ಸಂಡೇ ಲಾಕ್‌ಡೌನ್ ಶುರು, 33 ಗಂಟೆಗಳ ಕಾಲ ಕರುನಾಡು ಕಂಪ್ಲೀಟ್ ಬಂದ್
[lazy-load-videos-and-sticky-control id=”slm3pYnzXkw”] ಬೆಂಗಳೂರು: ರಾಜ್ಯದಲ್ಲಿ ಕಿಲ್ಲರ್ ಕೊರೊನಾ ನಿನ್ನೆ ಹೊಸ ಚರಿತ್ರೆಯನ್ನ ಸೃಷ್ಟಿಸಿದೆ. 2798 ಜನರ ದೇಹ ಹೊಕ್ಕಿರೋ ಸೋಂಕು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಹೀಗಾಗಿಯೇ ಇಂದು ಇಡೀ ರಾಜ್ಯವೇ ಲಾಕ್ ಆಗಿದೆ. ನಿನ್ನೆ ರಾತ್ರಿ 8 ಗಂಟೆಯಿಂದ ಲಾಕ್‌ಡೌನ್ ಶುರುವಾಗಿದ್ದು, ಬೆಳಗಿನವರೆಗೂ ಕರುನಾಡು ಸ್ತಬ್ಧವಾಗಲಿದೆ. ಲಾಕ್‌ಡೌನ್.. ಲಾಕ್‌ಡೌನ್.. ಲಾಕ್‌ಡೌನ್.. ಕೊರೊನಾ ಕೇಕೆ ಹಾಕಿದಾಗೆಲ್ಲಾ ಕೇಳಿ ಬರ್ತಿರೋ ಅಸ್ತ್ರ ಅಂದ್ರೆ ಅದೇ ಲಾಕ್‌ಡೌನ್. ನಿತ್ಯ ಎರಡು ಸಾವಿರ ಸಂಖ್ಯೆಯನ್ನೇ ಹೊತ್ತು ತರ್ತಿರೋ ಕೊರೊನಾ ಇಡೀ ಕರುನಾಡನ್ನೇ ಗಢಗಢ ಎನ್ನುವಂತೆ […]
[lazy-load-videos-and-sticky-control id=”slm3pYnzXkw”]
ಬೆಂಗಳೂರು: ರಾಜ್ಯದಲ್ಲಿ ಕಿಲ್ಲರ್ ಕೊರೊನಾ ನಿನ್ನೆ ಹೊಸ ಚರಿತ್ರೆಯನ್ನ ಸೃಷ್ಟಿಸಿದೆ. 2798 ಜನರ ದೇಹ ಹೊಕ್ಕಿರೋ ಸೋಂಕು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಹೀಗಾಗಿಯೇ ಇಂದು ಇಡೀ ರಾಜ್ಯವೇ ಲಾಕ್ ಆಗಿದೆ. ನಿನ್ನೆ ರಾತ್ರಿ 8 ಗಂಟೆಯಿಂದ ಲಾಕ್‌ಡೌನ್ ಶುರುವಾಗಿದ್ದು, ಬೆಳಗಿನವರೆಗೂ ಕರುನಾಡು ಸ್ತಬ್ಧವಾಗಲಿದೆ.
ಲಾಕ್‌ಡೌನ್.. ಲಾಕ್‌ಡೌನ್.. ಲಾಕ್‌ಡೌನ್.. ಕೊರೊನಾ ಕೇಕೆ ಹಾಕಿದಾಗೆಲ್ಲಾ ಕೇಳಿ ಬರ್ತಿರೋ ಅಸ್ತ್ರ ಅಂದ್ರೆ ಅದೇ ಲಾಕ್‌ಡೌನ್. ನಿತ್ಯ ಎರಡು ಸಾವಿರ ಸಂಖ್ಯೆಯನ್ನೇ ಹೊತ್ತು ತರ್ತಿರೋ ಕೊರೊನಾ ಇಡೀ ಕರುನಾಡನ್ನೇ ಗಢಗಢ ಎನ್ನುವಂತೆ ಮಾಡಿ ಬಿಟ್ಟಿದೆ. ನಿತ್ಯ 30, 40, 50 ಅಂತಾ ಈಗಾಗಲೇ ಐನೂರು ಜನರ ಪ್ರಾಣ ತೆಗೆದಿರೋ ಸೋಂಕು ತನ್ನ ಬಲಿಯಾತ್ರೆ ಮುಂದುವರಿಸಿದೆ. ಸೋಂಕಿನ ಈ ಆರ್ಭಟ, ರಾಜ್ಯದಲ್ಲಿನ ಸಾವಿನ ಸರಣಿ ಇದೆಲ್ಲವಕ್ಕೆ ಬೆದರಿರೋ ಸರ್ಕಾರ ಸಂಡೇ ಲಾಕ್‌ಡೌನ್ ಅಸ್ತ್ರ ಪ್ರಯೋಗಿಸಿದೆ.
ನಿನ್ನೆ ರಾತ್ರಿ 8 ಗಂಟೆಯಿಂದ ಲಾಕ್‌ಡೌನ್ ಶುರು! ಊರಿಂದ ಬಂದವರೇ ಸೋಂಕಿತರಾಗ್ತಿದ್ದಾರೆ. ವೀಕೆಂಡ್ ಪಾರ್ಟಿಗಳಿಂದ, ವಾರಾಂತ್ಯದ ಸುತ್ತಾಟದಿಂದಲೇ ಸೋಂಕಿನ ಸುನಾಮಿಯಾಗ್ತಿದೆ . ಹೀಗಾಗಿಯೇ ದೇಶದಲ್ಲಿ ಲಾಕ್‌ಡೌನ್ ಸಡಿಲವಾಗಿದ್ರೂ ರಾಜ್ಯದಲ್ಲಿ ಸಂಡೇ ಲಾಕ್‌ಡೌನ್ ಜಾರಿಯಾಗಿತ್ತು . ಮೇ 25 ರಂದು ಭಾನುವಾರ ಇಡೀ ರಾಜ್ಯಕ್ಕೆ ಬೀಗ ಬಿದ್ದಿತ್ತು . ಕಳೆದ ವಾರ ಅಂದ್ರೆ ಜುಲೈ 5 ರಂದು ಕೂಡಾ ರಾಜ್ಯಕ್ಕೆ ರಾಜ್ಯವೇ ಸ್ತಬ್ಧವಾಗಿತ್ತು. ಇಷ್ಟಾದ್ರೂ ಸೋಂಕಿನ ಸರಪಳಿ ನಿಂತಿಲ್ಲ. ಹೀಗಾಗಿ ಇಂದು ರಾಜ್ಯ ಮತ್ತೆ ಸ್ತಬ್ಧವಾಗಿದೆ. ನಿನ್ನೆ ರಾತ್ರಿ 8 ಗಂಟೆಯಿಂದಲೇ ಕರ್ಫ್ಯೂ ಜಾರಿಯಾಗಿದ್ದು, ನಾಳೆ ಬೆಳಗಿನ ಜಾವ 5 ಗಂಟೆವರೆಗೂ ಯಾರು ಮನೆಬಿಟ್ಟು ಹೊರಬರುವಂತಿಲ್ಲ.
33 ಗಂಟೆ ಲಾಕ್‌ಡೌನ್! ಕಳೆದ ವಾರದಂತೆ ಇಂದು ಕೂಡ ಕರುನಾಡಿಗೆ ಬೀಗ ಬೀಳಲಿದೆ. ರಾತ್ರಿ 8 ಗಂಟೆಯಿಂದ ನಾಳೆ ಬೆಳಗಿನ ಜಾವ 5 ಗಂಟೆಯವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಸರ್ಕಾರ ಈಗಾಗಲೇ ರಾಜ್ಯದ ಉದ್ದಗಲಕ್ಕೂ 144 ಸೆಕ್ಷನ್ ಜಾರಿ ಮಾಡಿದ್ದು, ಕರ್ಫ್ಯೂ ಉಲ್ಲಂಘಿಸಿ ಯಾರಾದ್ರೂ ಅನಗತ್ಯವಾಗಿ ಮನೆಯಿಂದ ಹೊರಬಂದ್ರೆ ಕೇಸ್ ದಾಖಲಿಸಲಾಗುತ್ತೆ. ಇನ್ನು ಕಳೆದವಾರ ಲಾಕ್‌ಡೌನ್ ನಡುವೆ ಹೊರಗೆ ಬಂದಿದ್ದ ಹಲವರ ವಾಹನಗಳನ್ನ ಪೊಲೀಸರು ಸೀಜ್‌ಮಾಡಿದ್ದರು . ಇನ್ನು ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿರೋ ಫ್ಲೈಓವರ್, ಪ್ರಮುಖ ರಸ್ತೆ, ಅಂಡರ್ ಪಾಸ್‌ಗಳನ್ನ ಈಗಾಗಲೇ ಬಂದ್ ಮಾಡಲಾಗಿದೆ. ಇನ್ನು ಸಾರ್ವಜನಿಕ ಸಂಚಾರ ವ್ಯವಸ್ಥೆಯ ಬಸ್, ಆಟೋ, ಟ್ಯಾಕ್ಸಿ ಸೇವೆಯೂ ಇಂದು ಬಂದ್ ಆಗಿರಲಿದೆ. ಇನ್ನು ವಾರಾಂತ್ಯದ ಮೋಜು ಮಸ್ತಿಯ ಪ್ರವಾಸಿ ತಾಣಗಳು ಬಂದ್ ಇರಲಿದ್ದು, ದೇಗುಲಗಳ ಬಾಗಿಲಿಗಳಿಗೂ ಬೀಗ ಬೀಳುತ್ತೆ. ಆಸ್ಪತ್ರೆ ಸೇರಿದಂತೆ ಅಗತ್ಯ ಸೇವೆಗಳು ಎಂದಿನಂತೆ ಓಪನ್ ಆಗಿರಲಿದ್ದು, ಹೋಟೆಲ್‌ಗಳಲ್ಲಿ ಪಾರ್ಸಲ್ ವ್ಯವಸ್ಥೆ ಮಾತ್ರ ಇರುತ್ತೆ .
ಇನ್ನು ರಾಜ್ಯದಲ್ಲಿ ನಿತ್ಯ ಸುನಾಮಿಯಂತೆಯೇ ಸೋಂಕು ಬಂದಪ್ಪಳಿಸುತ್ತಿದೆ. ಹೀಗಾಗಿಯೇ ಸಂಡೇ ಲಾಕ್‌ಡೌನ್ ಆಗ್ತಿದೆ. ಆದ್ರೆ ಶನಿವಾರ ಕೂಡಾ ಲಾಕ್‌ಡೌನ್ ಆಗ್ಬೇಕು ಅನ್ನೋ ಕೂಗು ಕೇಳಿ ಬರ್ತಿದೆ . ಸ್ವತಃ ಉಪಮುಖ್ಯಮಂತ್ರಿಗಳೇ ಎರಡು ದಿನ ಲಾಕ್‌ಡೌನ್ ಆಗ್ಬೇಕು ಅಂತಿದ್ದಾರೆ .
ಒಟ್ನಲ್ಲಿ ಸೋಂಕಿನ ಆರ್ಭಟ ಹೆಚ್ಚಾದಗೆಲ್ಲಾ ಲಾಕ್‌ಡೌನ್ ಮಂತ್ರ ಜಪಿಸೋ ಸರ್ಕಾರ ಸಂಡೇ ಲಾಕ್‌ಡೌನ್ ಜಾರಿಗೆ ತಂದಿದೆ. ಮುಂದಿನ ವಾರದಿಂದ ಶನಿವಾರ, ಭಾನುವಾರ ಸೇರಿದಂತೆ ಎರಡು ದಿನ ಲಾಕ್ ಆಗ್ಬೇಕು ಅನ್ನೋ ಕೂಗು ಇದೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದು ನೋಡ್ಬೇಕು.
Published On - 7:01 am, Sun, 12 July 20