C+ ಸರಗಳ್ಳರ ಬಂಧಿಸಿದ ಪೊಲೀಸರಿಗೆ ಈಗ ಕೊರೊನಾ ಭೀತಿ
ಮೈಸೂರು:ಸರಗಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಸರಗಳ್ಳರಲ್ಲಿ ಒಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸರಗಳ್ಳರನ್ನ ಬಂದಿಸಿದ ಮೈಸೂರಿನ ಕುವೆಂಪು ನಗರದ ಪೊಲೀಸರಿಗೆ ಕೊರೊನಾ ಭೀತಿ ಶುರುವಾಗಿದೆ. ಕುವೆಂಪು ನಗರ, ವಿಜಯನಗರ ಸೇರಿ ನಾಲ್ಕು ಕಡೆ ಸರಗಳ್ಳತನ ಮಾಡಿದ್ದ ಶ್ರೀರಂಗಪಟ್ಟಣದ 24 ವರ್ಷದ ಆರೋಪಿಯನ್ನ ನಿನ್ನೆ ಕುವೆಂಪುನಗರದ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಆತನಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಈಗ ಆತನನ್ನ ಬಂಧಿಸಿದ ಪೊಲೀಸರಿಗೆ ಕೊರೊನಾ ಹಬ್ಬುವ ಭೀತಿ ಎದುರಾಗಿದೆ. ಸಧ್ಯಕ್ಕೆ ಆರೋಪಿಗಳಿಂದ 8 ಲಕ್ಷ 35 ಸಾವಿರ ಮೌಲ್ಯದ […]

ಮೈಸೂರು:ಸರಗಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಸರಗಳ್ಳರಲ್ಲಿ ಒಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸರಗಳ್ಳರನ್ನ ಬಂದಿಸಿದ ಮೈಸೂರಿನ ಕುವೆಂಪು ನಗರದ ಪೊಲೀಸರಿಗೆ ಕೊರೊನಾ ಭೀತಿ ಶುರುವಾಗಿದೆ.
ಕುವೆಂಪು ನಗರ, ವಿಜಯನಗರ ಸೇರಿ ನಾಲ್ಕು ಕಡೆ ಸರಗಳ್ಳತನ ಮಾಡಿದ್ದ ಶ್ರೀರಂಗಪಟ್ಟಣದ 24 ವರ್ಷದ ಆರೋಪಿಯನ್ನ ನಿನ್ನೆ ಕುವೆಂಪುನಗರದ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಆತನಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಈಗ ಆತನನ್ನ ಬಂಧಿಸಿದ ಪೊಲೀಸರಿಗೆ ಕೊರೊನಾ ಹಬ್ಬುವ ಭೀತಿ ಎದುರಾಗಿದೆ.
ಸಧ್ಯಕ್ಕೆ ಆರೋಪಿಗಳಿಂದ 8 ಲಕ್ಷ 35 ಸಾವಿರ ಮೌಲ್ಯದ 185 ಗ್ರಾಂ ಚಿನ್ನದ ಆಭರಣವನ್ನು ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿಗಳು ಕೃತ್ಯಕ್ಕೆ ಬಳಸಿದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Published On - 11:17 am, Wed, 15 July 20