SSLC Exam 2020: ಮೊದಲ ದಿನವೇ ಚೀಟಿಂಗ್​, ಗೋಡೆ ಹಾರಿ ಬಂದು ನಕಲು ಚೀಟಿ ಹಂಚಿಕೆ!

|

Updated on: Jun 25, 2020 | 1:19 PM

ಕಲಬುರಗಿ: SSLC, PUC ಪರೀಕ್ಷೆಗಳೆಂದರೆ ಕಾಪಿ ಚೀಟ್​ ಮಾಡುವುದು, ಡಿಬಾರ್​ ಆಗುವ ಸುದ್ದಿಗಳು ಬಹುತೇಕ ಸರ್ವೇಸಾಮಾನ್ಯ. ಆದರೆ, ಈ ಬಾರಿ ಕೋವಿಡ್​ ಇಂಥ ಕಾಪಿ, ಮಾಲ್​ ಪ್ರಾಕ್ಟೀಸ್​ಗಳಿಗೆ ಕಡಿವಾಣ ಹಾಕಿದೆ. ಸಾಮಾಜಿಕ ಅಂತರ ಮತ್ತು ವಿದ್ಯಾರ್ಥಿಗಳ ಆರೋಗ್ಯದ ಮೇಲಿನ ತೀವ್ರ ನಿಗಾ ವಹಿಸುವಿಕೆಯಿಂದಾಗಿ, ಇದರ ಕಣ್ತಪ್ಪಿಸಿ ಕಾಪಿ ಮಾಡುವುದು ದುರ್ಭರವಾಗಿದೆ. ಆದರೆ, ನಮ್ಮ ಕೆಲ ವಿದ್ಯಾರ್ಥಿಗಳು ಇದಕ್ಕೆಲ್ಲ ಅಂಜುವವರಲ್ಲ, ಅಳುಕುವವರಲ್ಲ. ಶಾಲಾ ಕಾಂಪೌಂಡ್​ ಎಷ್ಟೇ ಎತ್ತರವಿದ್ರೂ ಜಂಪ್​ ಹೊಡೆದು ಪರೀಕ್ಷಾ ಕೇಂದ್ರವನ್ನ ತಲುಪಬಲ್ಲರು. ಕಲಬುರಗಿಯಲ್ಲಿ ಮೊದಲ ದಿನವೇ […]

SSLC Exam 2020: ಮೊದಲ ದಿನವೇ ಚೀಟಿಂಗ್​, ಗೋಡೆ ಹಾರಿ ಬಂದು ನಕಲು ಚೀಟಿ ಹಂಚಿಕೆ!
Follow us on

ಕಲಬುರಗಿ: SSLC, PUC ಪರೀಕ್ಷೆಗಳೆಂದರೆ ಕಾಪಿ ಚೀಟ್​ ಮಾಡುವುದು, ಡಿಬಾರ್​ ಆಗುವ ಸುದ್ದಿಗಳು ಬಹುತೇಕ ಸರ್ವೇಸಾಮಾನ್ಯ. ಆದರೆ, ಈ ಬಾರಿ ಕೋವಿಡ್​ ಇಂಥ ಕಾಪಿ, ಮಾಲ್​ ಪ್ರಾಕ್ಟೀಸ್​ಗಳಿಗೆ ಕಡಿವಾಣ ಹಾಕಿದೆ. ಸಾಮಾಜಿಕ ಅಂತರ ಮತ್ತು ವಿದ್ಯಾರ್ಥಿಗಳ ಆರೋಗ್ಯದ ಮೇಲಿನ ತೀವ್ರ ನಿಗಾ ವಹಿಸುವಿಕೆಯಿಂದಾಗಿ, ಇದರ ಕಣ್ತಪ್ಪಿಸಿ ಕಾಪಿ ಮಾಡುವುದು ದುರ್ಭರವಾಗಿದೆ.

ಆದರೆ, ನಮ್ಮ ಕೆಲ ವಿದ್ಯಾರ್ಥಿಗಳು ಇದಕ್ಕೆಲ್ಲ ಅಂಜುವವರಲ್ಲ, ಅಳುಕುವವರಲ್ಲ. ಶಾಲಾ ಕಾಂಪೌಂಡ್​ ಎಷ್ಟೇ ಎತ್ತರವಿದ್ರೂ ಜಂಪ್​ ಹೊಡೆದು ಪರೀಕ್ಷಾ ಕೇಂದ್ರವನ್ನ ತಲುಪಬಲ್ಲರು. ಕಲಬುರಗಿಯಲ್ಲಿ ಮೊದಲ ದಿನವೇ ಇಂಥ ಪ್ರಸಂಗ ಕಂಡುಬಂದಿದೆ. SSLC ಪರೀಕ್ಷೆಯ ಮೊದಲ ದಿನವೇ ನಕಲು ಚೀಟಿ ಹಂಚಿರುವ ಪ್ರಕರಣ ಜಿಲ್ಲೆಯ ಹಳೇ ಜೇವರ್ಗಿ ರಸ್ತೆಯಲ್ಲಿರೋ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

ರಾಜಾರೋಷವಾಗಿ ಗೋಡೆ ಹಾರಿ ಚೀಟಿ ಹಂಚಿಕೆ
ಪರೀಕ್ಷೆ ಬರೆಯುತ್ತಿದ್ದ ಸ್ನೇಹಿತರಿಗಾಗಿ ಕೆಲವು ಯುವಕರು ಶಾಲೆಯ ಗೋಡೆ ಹಾರಿ ಚೀಟಿ ಕೊಟ್ಟು ಬರುತ್ತಿರುವ ದೃಶ್ಯ ಇಲ್ಲಿ ಕಂಡು ಬಂತು. ಹೊರಗಡೆ ಯಾವುದೇ ಪೊಲೀಸರಿಲ್ಲದ್ದನ್ನು ಗಮನಿಸಿದ ಯುವಕರು, ನಂತರ ರಾಜಾರೋಷವಾಗಿ ಗೋಡೆ ದಾಟಲು ಶುರು ಮಾಡಿದರು. ಈ ಬಗ್ಗೆ ಕೇಂದ್ರದ ಸಿಬ್ಬಂದಿ ತಲೆಕೆಡಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.

Published On - 1:08 pm, Thu, 25 June 20