ಗ್ರಾಹಕರು ಬರುತ್ತಿಲ್ಲ.. ನಷ್ಟ ಭರಿಸಲಾಗದೆ ಮುಚ್ಚುತ್ತಿರುವ ಹೋಟೆಲ್, ರೆಸ್ಟೋರೆಂಟ್ಸ್
[lazy-load-videos-and-sticky-control id=”md_fmq87AXg”] ಬೆಂಗಳೂರು:ಕೊರೊನಾ ಜಗತ್ತಿಗೆ ಕಾಲಿರಿಸಿದ್ದೆ ತಡ ಪ್ರಪಂಚದ ಪ್ರತಿಯೊಂದು ಉದ್ಯಮವು ತಮಗಾಗುತ್ತಿರುವ ನಷ್ಟ ಬರಿಸಲಾಗದೆ ತಮ್ಮ ಉದ್ಯಮಕ್ಕೆ ಇತಿಶ್ರೀ ಆಡುತ್ತಿವೆ.ಇದರಿಂದ ಲೆಕ್ಕವಿಲ್ಲದಷ್ಟು ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದು ತಮ್ಮನ್ನ ನಂಬಿದವರೊಂದಿಗೆ ಬೀದಿಗೆ ಬಂದು ನಿಂತಿದ್ದಾರೆ. ಆದರೆ ಈಗ ರಾಜ್ಯದಲ್ಲಿ ಲಾಕ್‌ಡೌನ್ ಹಿನ್ನೆಲೆಯಿಂದ ಹೋಟೆಲ್ ಮಾಲೀಕರು ಬಾರಿ ನಷ್ಟದಲ್ಲಿದ್ದಾರೆ. ಹೋಟೆಲ್ಗಳಿಗೆ ಲಾಕ್‌ಡೌನ್ ಸಡಿಲಗೊಳಿಸಿದ್ದರು ಸಹ ಗ್ರಾಹಕರು ಹೊಟೇಲ್ ಮತ್ತು ರೆಸ್ಟೋರೆಂಟ್ಗಳತ್ತ ಮುಖ ಮಾಡುತಿಲ್ಲ ಇದರಿಂದ ಬೆಂಗಳೂರಿನ ಶೇ.60 ರಷ್ಟು ರೆಸ್ಟೋರೆಂಟ್ಗಳು ಬಾಗಿಲು ಮುಚ್ಚಿವೆ. ಸಂಪೂರ್ಣ ನಷ್ಟದಲ್ಲಿರುವ ಹೊಟೇಲ್ ಮಾಲೀಕರು […]
[lazy-load-videos-and-sticky-control id=”md_fmq87AXg”]
ಬೆಂಗಳೂರು:ಕೊರೊನಾ ಜಗತ್ತಿಗೆ ಕಾಲಿರಿಸಿದ್ದೆ ತಡ ಪ್ರಪಂಚದ ಪ್ರತಿಯೊಂದು ಉದ್ಯಮವು ತಮಗಾಗುತ್ತಿರುವ ನಷ್ಟ ಬರಿಸಲಾಗದೆ ತಮ್ಮ ಉದ್ಯಮಕ್ಕೆ ಇತಿಶ್ರೀ ಆಡುತ್ತಿವೆ.ಇದರಿಂದ ಲೆಕ್ಕವಿಲ್ಲದಷ್ಟು ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದು ತಮ್ಮನ್ನ ನಂಬಿದವರೊಂದಿಗೆ ಬೀದಿಗೆ ಬಂದು ನಿಂತಿದ್ದಾರೆ.
ಆದರೆ ಈಗ ರಾಜ್ಯದಲ್ಲಿ ಲಾಕ್‌ಡೌನ್ ಹಿನ್ನೆಲೆಯಿಂದ ಹೋಟೆಲ್ ಮಾಲೀಕರು ಬಾರಿ ನಷ್ಟದಲ್ಲಿದ್ದಾರೆ. ಹೋಟೆಲ್ಗಳಿಗೆ ಲಾಕ್‌ಡೌನ್ ಸಡಿಲಗೊಳಿಸಿದ್ದರು ಸಹ ಗ್ರಾಹಕರು ಹೊಟೇಲ್ ಮತ್ತು ರೆಸ್ಟೋರೆಂಟ್ಗಳತ್ತ ಮುಖ ಮಾಡುತಿಲ್ಲ ಇದರಿಂದ ಬೆಂಗಳೂರಿನ ಶೇ.60 ರಷ್ಟು ರೆಸ್ಟೋರೆಂಟ್ಗಳು ಬಾಗಿಲು ಮುಚ್ಚಿವೆ.
ಸಂಪೂರ್ಣ ನಷ್ಟದಲ್ಲಿರುವ ಹೊಟೇಲ್ ಮಾಲೀಕರು ಹೊಟೇಲ್ ಸಿಬ್ಬಂದಿಗಳಿಗೂ ಸಂಬಳ ಕೊಡಲಾಗದೆ ಪರಿತಪಿಸುವಂತ್ತಾಗಿದೆ. ಇದರಿಂದ ಹೊರ ಬರಲು ಮಾಲೀಕರು ಹೊಟೇಲ್ಗಳನ್ನು ಅರ್ಧದಷ್ಡು ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ಧಾರೆ.ಆದರೆ ಯಾರು ಸಹ ಇಂಥ ಪರಿಸ್ಥಿತಿಯಲ್ಲಿ ದೊಡ್ಡ ಮೊತ್ತದ ಹಣ ಕೊಟ್ಟು ರೆಸ್ಟೋರೆಂಟ್ ಖರೀದಿಗೆ ಮುಂದಾಗ್ತಿಲ್ಲ.
ಇದು ಸಾಲಾದೆಂಬಂತೆ ರಾಜ್ಯ ಸರ್ಕಾರ ಈಗ ಇನ್ನೊಂದು ವಾರಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಿದ್ದು, ಈಗಾಗಲೇ ತೀವ್ರ ನಷ್ಟದಲ್ಲಿರುವ ಹೊಟೇಲ್ ಮಾಲೀಕರಿಗೆ ಲಾಕ್‌ಡೌನ್ ಘೋಷಣೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
Published On - 12:16 pm, Sun, 12 July 20