ನಾಳೆಯಿಂದ SSLC ಮೌಲ್ಯಮಾಪನ, ಬೆಂಗಳೂರಲ್ಲಿ ಮಾತ್ರ ಒಂದೇ ದಿನ

ಬೆಂಗಳೂರು: ನಾಳೆಯಿಂದ ಅಂದರೆ ಜುಲೈ 13ರಿಂದ ರಾಜ್ಯಾದಂತ ಎಸ್ಎಸ್ಎಲ್‌ಸಿ ಮೌಲ್ಯಮಾಪನ ಆರಂಭವಾಗಲಿದೆ. 228 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿರುವ ಮೌಲ್ಯಮಾಪನದಲ್ಲಿ ಬರೊಬ್ಬರಿ 71,154 ಮೌಲ್ಯಮಾಪನ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ. ಆದ್ರೆ ಈ ಮೌಲ್ಯಮಾಪನ ಪ್ರಕ್ರಿಯೆ ಬೆಂಗಳೂರಿನಲ್ಲಿ ಮಾತ್ರ ನಾಳೆ ಒಂದು ದಿನ ನಡೆಯಲಿದೆ. ಇದಾದ ನಂತರ ಮಂಗಳವಾರದಿಂದ ಒಂದು ವಾರ ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮೌಲ್ಯಮಾಪನ ನಡೆಯುವುದಿಲ್ಲ. ಇದಕ್ಕೆ ಕಾರಣ ಮಂಗಳವಾರದಿಂದ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜಾರಿಯಾಗುತ್ತಿರುವ ಲಾಕ್ ಡೌನ್. ಲಾಕ್ ಡೌನ್ […]

ನಾಳೆಯಿಂದ SSLC ಮೌಲ್ಯಮಾಪನ, ಬೆಂಗಳೂರಲ್ಲಿ ಮಾತ್ರ ಒಂದೇ ದಿನ
Edited By:

Updated on: Jul 12, 2020 | 2:35 PM

ಬೆಂಗಳೂರು: ನಾಳೆಯಿಂದ ಅಂದರೆ ಜುಲೈ 13ರಿಂದ ರಾಜ್ಯಾದಂತ ಎಸ್ಎಸ್ಎಲ್‌ಸಿ ಮೌಲ್ಯಮಾಪನ ಆರಂಭವಾಗಲಿದೆ. 228 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿರುವ ಮೌಲ್ಯಮಾಪನದಲ್ಲಿ ಬರೊಬ್ಬರಿ 71,154 ಮೌಲ್ಯಮಾಪನ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ.

ಆದ್ರೆ ಈ ಮೌಲ್ಯಮಾಪನ ಪ್ರಕ್ರಿಯೆ ಬೆಂಗಳೂರಿನಲ್ಲಿ ಮಾತ್ರ ನಾಳೆ ಒಂದು ದಿನ ನಡೆಯಲಿದೆ. ಇದಾದ ನಂತರ ಮಂಗಳವಾರದಿಂದ ಒಂದು ವಾರ ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮೌಲ್ಯಮಾಪನ ನಡೆಯುವುದಿಲ್ಲ.

ಇದಕ್ಕೆ ಕಾರಣ ಮಂಗಳವಾರದಿಂದ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜಾರಿಯಾಗುತ್ತಿರುವ ಲಾಕ್ ಡೌನ್. ಲಾಕ್ ಡೌನ್ ಮುಗಿದ ನಂತರ ಮೌಲ್ಯಮಾಪನ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ ಕೆಜಿ ಜಗದೀಶ್ ತಿಳಿಸಿದ್ದಾರೆ.

Published On - 12:05 pm, Sun, 12 July 20