ವೃದ್ಧೆಯ ಅಂತ್ಯಕ್ರಿಯೆಯಲ್ಲಿ ನಿಯಮ ಉಲ್ಲಂಘನೆ..
[lazy-load-videos-and-sticky-control id=”uFXn9uENNt4″] ಬೆಳಗಾವಿ: ಕೊರೊನಾ ಸೋಂಕು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಈ ನಡುವೆ ಸರ್ಕಾರದ ಆದೇಶ ಮೀರಿ ಜನ ಸಾಗರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಮನೆಯಲ್ಲೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅವರ ಅಂತ್ಯಸಂಸ್ಕಾರ ಮಾಡಲಾಗಿದೆ. ನಿಯಮದ ಪ್ರಕಾರ ಅಂತ್ಯಕ್ರಿಯೆಗೆ 20ಕ್ಕೂ ಹೆಚ್ಚು ಜನ ಸೇರಬಾರದು. ಆದರೆ ಇಲ್ಲಿ ಅದ್ಯಾವುದನ್ನೂ ಲೆಕ್ಕಿಸದೆ ಜನ ಸೇರಿದ್ದಾರೆ. ಅಲ್ಲದೆ ಇವತ್ತು ರಾಜ್ಯಾದ್ಯಂತ ಸಂಡೇ ಲಾಕ್ಡೌನ್ ಮಾಡಲಾಗಿದೆ. ಈ ನಡುವೆ ಪಾಲಿಕೆ ವಾಹನದಲ್ಲೇ […]
[lazy-load-videos-and-sticky-control id=”uFXn9uENNt4″]
ಬೆಳಗಾವಿ: ಕೊರೊನಾ ಸೋಂಕು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಈ ನಡುವೆ ಸರ್ಕಾರದ ಆದೇಶ ಮೀರಿ ಜನ ಸಾಗರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಮನೆಯಲ್ಲೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅವರ ಅಂತ್ಯಸಂಸ್ಕಾರ ಮಾಡಲಾಗಿದೆ. ನಿಯಮದ ಪ್ರಕಾರ ಅಂತ್ಯಕ್ರಿಯೆಗೆ 20ಕ್ಕೂ ಹೆಚ್ಚು ಜನ ಸೇರಬಾರದು. ಆದರೆ ಇಲ್ಲಿ ಅದ್ಯಾವುದನ್ನೂ ಲೆಕ್ಕಿಸದೆ ಜನ ಸೇರಿದ್ದಾರೆ.
ಅಲ್ಲದೆ ಇವತ್ತು ರಾಜ್ಯಾದ್ಯಂತ ಸಂಡೇ ಲಾಕ್ಡೌನ್ ಮಾಡಲಾಗಿದೆ. ಈ ನಡುವೆ ಪಾಲಿಕೆ ವಾಹನದಲ್ಲೇ 20ಕ್ಕೂ ಹೆಚ್ಚು ಜನರು ತೆರಳಿ ವೃದ್ಧೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ವೇಳೆ ಜನ ಅಂತರ ಕಾಯ್ದುಕೊಳ್ಳುವುದನ್ನೂ ಮರೆತಿದ್ದಾರೆ. ಬೈಕ್ಗಳ ಮೂಲಕ ಸಂಬಂಧಿಕರು, ಸ್ಥಳೀಯರು ಸದಾಶಿವ ನಗರ ಸ್ಮಶಾನಕ್ಕೆ ಬಂದಿದ್ದಾರೆ. ಪೊಲೀಸರ ಮುಂದೆಯೇ ಹತ್ತಾರು ಬೈಕ್ಗಳು, ನೂರಾರು ಜನ ಸೇರಿದ್ರೂ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.
Published On - 1:02 pm, Sun, 12 July 20