ಹುಬ್ಬಳ್ಳಿ ರಸ್ತೆಗಳಲ್ಲಿ ಕೊರೊನಾ ಸೋಂಕಿತನ ಓಡಾಟ, ಮುಂದೇನಾಯ್ತು?
[lazy-load-videos-and-sticky-control id=”n3bNhseG8X0″] ಹುಬ್ಬಳ್ಳಿ: ನಗರದಲ್ಲೂ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ನಗರದ ಚೆನ್ನಮ್ಮ ವೃತ್ತದಲ್ಲಿ ಸೋಂಕಿತನೊಬ್ಬ ಓಡಾಡುತ್ತಿದ್ದದನ್ನು ಕಂಡು ಸ್ಥಳೀಯರು ಆತಂಕಗೊಂಡ ಘಟನೆ ನಡೆದಿದೆ. ಹೌದು, ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ನಗರದ ಲಾಡ್ಜ್ನಲ್ಲಿ ವಾಸ್ತವ್ಯ ಹೂಡಿದ್ದ. ನಿನ್ನೆ ರಾತ್ರಿ ಆತನಿಗೆ ಪಾಸಿಟಿವ್ ಅಂತಾ ಮೊಬೈಲ್ಗೆ ಮೇಸೆಜ್ ಬಂದಿದೆ. ಆದರೆ, ಬಹಳಷ್ಟು ಗಂಟೆ ಕಳೆದರೂ ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆರೋಗ್ಯಾಧಿಕಾರಿಗಳು ಬರಲೇ ಇಲ್ಲ. ಇದರಿಂದ ಕೊಂಚ ಬೆದರಿದ […]
[lazy-load-videos-and-sticky-control id=”n3bNhseG8X0″]
ಹುಬ್ಬಳ್ಳಿ: ನಗರದಲ್ಲೂ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ನಗರದ ಚೆನ್ನಮ್ಮ ವೃತ್ತದಲ್ಲಿ ಸೋಂಕಿತನೊಬ್ಬ ಓಡಾಡುತ್ತಿದ್ದದನ್ನು ಕಂಡು ಸ್ಥಳೀಯರು ಆತಂಕಗೊಂಡ ಘಟನೆ ನಡೆದಿದೆ.
ಹೌದು, ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ನಗರದ ಲಾಡ್ಜ್ನಲ್ಲಿ ವಾಸ್ತವ್ಯ ಹೂಡಿದ್ದ. ನಿನ್ನೆ ರಾತ್ರಿ ಆತನಿಗೆ ಪಾಸಿಟಿವ್ ಅಂತಾ ಮೊಬೈಲ್ಗೆ ಮೇಸೆಜ್ ಬಂದಿದೆ. ಆದರೆ, ಬಹಳಷ್ಟು ಗಂಟೆ ಕಳೆದರೂ ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆರೋಗ್ಯಾಧಿಕಾರಿಗಳು ಬರಲೇ ಇಲ್ಲ. ಇದರಿಂದ ಕೊಂಚ ಬೆದರಿದ ಸೋಂಕಿತ ಬೀದಿಗಿಳಿದು ನೆರವು ಕೇಳಲು ಪ್ರಾರಂಭಿಸಿದ.
ಈ ಸುದ್ದಿ ಟಿವಿ9 ನಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಗ್ಯಾಧಿಕಾರಿಗಳು ಕೊನೆಗೂ ಆತನನ್ನ ಕೊವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿದರು.
Published On - 12:06 pm, Sun, 12 July 20