಾಕಲು ಫೀಲ್ಡಿಗಿಳಿದ ಎಸ್ಪಿ ರವಿ ಚನ್ನಣ್ಣನವರ್
Edited By:

Updated on: Jul 15, 2020 | 11:36 AM

ದೇವನಹಳ್ಳಿ: ಸರ್ಕಾರದಿಂದ ಖಡಕ್ ಲಾಕ್​ಡೌನ್ ಸೂಚನೆ ಇದ್ರೂ ಜನ ಮಾತ್ರ ಯಾವುದಕ್ಕೂ ಕ್ಯಾರೇ ಅಂತಿಲ್ಲ. ಹೀಗಾಗಿ ಲಾಕ್​ಡೌನ್ ನಡುವೆಯೂ ಅನಗತ್ಯವಾಗಿ ಓಡಾಡುವವರಿಗೆ ಬ್ರೇಕ್ ಹಾಕಲು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಫೀಲ್ಡಿಗಿಳಿದಿದ್ದಾರೆ.

ಹೊಸಕೋಟೆಯ ಟೋಲ್ ಬಳಿ ವಾಹನ ಸವಾರರಿಗೆ‌ ವಾರ್ನಿಂಗ್ ಕೊಟ್ಟಿದ್ದಾರೆ. ಅನಗತ್ಯವಾಗಿ ಓಡಾಡಿದ್ರೆ ಕಾನೂನು ಕ್ರಮ ಕೈಗೊಳ್ಳೋದಾಗಿ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ದೇವನಹಳ್ಳಿ ತಾಲೂಕು ವೆಂಕಟಗಿರಿಕೋಟೆ ಬಳಿಯ ಚೆಕ್ ಪೋಸ್ಟ್ ಬಳಿ ವಾಹನ ಸವಾರರ ಐಡಿ ಕಾರ್ಡ್, ವಾಹನ ದಾಖಲೆಗಳನ್ನು ತಪಾಸಣೆ ಮಾಡಲಾಗುತ್ತಿದೆ. ದಾಖಲೆಗಳಿಲ್ಲದ ವಾಹನಗಳನ್ನು ಚೆಕ್ ಪೋಸ್ಟ್ ನಿಂದ ವಾಪಸ್ ಕಳುಹಿಸಲಾಗುತ್ತಿದೆ. ಈ ವರೆಗೆ ಪೊಲೀಸರು 30ಕ್ಕೂ ಹೆಚ್ಚು ಕಾರುಗಳನ್ನ ವಾಪಸ್ ಕಳುಹಿಸಿದ್ದಾರೆ.